ಒಳ ಮೀಸಲಾತಿ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾ.24ಕ್ಕೆ ಪ್ರತಿಭಟನೆ

ಒಳ ಮೀಸಲಾತಿ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾ.24ಕ್ಕೆ ಪ್ರತಿಭಟನೆ  Protest against internal reservation at Freedom Park, Bengaluru on March 24

ಹೂವಿನಹಡಗಲಿ 22: ರಾಜ್ಯ ಸರ್ಕಾರದ ಅವೈಜ್ಞಾನಿಕ ಒಳ ಮೀಸಲಾತಿ ಜಾರಿಗೆ ವಿರೋಧಿಸಿ  ಹಾಗೂ  ಕರ್ನಾಟಕ ರಾಜ್ಯದ ಕೊಲಂಭೋ ಸಮಾಜಕ್ಕೆ ಶೇ.7 ಮೀಸಲಾತಿ ನೀಡಬೇಕು ಎಂದು  ಆಗ್ರಹಿಸಿ  ಬಂಜಾರು, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳ ಒಕ್ಕೂಟವು ಮಾರ್ಚ್‌ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ ಎಂದು ಬಂಜಾರು ಸಮಾಜ ತಾಲೂಕು ಅದ್ಯಕ್ಷ ಶ್ರೀಧರ್ ನಾಯಕ್ ,ಕೊಟ್ರೇಶ ನಾಯಕ್ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಹಕ್ಕು, ಭಿಕ್ಷೆ ಅಲ್ಲ, ಸುಪ್ರೀಂ ಕೋರ್ಟ್‌ ಆದೇಶದಂತೆ ಜಾತಿ ವಾರು,ಸ್ಥಿತಿಗತಿಗಳ ಸಮೀಕ್ಷೆ ಹಾಗೂ ಗಣತಿ ನಡೆಸಬೇಕು.

ಕೊಲಂಭೋ ಸಮಾಜಕ್ಕೆ 7 ಅ ಮೀಸಲಾತಿ ನೀಡಬೇಕು ಎಂದು ಆಗ್ರಹಿಸುತ್ತೇವೆ ಎಂದ ಅವರು ಮುಂದಿನ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದರು. ಮಾ.24ರಂದು ಬೆಂಗಳೂರು ಫ್ರೀಡಂ ಪಾರ್ಕ್‌  ನಲ್ಲಿ ಬೃಹತ್ ಪ್ರತಿಭಟನೆ ಗೆ ಹೂವಿನಹಡಗಲಿ ತಾಲೂಕಿನ 30 ತಾಂಡಗಳಿಂದ ಬಂಜಾರು , ಭೋವಿ,ಕೊರವ,ಕೊರಚ ಸಮಾಜದಿಂದ ಸುಮಾರು 5 ರಿಂದ 6 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದರು. ಭೋವಿ ಸಮಾಜ ತಾಲೂಕು ಅದ್ಯಕ್ಷ ಲೋಕೇಶ್, ಬಂಜಾರ. ಸಮಾಜದ ಜಯಾನಾಯ್ಕ, ಸುರೇಶ್, ಪ್ರಕಾಶ ನಾಯ್ಕ ಇದ್ದರು.