ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರತಿಭಟನೆ
Protest against the central government's labor codes
ಲೋಕದರ್ಶನ ವರದಿ
ದಾಂಡೇಲಿ 12: ಜೆ.ಸಿ.ಟಿ.ಯೂ ಸಂಯುಕ್ತ ಹೋರಾಟ -ಕರ್ನಾಟಕ ಕರೆಯ ಮೇರೆಗೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಗುರುವಾರ ದಾಂಡೇಲಿಯ ಸೋಮಾನಿ ಸರ್ಕಲ್ ಬಳಿ ಕಾರ್ಮಿಕ, ನೌಕರರು ಮತ್ತು ಕೂಲಿ ಕಾರ್ಮಿಕರು ಸೇರಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ದ ವಿವಿಧ ಸಂಘಟನೆಗಳು ಸೇರಿ ನೀಡಿದ ಮುಷ್ಕರದ ಕರೆಗೆ ಬೆಂಬಲ ವ್ಯಕ್ತಪಡಿಸಿದರು.
ವಿಬಿ ಗ್ರಾಮ ಜಿ ಕಾಯ್ದೆ, ವಿದ್ಯುತ್ ಶಕ್ತಿ ತಿದ್ದುಪಡಿ ಮಸೂದೆ, ವಿಮಾ ಮಸೂದೆ, ಬೀಜ ಮಸೂದೆ ನೀತಿಗಳು ಜನವಿರೋಧಿ ಎಂದು ಪ್ರತಿಭಟನಾಕಾರರು ಹೇಳಿದರು. ಇದರೊಂದಿಗೆ ಸ್ಕೀಮ್ ನೌಕರರನ್ನು ಖಾಯಂ ಮಾಡಬೇಕು, ಕನಿಷ್ಠ ವೇತನ ಜಾರಿಯಾಗಬೇಕು, ಅರಣ್ಯ ಭೂಮಿ ಹಕ್ಕು ಸಿಗಬೇಕು, ದೇಶವಿರೋದಿ ಕಾರ್ಮಿಕರ ಸಂಹಿತೆಗಳು ರದ್ದಾಗಬೇಕು. ನರೇಗಾ ಯೋಜನೆ ಮತ್ತೆ ಸ್ಥಾಪನೆಯಾಗಬೇಕು ಎನ್ನುವ ಒತ್ತಾಯ ಕೇಳಿ ಬಂತು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಲ್ಲಿಂ ಸಯ್ಯದ್, ಡಿ. ಸ್ಯಾಮಸನ್, ವಿಜಯಕುಮಾರ, ಇಲಿಯಾಸ್ ಖಾನ್, ಸೇವಂತಿ ಸೇರಿದಂತೆ ಸಿಐಟಿಯು ಸಂಯೋಜಿತ ಎಲ್ಲ ಸಂಘಟನೆಯ ಮುಖಂಡರು ಮತ್ತು ಸದಸ್ಯರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 