ಜನರ ಆರೋಗ್ಯ ದೃಷ್ಟಿ ಇಂದ ಮುಂದಿನ ದಿನಮಾನಗಳಲ್ಲಿ ಚಿಕ್ಕೋಡಿಯಲ್ಲಿ ಜಯದೇವ್ ಆಸ್ಪತ್ರೆಯ ಶಾಖೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ

ಜನರ ಆರೋಗ್ಯ ದೃಷ್ಟಿ ಇಂದ ಮುಂದಿನ ದಿನಮಾನಗಳಲ್ಲಿ ಚಿಕ್ಕೋಡಿಯಲ್ಲಿ ಜಯದೇವ್ ಆಸ್ಪತ್ರೆಯ ಶಾಖೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ Proposal to the state government to open a branch of Jayadev Hospital in Chikkodi in the coming days

ಲೋಕದರ್ಶನ ವರದಿ 

ಚಿಕ್ಕೋಡಿ  31:  ಸದಲಗಾ ವಿಧಾನಸಭಾ ಮತಕ್ಷೇತ್ರದ ಸರ್ವಸಾಮಾನ್ಯ  ಜನರ ಆರೋಗ್ಯ ದೃಷ್ಟಿ ಇಂದ ಮುಂದಿನ ದಿನಮಾನಗಳಲ್ಲಿ ಚಿಕ್ಕೋಡಿಯಲ್ಲಿ ಜಯದೇವ್ ಆಸ್ಪತ್ರೆಯ ಶಾಖೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಂದಿನ ವರ್ಷದ ಬಜೆಟ್ ನಲ್ಲಿ ಚಿಕ್ಕೋಡಿಯಲ್ಲಿ ಜಯದೇವ್ ಆಸ್ಪತ್ರೆ ಪ್ರಾರಂಭಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಅದಕ್ಕಾಗಿ ಬೇಗನೆ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಸುಮಾರು 50 ಎಕರೆ ಜಾಗ ಗುರ್ತಿಸಲಾಗಿದ್ದು ಎಂದು ಚಿಕ್ಕೋಡಿ ಸದಲಗಾ ವಿಧಾನಸಭಾ ಮತ ಕ್ಷೇತ್ರದ ಶಾಸಕರಾದ ಗಣೇಶ ಹುಕ್ಕೇರಿ ಹೇಳಿದರು.

ಅವರು ಮಂಗಳವಾರ ರಂದು  ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಡಾಕ್ಟರ್ ಜಿ ಬಿ ಮಾನೆ ಇವರ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತುರ್ತು ಚಿಕಿತ್ಸಾ ಘಟಕ ಹಾಗೂ ಸೌಲಭ್ಯ ವಳ್ಳ ವ್ಯಾಯಾಮ ಶಾಲೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು . ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂಕಲಿಯ ಶ್ರೀಮಂತ್ ಸರಕಾರದ ಮಹಾದರಾಜೆ ಶಿತೋಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಾಂಡುರಂಗ ಮಾನೆ ಅನಿಲ್ ಪಾಟೀಲ್ ಡಾ. ಧೀರಜ್ ಪೊಳ  ಡಾ ಅರವಿಂದ್ ಮೀನಚೆ ಬಸವಣ್ಣ ನರವಾಡೇ ಹಾಜರಿದ್ದರು

ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಂಶೋಧನಾ ಮತ್ತು ತಂತ್ರಜ್ಞಾನ  ಲಭ್ಯ ಇದ್ದರೂ ಕೂಡ ಸರ್ವಸಾಮಾನ್ಯ ಜನರ ವಿಷಪೂರಿತ ಆಹಾರ ಸೇವನೆಯಿಂದ ಹಲವಾರು ಕಾಯ್ದೆಗಳು ಉಂಟಾಗಿದ್ದು ಅದಕ್ಕಾಗಿ ಜನರು ತಮ್ಮ ಆರೋಗ್ಯ ದೃಷ್ಟಿಯಿಂದ ಸಾವಯವ ಆಹಾರ ಧಾನ್ಯ ಹೆಚ್ಚಿ ಬೆಳೆಸಿ ತಮ್ಮ ಸದೃಢವಾದ ಶರೀರ ಸಂಪತ್ತನ್ನು ಕಾಯ್ದುಕೊಳ್ಳಬೇಕೆಂದು ಶಾಸಕ ಗಣೇಶ್ ಹುಕ್ಕೇರಿ ಹೇಳಿದರು

ಈ ವೇಳೆ ಅನಿಲ್ ಪಾಟೀಲ್ ಶ್ರೀಪಾದ ಗಿರಿ ಮಹಾದರಾಜ ಶತೊಳೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಈ ಕಾರ್ಯಕ್ರಮಕ್ಕೆ ಡಾ. ರಮೇಶ್ ಖಿಚಡೇ ಡಾ ಲಕ್ಷ್ಮಣ್ ಪವಾರ್ ಡಾ ರಾಜು ಚೌಹಾಣ್ ಪೋಪಟ್ ಲಾಮಾಕಾಣೆ ಅಶೋಕ್ ಹವಳೆ ಸುರೇಶ್ ಪಾಟೋಳೆ ಸನಾತಕುಮಾರ್ ಪಾಟೀಲ್   ದಾದಾಸಾಹೇಬ್ ಭೋಜಕರ ಮನೋಹರ್ ಭೋಜಕರ್ ಜ್ಯೋತಿ ರಾಮ್ ಯಾದವ್ ಹಾಗೂ ನಾಗರಿಕರು ಹಾಜರಿದ್ದರು ಸಿದ್ದಾರ್ಥ ಗಾಯಗೊಳ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು