ಸೇವಾ ತಂಡದ ನೆರವಿನಿಂದ ಖಂಡೋರಾವ್ ಮಾನೆಗೆ ಕೃತಕ ಕಾಲು

ಸೇವಾ ತಂಡದ ನೆರವಿನಿಂದ ಖಂಡೋರಾವ್ ಮಾನೆಗೆ ಕೃತಕ ಕಾಲು  Prosthetic leg for Khandorao Mane with the help of the service team

ಗದಗ, ಆ.21: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೊರೊನಾ ಸಂಕಷ್ಟದ ಅವಧಿಯಿಂದಲೂ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಎಚ್‌.ಕೆ. ಪಾಟೀಲ್ ಸೇವಾ ತಂಡದ ವತಿಯಿಂದ ಅಪಘಾತದಲ್ಲಿ ಕಾಲು ಕಳೆದುಕೊಂಡ ಖಂಡೋರಾವ್ ಮಾನೆ ಅವರಿಗೆ ಕೃತಕ ಕಾಲು ಜೋಡಿಸಲಾಗಿದೆ.  

ಎಚ್‌.ಕೆ. ಪಾಟೀಲ್ ಸೇವಾ ತಂಡದ ಕ್ಯಾಪ್ಟನ್ ಶಿವಪ್ಪ ತಿಪ್ಪಣ್ಣ ಬಳ್ಳಾರಿ ಅವರ ಸೇವಾ ಕಾರ್ಯದ ಮೂಲಕ ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ನೆರವಿನಿಂದ ಆಧುನಿಕ ತಂತ್ರಜ್ಞಾನದ ಕೃತಕ ಕಾಲು ಅಳವಡಿಸಲಾಯಿತು.  

ಈ ಹಿನ್ನೆಲೆಯಲ್ಲಿ ಸೇವಾ ತಂಡದ ಅಧ್ಯಕ್ಷ ಪ್ರಭು ಎಲ್‌. ಬುರಬುರೆ ಹಾಗೂ ತಂಡದ ಸದಸ್ಯರು ಖಂಡೋರಾವ್ ಮಾನೆ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ಮತ್ತು ಕುಶಲೋಪರಿ ವಿಚಾರಿಸಿದರು.  

ಈ ಸಂದರ್ಭದಲ್ಲಿ ಶಿವಪ್ಪ ತಿಪ್ಪಣ್ಣ ಬಳ್ಳಾರಿ, ದಾದಾಪೀರ್ ಮುಂಡರಗಿ, ನಾಗರಾಜ ಕುರಗೋಡ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ, ಸ್ಥಳೀಯ ಮುಖಂಡ ಇಸುಫ್ ಡಂಬಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.