ಹೊಸ ಕ್ರಸ್ಟ್‌ ಗೇಟ್ ಅಳವಡಿಕೆ, ಜಲಾಶಯ ಕಲುಷಿತ ಬಗ್ಗೆ ಬರುವ ಅಧಿವೇಶದಲ್ಲಿ ಪ್ರಸ್ತಾಪ : ಶಾಸಕ ಜೆ.ಎನ್‌.ಗಣೇಶ

ಹೊಸ ಕ್ರಸ್ಟ್‌ ಗೇಟ್ ಅಳವಡಿಕೆ, ಜಲಾಶಯ ಕಲುಷಿತ ಬಗ್ಗೆ ಬರುವ ಅಧಿವೇಶದಲ್ಲಿ ಪ್ರಸ್ತಾಪ : ಶಾಸಕ ಜೆ.ಎನ್‌.ಗಣೇಶ Proposal in the upcoming session regarding installation of new crust gate, reservoir pollution: MLA

ಲೋಕದರ್ಶನ ವರದಿ 

ಕಂಪ್ಲಿ 05:  ಇಲ್ಲಿನ ಎಂ.ಡಿ ಕ್ಯಾಂಪಿನಲ್ಲಿ 2025-26ನೇ ಸಾಲಿನ 4217 ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಸಾಮೂಹಿಕ ಶೌಚಾಗೃಹ ನಿರ್ಮಾಣದ, ಪಟ್ಟಣದ 5ನೇ ವಾರ್ಡ್‌ ಮತ್ತು ಬೆಳಗೋಡ್‌ಹಾಳ್ ಗ್ರಾಮದಲ್ಲಿ ವಿದ್ಯುತ್ ಕಂಬಗಳಿಗೆ ದೀಪಗಳ ಅಳವಡಿಕೆ ಮತ್ತು ಪೇಪರ್ ಬ್ಲಾಕ್‌ಗಳ ನಿರ್ಮಾಣಕ್ಕೆ ಶಾಸಕ ಗಣೇಶ ಭೂಮಿ ಪೂಜೆ ಸಲ್ಲಿಸಿದರು. 

ನಂತರ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯೊಂದಿಗೆ ಸಕಾಲದಲ್ಲಿ ಮುಗಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ತುಂಗಭದ್ರಾ ಜಲಾಶಯದ 33 ಹೊಸ ಕ್ರಸ್ಟ್‌ ಗೇಟ್ ತ್ವರಿತಗತಿಯಲ್ಲಿ ಅಳವಡಿಸಬೇಕು. ರೈತರ ಜೀವನಾಡಿ ಜಲಾಶಯದಲ್ಲಿರುವ ನೀರು ಕಲುಷಿತವಾಗಿರುವ ಬಗ್ಗೆ ಹಾಗೂ ಕಂಪ್ಲಿ, ಕುರುಗೋಡು ತಾಲೂಕು ಕೇಂದ್ರದಲ್ಲಿ ಎಲ್ಲಾ ಬೆಳೆಗಳ ಶಾಶ್ವತ ಖರೀದಿ ಕೇಂದ್ರ ತೆರೆಯುವ ಬಗ್ಗೆ ಬರುವ ಚಳಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸಿ.ಆರ್‌.ಹನುಮಂತ, ಕೆ.ಎಸ್‌.ಚಾಂದ್ ಬಾಷಾ, ಲೊಡ್ಡು ಹೊನ್ನೂರವಲಿ, ವೀರಾಂಜಿನೇಯ, ಆರ್‌.ಆಂಜಿನೇಯ್ಯ, ಮುಖಂಡರಾದ ಕೆ.ಷಣ್ಮುಕಪ್ಪ, ಬಿ.ಸಿದ್ದಪ್ಪ, ಕೆ.ಮನೋಹರ, ಶರಣಗೌಡ, ನಾಗರಾಜ ಡೆಕೋರೇಶನ್, ಹೊನ್ನೂರ​‍್ಪ, ಎನ್‌.ಗಂಗಣ್ಣ, ಎ.ಸಿ.ದಾನಪ್ಪ, ರಘುನಾಯಕ, ಶಶಿಕುಮಾರ ಹಾಗೂ ಗ್ರಾಪಂ ಸದಸ್ಯ ಎಸ್‌.ಚಂದ್ರಶೇಖರಗೌಡ, ಎಸ್ಡಿಎಂಸಿ ಅಧ್ಯಕ್ಷ ಮಲ್ಲಯ್ಯ, ಮುಖಂಡರಾದ ಡಾ.ಎ.ಸಿ.ದಾನಪ್ಪ, ಮೌಲಾಸಾಬ್, ಮೂರ್ತಿಸ್ವಾಮಿ, ಜೀರ್ ಅಯ್ಯಪ್ಪ, ಓಂಕಾರಿಗೌಡ, ವೈ.ವಿರುಪಣ್ಣ, ರಾಮಪ್ಪ ಸೊಂಗ್ಟಿ, ವಾಸು, ದೊಡ್ಡಬಸುವ, ಡಾ.ಅಜಯ, ಎನ್‌.ನಾಗರಾಜ, ನಬೀಸಾಬ್ ಸೇರಿದಂತೆ ಇತರರು ಇದ್ದರು.