ಕರ್ನಾಟಕ ಬ್ಯಾಂಕ್ 986ನೇ ಶಾಖೆ ಉದ್ಘಾಟನೆ

    ಕರ್ನಾಟಕ ಬ್ಯಾಂಕ್ 986ನೇ ಶಾಖೆ ಉದ್ಘಾಟನೆ Karnataka Bank 986th branch inaugurated

ಲೋಕದರ್ಶನ ವರದಿ 

ವಿಜಯಪುರ   12: ಕರ್ನಾಟಕ ಬ್ಯಾಂಕಿನ 986ನೇ ಶಾಖೆಯ ಉದ್ಘಾಟನಾ ಸಮಾರಂಭದ ಈ ಶುಭ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರಂಭಕ್ಕೆ ಮೆರುಗು ನೀಡಿದ ಶರಣಪ್ಪ ಎಸ್‌. ಆಲೂರ ಅವರಿಗೆ ನಮ್ಮ ವಿಶೇಷ ಧನ್ಯವಾದಗಳು. ನಮ್ಮ ಬ್ಯಾಂಕಿನ ಜನರಲ್ ಮ್ಯಾನೇಜರ್ ನಾಗರಾಜ ಉಪಾಧ್ಯಾಯ ಅವರು ಉಪಸ್ಥಿತರಿದ್ದು ಬ್ಯಾಂಕಿನ ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕರಾದ ಇರಣ್ಣ ನಾಗರಾಳ, ಕಲಬುರಗಿ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕರಾದ ಮಲ್ಲನಗೌಡ ಬಿರಾದಾರ ಅವರಿಗೆ ಧನ್ಯವಾದಗಳು ಚೀಪ್ ಮ್ಯಾನೇಜರ್ ಶಶಿ ಕಿರಣ, ಕ್ಲಸ್ಟರ್ ಹೆಡ್ ಪವನಸರ್ ಹಾಗೂ ನಮ್ಮ ಶಾಖೆಯ ವ್ಯವಸ್ಥಾಪಕರಾದ ಲಕ್ಷ್ಮಣ ಹಳ್ಳೂರು.

ಈ ಶಾಖೆಯನ್ನು ಸ್ಥಾಪಿಸಲು ಹಗಲಿರುಳು ಶ್ರಮಿಸಿದ ನಮ್ಮೆಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಆತ್ಮೀಯ ಅಭಿನಂದನೆಗಳು. ನಮ್ಮ ಈ ಹೊಸ ಪ್ರಯತ್ನಕ್ಕೆ ಸಾಥ್ ನೀಡಲು ಆಗಮಿಸಿರುವ ಮಾಧ್ಯಮ ಮಿತ್ರರಿಗೆ, ನಮ್ಮ ಪ್ರೀತಿಯ ಗ್ರಾಹಕ ಬಂಧುಗಳಿಗೆ ಹಾಗೂ ಜುಮನಾಳ ಗ್ರಾಮದ ಎಲ್ಲಾ ಗೌರವಾನ್ವಿತ ನಾಗರಿಕರ ಲಕ್ಷ್ಮಣ ಆರ್‌. ಹಳ್ಳೂರ ಶಾಖಾ ವ್ಯವಸ್ಥಾಪಕರು ಜುಮನಾಳ, ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಹಾಗೂ ಹಾಲಿ ನಿರ್ದೇಶಕರಾದ ಯುವ ಧುರೀಣರಾದ ಹರೀಶಗೌಡ ಎಸ್‌.ಪಾಟೀಲ ಭಾಗವಹಿಸಿದ್ದರು. ರವಿ.ಎಸ್‌. ಬಾಗಲಕೋಟ, ವಿರೇಶ ಎಸ್‌. ಕಸಬೇಗೌಡರ ಮುಂತಾದವರು ಇದ್ದರು.