ಜಲಗಾರ ನಿರ್ಮಾಣ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

ಜಲಗಾರ ನಿರ್ಮಾಣ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ Protest against construction of water tank by blocking road

ಲಕ್ಷೇಶ್ವರ 25: ಪಟ್ಟಣದ ಪುರಸಭೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಅಮೃತ. 0.2 ಯೋಜನೆ ಅಡಿಯಲ್ಲಿ ಹೊಸದಾಗಿ ನಿರ್ಮಾಣ ವಾಗುತ್ತಿರುವ ಬಹುಉದ್ದೇಶ ನೀರಿನ ಟ್ಯಾಂಕ್ ಜಲಗಾರ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಹಳೆ ವಿದ್ಯಾರ್ಥಿಗಳು ಮುಖಂಡರು ಸಾರ್ವಜನಿಕರು ಪಟ್ಟಣದ ಶಿಗ್ಲಿ ನಾಕಾ ಹತ್ತಿರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಉಪ ತಹಸಿಲ್ದಾರ ಮಂಜುನಾಥ ಅಮಾಸಿ ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ಮುಖಂಡರಾದ ಶರಣು ಗೋಡಿ, ಫಕ್ಕೀರ​‍್ಪ ಡಿ.ಬಿ. ತಿಪ್ಪಣ್ಣ ಸಂಶಿ, ಮಹೇಶ್ ಹೋಗೆ ಸೊಪ್ಪಿನ ಅವರು ಶಿಕ್ಷಣ ಉದ್ದೇಶಕ್ಕಾಗಿ ದಾನವಾಗಿ ನೀಡಿದ ಈ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು ಅವರು ದಶಕಗಳ ಇತಿಹಾಸ ಹೊಂದಿರುವ ಈ ಮಹಾವಿದ್ಯಾಲಯವು ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಸಾಂಸ್ಕೃತಿಕ ಚಟುವಟಿಕೆಗಳಕೇಂದ್ರವಾಗಿದ್ದು, ಅದರ ಆವರಣದಲ್ಲಿ ಭಾರೀ ಜಲಗಾರ ನಿರ್ಮಾಣದಿಂದ ವಿದ್ಯಾರ್ಥಿಗಳ ಭವಿಷ್ಯದ ಚಟುವಟಿಕೆಗಳಿಗೆ ಅಡಚಣೆ ಉಂಟಾಗುವ ಎಲ್ಲಾ ಸಾಧ್ಯತೆ ಇದೆ

ಕಾಲೇಜಿನ ಸೌಂದರ್ಯಕ್ಕೂ ಪರಿಸರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ, ಧಕ್ಕೆಯಾಗುವ ಆತಂಕವಿದೆ ಸರ್ಕಾರಿ ಜಾಗ ಹಾಗೂ ಸೂಕ್ತ ಪರ್ಯಾಯ ಸ್ಥಳಗಳಿದ್ದರೂ ಶಿಕ್ಷಣ ಸಂಸ್ಥೆಯ ಆವರಣವನ್ನೇ ಆಯ್ಕೆ ಮಾಡಿರುವುದು ಸಮಂಜಸವಲ್ಲಪುರಸಭೆ ಆಡಳಿತ ಮಂಡಳಿಯು ಮಹಾ ವಿದ್ಯಾಲಯವನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತು ಸರ್ಕಾರ ಸರ್ವಾನುಮತದಿಂದ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಮಹಾ ವಿದ್ಯಾಲಯವಾಗಿ ಮಂಜೂರಾತಿ ಆಗಲಿದೆ ಹೀಗಾಗಿ ಈಗ ನಡೆಯುತ್ತಿರುವ ಜಲಗಾರ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲುಆದೇಶಿಸಬೇಕೆಂದು ಆಗ್ರಹಿಸಿದರು.  

ಮನವಿಯನ್ನು ಪರಿಗಣಿಸದಿದ್ದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಉಪ ತಹಸೀಲ್ದಾರ್ ಮಂಜುನಾಥ ಅಮಾಸಿ ಅವರು ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಪದ್ಮರಾಜ್ ಪಾಟೀಲ, ಟಾಕಪ್ಪ ಸಾತಪೂತೆ, ಖೈಸರ ಮಹದಲಿ, ಸೋಮಣ್ಣ ಹರ್ತಿ, ಇಸಾಯಿಲ್ ಆಡೂರ, ಸದಾನಂದ ನಂದೆಣ್ಣವರ, ಪುರಸಭೆಯ ವ್ಯವಸ್ಥಾಪಕಿ ಮಂಜುಳಾ ಹೂಗಾರ್, ಹನುಮಂತಪ್ಪ ನಂದೆಣ್ಣವರ, ಕಂದಾಯ ಇಲಾಖೆ ನೀರೀಕ್ಷಕರು ಪೊಲೀಸ್ ಇಲಾಖೆಯ ಸಿಪಿಐ ಭಿ ವ್ಹಿ ನ್ಯಾಮಗೌಡ ಪಿಎಸ್‌ಐ ನಾಗರಾಜ್ ಗಡದ ಪೊಲೀಸ್ ಸಿಬ್ಬಂದಿ ವರ್ಗದವರು ಸೂಕ್ತ ಬಂದೋಬಸ್ತ್‌ ಕೈಗೊಂಡಿದ್ದರು