ನಿರತ ಉದ್ಯೋಗಾಕಾಂಕ್ಷಿಗಳ ಹೋರಾಟ ಬಂಧನ ಖಂಡಿಸಿ ಪ್ರತಿಭಟನೆ

ನಿರತ ಉದ್ಯೋಗಾಕಾಂಕ್ಷಿಗಳ ಹೋರಾಟ ಬಂಧನ ಖಂಡಿಸಿ ಪ್ರತಿಭಟನೆ  Protest against arrest of busy job seekers

                   ಕೊಪ್ಪಳ 01: ಗಣೇಶ್ ನಗರದಲ್ಲಿ ಗ್ರಂಥಾಲಯದ ಮುಂಬಗದಲ್ಲಿ ಇಂದು ಬೆಳಗ್ಗೆ ಧಾರವಾಡದಲ್ಲಿ ಹೋರಾಟ ನಿರತ ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿಚಾರ್ಜ್‌ ಮತ್ತು ಬಂಧನ ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಉದ್ಯೋಗ ಕಾಂಕ್ಷಿಗಳು ಜೋರಾಗಿ ಘೋಷಣೆಗಳು ಕೂಗಿದರು. ಈ ಕೂಡಲೇ ಖಾಲಿ ಇರುವ ಉದ್ಯೋಗವನ್ನು ಭರ್ತಿ ಮಾಡಬೇಕು. ಬಂಧನ ವಾದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು. ಯಾವುದೇ ಉದ್ಯೋಗಕಾಂಕ್ಷಿಗಳ ಮೇಲೆ ಎಫ್‌ಐಆರ್ ಆದರೆ ಉನ್ನತವಾದ ಹೋರಾಟ ಕಟ್ಟುವುದಾಗಿ ಎಚ್ಚರಿಕೆ ನೀಡಿದರು. ಹೋರಾಟದಲ್ಲಿ ಅಣ್ಣಪ್ಪ ಬಸವರಾಜ ಆನಂದ ದೇವೇಂದ್ರ ಗೌಡ ಹನುಮೇಶ ಶರಣು ಗಡ್ಡಿ ಶಾರದಾ ಮುಂತಾದವರು ಭಾಗವಹಿಸಿದ್ದರು.

                ಕೇಂದ್ರ ಮತ್ತು ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಪಾರದರ್ಶಕ ನೇಮಕಾತಿ ಮಾಡಬೇಕು ಹಾಗೂ ಎಲ್ಲಾ ನೇಮಕಾತಿಯಲ್ಲಿ ಐದು ವರ್ಷ ವಯೋಮಿತಿಯನ್ನು ಹೆಚ್ಚಿಸಬೇಕು ಎಂಬ ಇನ್ನಿತರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದು ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ಜನಸಾಮಾನ್ಯರ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಯನ್ನು ಹಮ್ಮಿಕೊಳ್ಳಲಾಗಿತ್ತು.  

ಈ ಸಮಸ್ಯೆಗಳ ಪರಿಹಾರಕ್ಕಾಗಿ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಉದ್ಯೋಗ ಆಕಾಂಕ್ಷಿ ಯುವಜನರ ಮೇಲೆ ಲಾಠಿಚಾರ್ಜ್‌ ನಡೆಸಿ ಅವರನ್ನು ಬಂಧಿಸಿರುವ ಸರ್ಕಾರದ ಕ್ರಮವನ್ನು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಬಂಧಿಸಿರುವ ಎಲ್ಲರನ್ನೂ ಬಿಡುಗಡೆಗೊಳಿಸಲು ಆಗ್ರಹಿಸುತ್ತದೆ. ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ ಎನ್ನುವುದನ್ನು ಮುಂದೆ ಮಾಡಿ ಪ್ರತಿಭಟನೆಯನ್ನು ಧಮನಗೊಳಿಸಲು ಪೊಲೀಸರ ಮೂಲಕ ಸರ್ಕಾರ ಪ್ರಯತ್ನಿಸಿದೆ. ಡಿಸೆಂಬರ್ ರಂದು ಬೆಳಿಗ್ಗೆ 10 ರಿಂದ ಧಾರವಾಡದ ಶ್ರೀನಗರದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಈ ಮೊದಲೇ ಪೊಲೀಸರಿಗೆ ಮನವಿ ಪತ್ರವನ್ನು ಕೊಟ್ಟಾಗಿಯೂ ಹೋರಾಟವನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲಾಗಿದೆ.

               ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಗೆ ಬಂದರೆ ಕೇಸ್ ಹಾಕುವ ಬೆದರಿಕೆಯನ್ನು ಹಾಕಲಾಗಿದೆ. ಇಷ್ಟೆಲ್ಲಾ ತೊಂದರೆಗಳನ್ನು ಎದುರಿಸಿ ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಕೊಡಿ ಎಂದು ಕೇಳಲು ಮೆರವಣಿಗೆ ಹೊರಟಿದ್ದರು. ಅವರನ್ನು ದಾರಿ ಮಧ್ಯದಲ್ಲಿ ತಡೆದು ಲಾಠಿಚಾರ್ಜ್‌ ಮಾಡಿ, ಬಂಧಿಸಲಾಗಿದೆ.ಕಳೆದ ಹತ್ತು ವರ್ಷಗಳಿಂದ ಯಾವುದೇ ನೇಮಕಾತಿಗಳನ್ನು ಮಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ಆಕಾಂಕ್ಷೆಗಳಿಗೆ ಅನ್ಯಾಯವೆಸಗಿವೆ. ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳು ಹಲವಾರು ವರ್ಷಗಳಿಂದ ಗ್ರಂಥಾಲಯಗಳಲ್ಲಿ ಕುಳಿತು ಓದಿ, ತರಬೇತಿಗಳನ್ನು ಪಡೆದು ಸಾವಿರಾರು ರೂಪಾಯಿಗಳ ಸಾಲಗಳನ್ನು ಮಾಡಿಕೊಂಡು ಮಾನಸಿಕವಾಗಿ ಜರ್ಜರಿತವಾಗಿದ್ದಾರೆ.

              ಸರ್ಕಾರ ಈಗಲೂ ಆಗಲೋ ನೇಮಕಾತಿಗಳ ಅಧಿಸೂಚನೆಯನ್ನು ಹೊರಡಿಸುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ವಿವಿಧ ರೀತಿಯ ನೆಪಗಳನ್ನು ಮುಂದೆ ಮಾಡಿ ನೇಮಕಾತಿಗಳ ಅಧಿಸೂಚನೆಯನ್ನು ಹೊರಡಿಸದೆ, ಉದ್ಯೋಗ ಆಕಾಂಕ್ಷಿಗಳಿಗೆ ನಿರಾಶೆಯನ್ನುಂಟುಮಾಡಿದೆ. ಈ ರೀತಿಯಲ್ಲಿ ಸಮಯ ತಳ್ಳುವುದರ ವಿರುದ್ಧ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದರು. ಅವರ ಮೇಲೆ ಲಾಠಿಚಾರ್ಜ್‌ ನಡೆಸಿ, ಬಂಧಿಸಿರುವ ಕ್ರಮವು ಅತ್ಯಂತ ಜನತಾಂತ್ರಿಕ ವಿರೋಧಿ ಕ್ರಮವಾಗಿದೆ. ಅಷ್ಟೇ ಅಲ್ಲದೆ ಹೋರಾಟವನ್ನು ಹತ್ತಿಕುವ ಕ್ರಮವಾಗಿದೆ.ಈ ಕೂಡಲೇ ಬಂಧಿಸಿರುವ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಸಿದ್ಧಲಿಂಗ ಬಾಗೇವಾಡಿ, ಸಹ ಸಂಚಾಲಕರಾದ ಭವಾನಿ ಶಂಕರ್ ಗೌಡ, ಜನಸಾಮಾನ್ಯರ ವೇದಿಕೆಯ ಮುಖಂಡರಾದ ಯಲ್ಲಪ್ಪ ಹೆಗಡೆ ಮುಂತಾದ 25ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿ ಪ್ರತಿಭಟಕಾರರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಎಲ್ಲಾ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಸರ್ಕಾರ ಕ್ರಮವಹಿಸಬೇಕೆಂದು ಆಗ್ರಹಿಸುತ್ತದೆ.