ಪರಿಸರ ಬೆಳೆಸಿ ನಾಡು ಉಳಿಸಿರಿ: ನಾಗರಾಜ
Protect the environment and save the country: Nagaraja
ಲೋಕದರ್ಶನ ವರದಿ
ಯಲಬುರ್ಗಾ 06: ಈ ತಿಂಗಳು ಮುಂಗಾರು ಹಂಗಾಮು ಇರುವದರಿಂದ ಗಿಡಗಳನ್ನು ನೆಡಲು ಸೂಕ್ತ ಸಮಯಾವಗಿದೆ ಈ ತಿಂಗಳ ಅಂತ್ಯದವರೆಗೂ ಪ್ರತಿಯೊಬ್ಬರಿಂದ ಅಥವಾ ಪ್ರತಿ ವಿದ್ಯಾರ್ಥಿ ತಂಡದಿಂದ ಭವಿಷ್ಯದಲ್ಲಿ ಉಪಯುಕ್ತವಾಗುವಂತಹ ನೆರಳು ಹಾಗೂ ಫಲ ನೀಡುವ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು ಈ ಕಾರ್ಯಕ್ರಮದ ಉದ್ದೆ?ಶವಾಗಿದೆ ಎಂದು ಯುವ ಮುಖಂಡ ನಾಗರಾಜ ಮಾದರ ಹೇಳಿದರು. ತಾಲೂಕಿನ ಕುದರಿಕೋಟಗಿ ಎರಡನೇ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಡುವ ಮೂಲಕ ಆಚರಣೆ ಮಾಡಿ ಅವರು ಮಾತನಾಡಿದರು.
ಶಾಲಾ ಆವರಣದಲ್ಲಿ ನಾನಾ ರೀತಿಯ ಅಲಂಕಾರಿಕ ಗಿಡಗಳು, ಹೂವಿನ ಗಿಡಗಳು ಹಾಗೂ ಓಷಧ ಗಿಡಗಳನ್ನು ಬೆಳೆಸಿ ಶಾಲೆಯ ಸೊಬಗನ್ನು ಹೆಚ್ಚಿಸುವುದರ ಜತೆಗೆ, ಶಾಲಾ ಮೈದಾನದ ಅನುಪಯುಕ್ತ ಜಾಗದಲ್ಲಿ ಸ್ಥಳೀಯ ವಾತಾವರಣಕ್ಕೆ ಅನುಗುಣವಾದ ತೆಂಗು, ಮಾವು, ಹಲಸು, ನೇರಳೆ, ಸೀಬೆ, ದಾಳಿಂಬೆ, ನೆಲ್ಲಿ, ಬೇವು, ಅರಳಿ, ಹೊಂಗೆ, ಸಂಪಿಗೆ, ಟೀಕ್, ಅಶೋಕ ಹಾಗೂ ಸರ್ವೆ ಸೇರಿದಂತೆ ಇತರೆ ಸಸ್ಯಗಳನ್ನು ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಪಡೆಯುವುದರ ಮೂಲಕ ಶಾಲಾ ಪರಿಸರವನ್ನು ಹಸೀರೀಕರಣವಿರುವಂತೆ ನೋಡಿಕೊಳ್ಳಬೇಕು ಆದರೆ ಇಗ ಇಲ್ಲಿ ಜಾಗದ ಲಭ್ಯ ಕಡಿಮೆ ಇರು ದರಿಂದ ಹೊಸ ಕಟ್ಟಡವಾದ ನಂತರ ಎಲ್ಲಾ ರೀತಿಯ ಗಿಡಗಳನ್ನು ನೆಡಲಾಗುವದು ಎಂದರು.
ನಂತರ ಅಂಗನವಾಡಿ ಕಾರ್ಯಕರ್ತೆ ಸುಜಾತ ರವಿಕುಮಾರ್ ಛಲವಾದಿ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಸರ ಹಾಗೂ ಅದರ ಮಹತ್ವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಅಂದಾಗ ಪ್ರತಿ ಮಕ್ಕಳಲ್ಲಿ ಪರಿಸರ ಬಗ್ಗೆ ಕಾಳಜಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಮಾದರ, ಸಹಾಯಕಿ ಕವಿತಾ ಮಾದರ ಸೇರಿದಂತೆ ಅನೇಕ ಮುಖಂಡರು ಪಾಲಕರು ಮಕ್ಕಳು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 