ಹೊರ ಗ್ರಾಮದವರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಂಡಿಸಿ ಪ್ರತಿಭಟನೆ

ಹೊರ ಗ್ರಾಮದವರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಂಡಿಸಿ ಪ್ರತಿಭಟನೆ Protest against the appointment of an Anganwadi worker from outside the village

ಲೋಕದರ್ಶನ ವರದಿ 

ಕೇಂದ್ರಕ್ಕೆ ಬೀಗ ಜಡಿದ ಗ್ರಾಮಸ್ಥರು: ಆಯ್ಕೆ ಪ್ರಕ್ರಿಯೆ ಮರುಪರೀಶೀಲನೆಗೆ ಆಗ್ರಹ 

ಮಹಾಲಿಂಗಪುರ 02: ಸಮೀಪದ ಸಂಗಾನಟ್ಟಿ ಗ್ರಾಮದ ಆಂಜನೇಯ ದೇವಸ್ಥಾನದ ಸಮೀಪದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ (ಕೋಡ್ ಸಂಖ್ಯೆ: 29524060131) ಕಾರ್ಯಕರ್ತೆಯ ಹುದ್ದೆಗೆ ಹೊರ ಗ್ರಾಮದ ಮಹಿಳೆಯನ್ನು ಆಯ್ಕೆ ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. 

ಸಂಗಾನಟ್ಟಿ ಗ್ರಾಮದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಸ್ಥಳೀಯ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ ಬೇರೆ ಗ್ರಾಮದ ಅಭ್ಯರ್ಥಿಯನ್ನು ಕಾರ್ಯಕರ್ತೆಯನ್ನಾಗಿ ಆಯ್ಕೆ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. 

ಗ್ರಾಮದಲ್ಲಿಯೇ ಅಗತ್ಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿದ್ದರೂ ಅವರನ್ನು ಪರಿಗಣಿಸದೆ ಹೊರ ಗ್ರಾಮದ ಅಭ್ಯರ್ಥಿಗೆ ಆದ್ಯತೆ ನೀಡಿರುವ ಕ್ರಮ ಸರಿಯಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಸಮರ​‍್ಕವಾಗಿ ಪಾಲಿಸಲಾಗಿದೆಯೇ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪರೀಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಮರುಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. 

ವಿಷಯ ತಿಳಿದು ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 

ಊರಿನ ಮುಖಂಡರಾದ ಪರ​‍್ಪ ಹುದ್ದಾರ, ಬಸವರಾಜ ನಾಗನೂರ, ರಾಜು ಸೈದಾಪೂರ, ಪರ​‍್ಪ ಉಳ್ಳಾಗಡ್ಡಿ, ಭೀಮಪ್ಪ ಉಳ್ಳಾಗಡ್ಡಿ, ಮುತ್ತಪ್ಪ ಯಲ್ಲಟ್ಟಿ, ರಾಮನಗೌಡ ಉಳ್ಳಾಗಡ್ಡಿ, ಲಕ್ಷ್ಮಣ ಇಟ್ನಾಳ, ಗೋಪಾಲ ನಡಿವಿನಮನಿ, ಮಹಾಲಿಂಗ ಪೂಜಾರಿ, ಲಕ್ಷ್ಮಣ ನಾವಿ, ಶ್ರೀಕಾಂತ ತೆಳಗಡೆ, ದುಂಡಪ್ಪ ಮೇಟಿ, ಶ್ರೀಮಂತ ನಾಗನೂರ, ಕಿರಣ ಗಾಡೆಕರ, ಅಶೋಕ ತೆಳಗಡೆ, ದುರ್ಗಪ್ಪ ಗಾಡೆಕರ, ಮಹಾಲಿಂಗ ಅವರಾದಿ, ಬಸವರಾಜ ಇಟ್ನಾಳ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.