ಸುಜಲಾನ್ ಕಂಪನಿಯಿಂದ ಕಾಮರ್ಿಕರ ವಜಾಖಂಡಿಸಿ ಪ್ರತಿಭಟನೆ


ಲೋಕದರ್ಶನ ವರದಿ

ಹೂವಿನಹಡಗಲಿ25 : ತಾಲೂಕನ ಕೆ.ಅಯ್ಯನಹಳ್ಳಿ, ಗುಜನೂರು, ನಾಗತಿಬಸಾಪುರಗ್ರಾಮಗಳ ಗುಡ್ಡಪ್ರದೇಶದಲ್ಲಿ ಸುಲಜಾನ್ ಕಂಪನಿವತಿಯಿಂದ ನಿಮರ್ಿಸಲಾದ ಪವನ ವಿದ್ಯುತ್ ಸ್ಥಾವರಗಳಲ್ಲಿ ಸೆಕ್ಯೂರಿಟಿಗಾಡ್ರ್ಸಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 19 ಜನರನ್ನು ಕೆಲಸದಿಂದ ಏಕಾಏಕಿ ವಜಾಗೊಳಿಸಿವುದರ ವಿರುದ್ಧ ಎ.ಐ.ಟಿ.ಯು.ಸಿ. ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎ.ಐ.ಟಿ.ಯು.ಸಿ. ತಾಲೂಕು ಸಂಚಾಲಕ ಹಲಗಿ ಸುರೇಶ ಮಾತನಾಡಿ ಅತ್ಯಂತ ಕಡಿಮೆ ವೇತನದಲ್ಲಿ ಸುಮಾರು 12 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದ 19 ಜನರನ್ನು ಏಕಾಏಕಿಯಾಗಿ ಕೆಲಸದಿಂದ ವಜಾಗೊಳಿಸಿರುವುದು ಖಂಡನೀಯವಾಗಿದ್ದು, ಅವರ ಕುಟುಂಬಗಳು ಬೀದಿಗೆ ಬರಲು ಸುಜಲಾನ ಕಂಪನಿ ಕಾರಣವಾಗಿದೆ ಎಂದರು.

ದಿನದ 12 ಗಂಟೆಗಳ ನಿರಂತರ ದುಡಿಸಿಕೊಂಡು, ಮಳೆ, ಛಳಿ ಎನ್ನದೇ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ, ಸುಜಲಾನ್ ಕಂಪನಿಯವರು ನೌಕರರಿಗೆ ಯಾವುದೇ ರೀತಿಯ ಭದ್ರತೆಗಳನ್ನು ನೀಡದೇ ದುಡಿಸಿಕೊಂಡು ಈಗ ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದು ದ್ರೋಹದ ಕೆಲಸವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೆಲಸದಿಂದ ವಜಾಗೊಳಿಸಿದವರನ್ನು ಈ ಕೂಡಲೇ ಕೆಲಸಕ್ಕೆ ಮರಳಿ ಪಡೆದು ಕಾಮರ್ಿಕರಿಗೆ ಸೂಕ್ತ ಭದ್ರತೆ ಒದಗಿಸುವುದರ ಮೂಲಕ ನೌಕರರಿಗೆ ಸಿಗುವ ಪಿ.ಎಫ್, ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು. 

ಒಂದು ವೇಳೆ ನಿರಂತರ 12 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಸದರಿ ನೌಕರರನ್ನು ಮರು ನೇಮಕ ಮಾಡಿಕೊಳ್ಳದಿದ್ದರೆ ಎ.ಐ.ಟಿ.ಯು.ಸಿ. ನೇತೃತ್ವದಲ್ಲಿ ಕಾಮರ್ಿಕ ಕುಟುಂಬಗಳ ಸದಸ್ಯರ ಸಮೇತ ಉಗ್ರ ಹೋರಾಟಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 

ನಂತರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಸಂದರ್ಭದಲ್ಲಿ ಸೆಕ್ಯೂರಿಟಿಗಾರ್ಡಗಳಾದ ಎಸ್.ದೇವಪ್ಪ, ಗೋಣಿಸ್ವಾಮಿ, ಎಂ.ಚನ್ನಪ್ಪ, ಗಿರಿಯಪ್ಪ, ದೇವೇಂದ್ರನಾಯ್ಕ, ವೀರ್ಯಾನಾಯ್ಕ, ಮಂಜುನಾಥ, ಎಲ್.ಭೀಮಾನಾಯ್ಕ, ಮೇಘನಾಯ್ಕ, ಯಂಕ್ಯಾನಾಯ್ಕ, ಮಲ್ಯಾನಾಯ್ಕ, ಕೋಟೆಪ್ಪ, ಹನುಮಂತಪ್ಪ, ಎಲ್.ಮಲ್ಲಿಕಾಜರ್ುನ, ಪ್ರಭು, ಶಿವಕುಮಾರ್, ಬಿನಿಂಗಪ್ಪ, ನಾಗಪ್ಪ ಮತ್ತು ಮಲ್ಲಪ್ಪ ಇದ್ದರು.