ವಿದ್ಯುತ್ ನಿಗಮಗಳನ್ನು ಖಾಸಗಿ ಕಂಪನಿಗಳ ಒಡೆತನಕ್ಕೆ ಕೊಡುವ ಹುನ್ನಾರ ಖಂಡಿಸಿ ಪ್ರತಿಭಟನೆ

ವಿದ್ಯುತ್ ನಿಗಮಗಳನ್ನು ಖಾಸಗಿ ಕಂಪನಿಗಳ ಒಡೆತನಕ್ಕೆ ಕೊಡುವ ಹುನ್ನಾರ ಖಂಡಿಸಿ ಪ್ರತಿಭಟನೆ Protest condemns plans to privatize power corporations

ಲೋಕದರ್ಶನ ವರದಿ

ಜಮಖಂಡಿ 12: ದೇಶದಲ್ಲಿ ಜಿ.ಡಿ.ಪಿಯನ್ನು ಹೆಚ್ಚಿಸಲು ವಿದ್ಯುತ್ ಮೂಲ ಕಾರಣವಾಗುತ್ತದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಸರಬರಾಜು ಮಾಡುತ್ತಿರುವದು ಕರ್ನಾಟಕ ಇಂತಹ ಲಾಭದಾಯಕವಾದ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ನಿಗಮಗಳನ್ನು ಖಾಸಗಿ ಕಂಪನಿಗಳಿಗೆ ನೀಡುತ್ತಿರುವ ಹುನ್ನಾರವನ್ನು ತಡೆಗಟ್ಟಬೇಕಾಗಿದೆ ಎಂದು ಸಹಾಯಕ ಅಭಿಯಂತರ ಬಿ.ಕೆ ಹಿಪ್ಪರಗಿ ಆಗ್ರಹಿಸಿದರು. 

ನಗರದ ಹೆಸ್ಕಾಂ ಕಛೇರಿಯ ಆವರಣದಲ್ಲಿ ವಿದ್ಯುತ್ ನಿಗಮಗಳನ್ನು ಖಾಸಗಿ ಕಂಪನಿಗಳ ಬಂಡವಾಳ ಶಾಹಿಗಳ ಒಡೆತನಕ್ಕೆ ಕೊಡುವ ಸರ್ಕಾರದ ಹುನ್ನಾರದ ವಿರುದ್ಧ ಹೆಸ್ಕಾಂ ಸಿಬ್ಬಂದಿಗಳು, ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಸೇರಿದಂತೆ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ದ್ವಾರಸಭೆಯ ಮೂಲಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. 

ಖಾಸಗಿ ಕಂಪನಿಯವರು ಲಾಭದಾಯಕಕ್ಕೆ ಮಾತ್ರ ಹೆಚ್ಚು ಒತ್ತು ಕೊಡುತ್ತಾರೆ. ರೈತರಿಗೆ, ಬಡವರಿಗೆ ನೀಡುವ ಉಚಿತ ವಿದ್ಯುತ್ ಸರಬರಾಜನ್ನು ನಿಲ್ಲಿಸುತ್ತಾರೆ. ಇದರಿಂದ ಬಹಳಷ್ಟು ಜನರಿಗೆ ಹಾನಿಯಾಗಲಿದೆ ಎಂದರು.  ಅಭಿಯಂತರ ದಯಾನಂದ ಮುಳ್ಳೂರ ಮಾತನಾಡಿ, ಬಂಡವಾಳ ಶಾಹಿಗಳ ಒಡೆತನಕ್ಕೆ ಒಳಪಡುವುದನ್ನು ತಡೆಗಟ್ಟುವಲ್ಲಿ ಪ್ರತಿಯೊಂದು ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಈ ನಿಗಮಗಳು ಖಾಸಗಿ ಒಡೆತನಕ್ಕೆ ಹೋದರೆ ಯಾವುದೇ ನೇಮಕಾತಿ ಉದ್ಯೋಗವನ್ನು ಕಲ್ಪಿಸಲಾಗುವುದಿಲ್ಲ. ಮತ್ತು ಕೇವಲ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಯಾವುದೇ ಸೌಲಭ್ಯ ಸುರಕ್ಷತೆ ಇರುವುದಿಲ್ಲ ಎಂದರು.  

ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಚಂದ್ರಗುಪ್ತ ಬೆಳಗಲಿ ಮಾತನಾಡಿ. ಯಾರಿಗೆ ಲಾಭ ಹಾನಿಯ ಬಗ್ಗೆ ಯೋಚನೆ ಮಾಡದೇ ಈ ಆದೇಶ ಮಾಡಲು ಹೊರಟಿರುವದು ಸಮಂಜಸವಲ್ಲ.ಸೇವಾ ಕೇಂದ್ರವನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡಲು ಹೊರಟಿರುವ ಸರ್ಕಾರದ ದೋರಣೆಯನ್ನು ಖಂಡಿಸುತ್ತೇವೆ. ರಾಜ್ಯದಲ್ಲಿ 15 ಸಾವಿರ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಕೋಟ್ಯಾಂತರ ಜನ ಉದ್ಯೋಗವಿಲ್ಲದೆ ಇದರಿಂದ ಬೀದಿಗೆ ಬರುತ್ತಾರೆ. ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರವಾಗಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಏಚ್ಚರಿಕೆ ನೀಡಿದರು. ರೈತ ಯುವ ಮುಖಂಡ ಸುರೇಶ ಹಂಚಿನಾಳ, ರಾಜು ನಧಾಪ, ಪರಶುರಾಮ ಗುದಗಿ, ಎಚ್‌.ಬಿ ನದಾಫ, ಬಿ.ಎಸ್ ನೀಲಗುಂದ, ಸಿದ್ದನಗೌಡ ಪಾಟೀಲ, ಧರೇಪ್ಪ ದಾನಗೌಡ, ಮಾತನಾಡಿದರು, 

ಕಾರ್ಯನಿರ್ವಾಹಕ  ಅಭಿಯಂತರ ಎಮ್‌.ಎಮ್ ಚನ್ನಗೊಂಡ ಅಭಿಯಂತರರಾದ ವಿಶಾಲ ದರೇಪ್ಪಗೋಳ, ಸಂಜಯ ಆಲಬಾಳ, ಕೇಂದ್ರ ಸಮಿತಿಯ ಅಧ್ಯಕ್ಷ ಎಸ್‌.ಎಸ್ ಗಡ್ಡಿ, ಪ್ರಭುಗೌಡ ದೇಸಾಯಿ(ಕಲ್ಕೇರಿ), ನೌಕರರ ಸಂಘದ ಅಧ್ಯಕ್ಷ ಎಮ್‌.ಎಲ್ ಸೊನ್ನದ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಂಗಣ್ಣ ಬೀಳಿಎಲಿ, ನೌಕರರ ಪತ್ತಿನ ಸಂಘದ ಕಾರ್ಯದರ್ಶಿ ಜೆ.ಸಿ ರಾಥೋಡ, ಆರ್‌.ಎಸ್ ಬಿರಾದಾರ, ಆರ್‌.ಎಸ್ ಬಿರಾದಾರ, ಪಿಂಚಣಿದಾರರ ಸಂಘದ ಅಧ್ಯಕ್ಷ ಎಮ್‌.ಎಸ್ ಮಾಸ್ತಿ, ಶ್ರೀದೇವಿ ಮರನೂರ, ಹರ್ಷಾ ಕೊಷ್ಟಿ, ಅಕ್ಕಮಹಾದೇವಿ ಪಾಟೀಲ ಸೇರಿದಂತೆ ಅನೇಕರು ಇದ್ದರು.