ಗ್ರಾಪಂ ಎದುರಿಗೆ ಜಾನುವಾರುಗಳನ್ನು ತಂದು ಪ್ರತಿಭಟನೆ
Protest by bringing cattle in front of the village council
ಸಂಬರಗಿ, 16 : ಸಂಬರಗಿ ಗ್ರಾಮ ಪಂಚಾಯತ ಅಧಿಕಾರಿ ಬೇಜವಾಗ್ದಾರಿಯಿಂದ ಬಡ ರೈತರು ಜಾನುವಾರುಗಳಿಗೆ ಆಶ್ರಯಕ್ಕಾಗಿ ಹಾಕಿದ್ದ ಶೆಡ್ಡಿನ ಬಿಲ್ ಪಾವತಿಸಲು ವಿಳಂಬವಾಗಿದ್ದ ಕಾರಣ ಗ್ರಾಮದ ಗಣ್ಯರಾದ ತುಳಸಿರಾಮ ನಾಟೆಕಾರ ಇವರ ನೆತೃತ್ವದಲ್ಲಿ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಜಾನುವಾರುಗಳನ್ನು ತಂದು ಕಟ್ಟಿ ಪ್ರತಿಭಟಿಸಿದರು.
25 ಬಡ ರೈತ ಫಲಾನುಭವಿಗಳು ಜಾನುವಾರುಗಳ ಆಶ್ರಯಕ್ಕೆ ಹಾಕಿದ್ದ ಶೇಡ್ಡಿನ ಕೆಲಸ ಮುಕ್ತಾಯಗೊಂಡರು ಸಹ ಅದರ ಬಿಲ್ ಪಾವತಿಸಲು ಪಂಚಾಯತಿ ಅಧಿಕಾರಿಗಳು ಹಿಂದೆಟು ಹಾಕುತ್ತಿದ್ದಾರೆ. 15 ದಿನಗಳು ಕಳೆದರು ಸಹ ಬಿಲ್ ಪಾವತಿಯಾಗಿಲ್ಲ. 25 ಫಲಾನುಭವಿಗಳು ಸೇರಿ ಗ್ರಾಮ ಪಂಚಾಯತಿ ಎದುರಿಗೆ ಜಾನುವಾರುಗಳನ್ನು ತಂದು ಪ್ರತಿಭಟನೆ ಮಾಡಿದರು. ಮೂರು ಗಂಟೆಗಳ ಕಾಲ ಜಾನುವಾರುಗಳು ಗ್ರಾಮ ಪಂಚಾಯತಿಯ ಸಭಾಭವನದಲ್ಲಿ ಕಟ್ಟಿ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ತಾಲೂಕು ಪಂಚಾಯತಿ ಅಧಿಕಾರಿಯಾದ ಶಿವಾನಂದ ಕಲ್ಲಾಪೂರ ಇವರು ಭೇಟಿ ನೀಡಿ ಪ್ರತಿಭಟನಾ ಕಾರ್ಯಕ್ಕೆ ಶೀಘ್ರದಲ್ಲಿ ಬಿಲ್ ಪಾವತಿ ಮಾಡಲಾಗುವುದು ಎಂದು ಹೇಳಿದ ನಂತರ ಪ್ರತಿಭಟನೆ ಹಿಂಪಡೆದರು. ಇತಿಯಾಸದಲ್ಲಿ ಪ್ರಥಮ ಬಾರಿಗೆ ಜಾನುವಾರುಗಳು ಗ್ರಾಮ ಪಂಚಾಯತ ಸಭಾಭವನದಲ್ಲಿ ಕಟ್ಟಿ ಪ್ರತಿಭಟನೆ ಮಾಡಿದರು.
ಈ ಕುರಿತು ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ ಮಾತನಾಡಿ ಎಷ್ಟು ಜನ ಬಡ ರೈತರು ಶೆಡ್ಡ ನಿರ್ಮಾಣ ಮಾಡಿದ್ದಾರೆ ಅವರ ಬಿಲ್‌ನ್ನು ಪಾವತಿಸಬೇಕೆಂದು ಪಿ.ಡಿ.ಓ ಇವರಿಗೆ ಆದೇಶ ಮಾಡಿದರು. ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿ ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 