ಕಾಲುವೆಗೆ ನೀರು ಹರಿಸದ ಕಾರಣ ಅಡ್ಡಲಾಗಿ ಮಲಗಿ ಪ್ರತಿಭಟನೆ
Protest by lying cross-legged because water was not being pumped into the canal
ಮಾಂಜರಿ 16 : ಚಿಕ್ಕೋಡಿ ತಾಲ್ಲೂಕಿನ ಡೊಣವಾಡ ಗ್ರಾಮದ ಮಹಾಂತ ನಗರ ಸೇರಿ ವಿವಿಧ ತೋಟದ ವಸತಿ ಪ್ರದೇಶದ ಜನರು ಶುಕ್ರವಾರ ನೀರಾವರಿ ಕಾಲುವೆಯಲ್ಲೇ ಅಡ್ಡಲಾಗಿ ಮಲಗಿ, ಪ್ರತಿಭಟನೆ ಮಾಡಿದರು. ’ಕೊಟಬಾಗಿ ಏತ ನೀರಾವರಿಯ ಕಾಲುವೆಗೆ ನೀರು ಹರಿಸದ ಕಾರಣ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ. ಕೊನೆಯ ಭಾಗದವರೆಗೆ ನೀರು ಹರಿಸಿ’ ಎಂದು ಆಗ್ರಹಿಸಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರ್ವಹಣೆ ಆಗುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ 178.62 ಕ್ಯೂಸೆಕ್ ನೀರು ಹರಿಯಬೇಕಿತ್ತು ಎಂದು ಪ್ರತಿಪಾದಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತೆರವು ಕಾಲುವೆಯ ಮಾಡಲಾಗಿದೆ. ಆದರೆ, ಅಧಿಕಾರಿಗಳು ನೀರು ಬಿಡುಗಡೆಗೆ ಮೀನ-ಮೇಷತೋರುತ್ತಿದ್ದಾರೆ’ ಎಂದು ರೈತ ಮುಖಂಡ ರಾಚಪ್ಪ ಶಿವಾಪೂರೆ ಆರೋಪಿಸಿದರು.
’ಕೆಲವೆಡೆ ಕಾಲುವೆ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಕಾಲುವೆ ಕೊನೆವರೆಗೆ ನೀರು ಹರಿಯುತ್ತಿಲ್ಲ. ರೈತರು ನೀರಿಲ್ಲದೆಬೆಳೆಯನ್ನು ಉಳಿಸಿಕೊಳ್ಳುವುದು ಹೇಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ’ ಎಂದು ರೈತ ಬಾಬುಮಗದುಮ್ಮ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 