ತಂಬಾಕು ಜಾಹೀರಾತು ಸ್ಟಿಕ್ಕರ್ ಕಿತ್ತೆಸೆದು ಕರವೇ ಪ್ರತಿಭಟನೆ
Protest by removing tobacco advertising stickers
ದೇವರಹಿಪ್ಪರಗಿ 21: ಗುಟ್ಕಾ ಜಾಹಿರಾತುಗಳ ವಿರುದ್ಧ ಕರವೇ ಸಂಘಟನೆ ಸಿಡಿದೆದ್ದಿದ್ದಾರೆ. ಕಲ್ಯಾಣ ಕರ್ನಾಟಕ, ಕೆಎಸ್ಆರಿ್ಟಸಿ ಬಸ್‌ಗಳ ಮೇಲೆ ಹಾಕಿದ್ದ ಗುಟ್ಕಾ ಜಾಹೀರಾತುಗಳ ಪೋಸ್ಟರನ್ನು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ) ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ರಹೀಮಾನ್ ಕನಕಲ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಕಿತ್ತೆಸೆಯುತ್ತಿದ್ದಾರೆ. ಬಸ್‌ಗಳ ಮೇಲೆ ಅಂಟಿಸಿದ್ದ ತಂಬಾಕು ಜಾಹಿರಾತುಗಳನ್ನ ತೆಗೆದು ಅವುಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರದಂದು ವೀರ ಗಣಾಚಾರಿ ಮಡಿವಾಳ ಮಾಚಿದೇವರ ಬಸ್ ನಿಲ್ದಾಣದಲ್ಲಿ ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನ ಹರಿದು ಹಾಕಿದ್ದಾರೆ. ವಿಮಲ್, ಆರ್‌ಎಂಡಿ ಸೇರಿ ತಂಬಾಕು ಉತ್ಪನ್ನಗಳ ಜಾಹಿರಾತು ಪೋಸ್ಟರ್‌ಗಳನ್ನ ಸಾರಿಗೆ ಬಸ್‌ಗಳ ಮೇಲೆ ಅಂಟಿಸಿರೋದನ್ನ ತೆರವು ಮಾಡಬೇಕು. ಇಲ್ಲದಿದ್ದರೆ ಕಂಡ ಕಂಡಲ್ಲಿ ಬಸ್‌ಗಳನ್ನ ನಿಲ್ಲಿಸಿ ಜಾಹಿರಾತುಗಳಿಗೆ ಮಸಿ ಬಳಿಯುತ್ತೇವೆ ಅಂತ ಎಚ್ಚರಿಕೆ ನೀಡಿ,ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರೇ ಆದಾಯದ ಆಶೆ ಬಿಟ್ಟು,ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿ ಕಾಟಾಚಾರಕ್ಕೆ ಆದೇಶ ಹೊರಡಿಸಿದರೆ ನಡಿಯಲ್ಲ ಕಾರ್ಯರೂಪಕ್ಕೆ ತರಬೇಕು.ತಿಂಗಳಾದರು ಅಧಿಕಾರಿಗಳು ಜಾಹೀರಾತು ತೆರವು ಮಾಡಿಲ್ಲ ಎಂಬುದು ವಿಪರ್ಯಾಸವೇ ಸರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ನಾಗೇಶ ಕಮತಗಿ, ಮುಖಂಡರುಗಳಾದ ಸಂತೋಷ ರಾಠೋಡ, ಅಶೋಕ ಗೊಲ್ಲರ, ಹಸನಸಾಬ ಬಾಗವಾನ, ದೀಲೀಪ ದೊಡ್ಡಮನಿ ಸೇರಿದಂತೆ ಹಲವಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 