ಪ್ರವಾದಿ ಮಹಮ್ಮದ್ ಪೈಗಂಬರ್ ತತ್ವಗಳು ಮಾನವ ಕುಲಕ್ಕೆ ದಾರೀದೀಪ: ಅಶಪಾಕ ಧೂಪದಾಳ

ಪ್ರವಾದಿ ಮಹಮ್ಮದ್ ಪೈಗಂಬರ್ ತತ್ವಗಳು ಮಾನವ ಕುಲಕ್ಕೆ ದಾರೀದೀಪ: ಅಶಪಾಕ ಧೂಪದಾಳ Prophet Muhammed Prophet's Principles A Light for Mankind: Ashapaka Dhupadala

 

ಸವದತ್ತಿ 26: ಸವದತ್ತಿ ತಾಲೂಕಿನ ಗುರ್ಲಹೊಸೂರಿನ ಅಹಲೇ ಸುನ್ನತ್ ನೂರಾನಿ ಜಾಮಿಯಾ ಮಸೀದಿ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಜಶ್ನೆ ಈದ್ ಮಿಲಾದುನ್ನಬಿ ಕಾರ್ಯಕ್ರಮ ಸಡಗರ ಹಾಗೂ ಧಾರ್ಮಿಕ ಶ್ರದ್ಧೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಭವ್ಯ ಜುಲೂಸ್ ನಡೆಸಲಾಗಿದ್ದು, ಯುವಕರು, ಮಕ್ಕಳು, ಹಿರಿಯರು ಹಾಗೂ ಮುಸ್ಲಿಂ ಮುಖಂಡರು ಉತ್ಸಾಹದಿಂದ ಪಾಲ್ಗೊಂಡರು. ಅಶಪಾಕ ಧೂಪದಾಳ ಮಾತನಾಡಿ, ಪ್ರವಾದಿಯವರ ಶಾಂತಿ, ನಮ್ರತೆ ಹಾಗೂ ಸೌಜನ್ಯದ ಜೀವನಶೈಲಿ ಇಡೀ ಮಾನವ ಕುಲಕ್ಕೆ ಅಮೂಲ್ಯ ಸಂದೇಶ ನೀಡಿದೆ ಎಂದರು. ಶಾಹಜಾನ ಸಂಗೊಳ್ಳಿ ಅವರು ಹಬ್ಬವು ಸಮಾಜದಲ್ಲಿ ಶಾಂತಿ, ಒಗ್ಗಟ್ಟು ಮತ್ತು ಸೌಹಾರ್ದತೆ ಬಲಪಡಿಸುವ ಸಂದರ್ಭವಾಗಿದೆ ಎಂದು ಹೇಳಿದರು. ಮೌಲಾನಾ ಮುಹಮ್ಮದ್ ನೂರ ವಿಶೇಷ ಉಪನ್ಯಾಸ ನೀಡಿದರು. ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿದ್ದು, ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.