ಪ್ರವಾದಿ ಮಹಮ್ಮದ್ ಪೈಗಂಬರ್ ರವರು ವಿಶ್ವಕ್ಕೆ ಶಾಂತಿ ಯ ಸಂದೇಶ ನೀಡಿದ್ದಾರೆ - ಖಾಜಿ ಗುರುಗಳು
Prophet Muhammad gave the message of peace to the world - Qazi Gurus
ಪ್ರವಾದಿ ಮಹಮ್ಮದ್ ಪೈಗಂಬರ್ ರವರು ವಿಶ್ವಕ್ಕೆ ಶಾಂತಿ ಯ ಸಂದೇಶ ನೀಡಿದ್ದಾರೆ - ಖಾಜಿ ಗುರುಗಳು
ಕೊಪ್ಪಳ 08: ವಿಶ್ವಕ್ಕೆ ಶಾಂತಿ ಸೌಹಾರ್ದ ಸಂದೇಶವನ್ನು ನೀಡಿದ್ದು ಪ್ರವಾದಿ ಮಹಮ್ಮದ್ ಪೈಗಂಬರ್ ರವರು ಎಂದು ಪ್ರವಚನಕಾರರಾಧ ರಾಶಿದ ಖಾಜಿ ಗುರುಗಳು ನುಡಿದರು, ಅವರು ತಾಲೂಕಿನ ಅಳವಂಡಿ ಗ್ರಾಮದಲ್ಲಿ ಪವಿತ್ರ ಗ್ಯಾರವಿ ಹಬ್ಬದ ಶುಭ ಸಂದರ್ಭದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಏರಿ್ಡಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು ಪ್ರವಚನ ನೀಡಿ ಮಾತನಾಡಿದರು, ಸರ್ವಧರ್ಮಗಳ ಆರಾಧನೆಯಿಂದ ಸುಖಮಯ ಜೀವನ ಸಾಗಿಸಲು ಸಾಧ್ಯ ಎಂದ ಅವರು ಗುರುವಿನ ಗುಲಾಮನಾಗಿ ಜೀವನ ಸಾರ್ಥಕ ಗೊಳಿಸಿಕೊಳ್ಳಬೇಕು, ಪ್ರತಿಯೊಬ್ಬರು ಗುರುವಿಗೆ ಗೌರವ ನೀಡಿ ಅವರು ತೋರಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು, ಮುಂದುವರೆದು ಮಾತನಾಡಿದ ಅವರು ನಮ್ಮ ಭಾರತ ಪುಣ್ಯವಂತರ ನಾಡು ಈ ನಾಡಿನಲ್ಲಿ ಯಾವುದೇ ಜಾತಿ ಭೇದ ಭಾವ ಮಾಡದೆ ಎಲ್ಲರೂ ಒಗ್ಗಟ್ಟಾಗಿ ತಮ್ಮ ಬದುಕು ಕಟ್ಟಿಕೊಳ್ಳಬೇಕು ನಮ್ಮ ನಾಡಿನ ಸೂಫಿ ಸಂತರು ಹೇಳಿದ ಸಂದೇಶ ಪಾಲಿಸಬೇಕು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿ ಕೊಂಡು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಗುರುಗಳಾದ ರಾಶಿದ ಖಾಜಿ ಅಭಿಪ್ರಾಯಪಟ್ಟರು, ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಗುರುಮೂರ್ತಿ ಸ್ವಾಮಿ ಇನಾಮ್ದಾರ್ ಮಾತನಾಡಿ ಪ್ರತಿಯೊಬ್ಬ ಮನುಷ್ಯ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕು ಕಾಯಕ ಮಾಡುವ ವ್ಯಕ್ತಿಗೆ ದೇವರು ಯಾವಾಗಲೂ ಕರುಣಿಸುತ್ತಾನೆ ಎಂದು ಹೇಳಿದರು, ನಮ್ಮ ಧರ್ಮ ಮತ್ತು ಆತ್ಮವನ್ನು ಶುದ್ಧೀಕರಿಸಬೇಕು ಅಂದಾಗ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು, ಬೆಳಗಟ್ಟಿ ದರ್ಗಾದ ಪೀಠಾಧಿಪತಿ ಹಜರತ್ ಸೈಯದ್ ಶಾ ಮುಸ್ತಫ ಖಾದ್ರಿ ಗುರುಗಳು ಆಶೀರ್ವಚನ ನೀಡಿದರು, ಅಳವಂಡಿ ಅಂಜುಮನ್ ಕಮಿಟಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ನಾಯಕ ಅನ್ವರ್ ಗಡಾದ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,ಅಳವಂಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಂಕರಮ್ಮ ಜೋಗಿನ್ ಉಪಾಧ್ಯಕ್ಷರಾದ ಶಾರಮ್ಮ ಇಳಿಗೇರ್ ಕೊಪ್ಪಳ ನಗರ ಸಭೆಯ ಸದಸ್ಯ ಅಕ್ಬರ್ ಪಾಷಾ ಪಲ್ಟನ್ ಹಿರಿಯ ವೈದ್ಯ ಡಾ, ಟಿ ಹೆಚ್ ಮುಲ್ಲಾ. ಕಾಂಗ್ರೆಸ್ ಪಕ್ಷದ ಯುವ ನಾಯಕ ಸುರೇಶ್ ದಾಸ್ ರೆಡ್ಡಿ, ನೀಲಪ್ಪ ,ಹೊನ್ನಪ್ಪ ಗೌಡ, ಭರಮಪ್ಪ ನಗರ, ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಬಸವ ರೆಡ್ಡಪ್ಪ ಹಳ್ಳಿಕೇರಿ ,ಮುಸ್ತಫ ,ಮಹಿಬೂಬ್ ಫಕೀರ್ ಸಾಬ್, ಮರ್ಧಾನ್ ಸಾಬ್, ಮೈನು ಸಾಬ್, ನನ್ನುಸಾಬ್, ನಜೀರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು, ಇದೆ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಕಮಿಟಿಯ ಪರವಾಗಿ ನೆರವೇರಿಸಲಾಯಿತು ,ಇತ್ತೀಚಿಗಷ್ಟೇ ವಿವಿಧ ಪ್ರಶಸ್ತಿಗೆ ಭಾಜನರಾದ ಹಿರಿಯ ವೈದ್ಯ ಡಾ. ಟಿ ಹೆಚ್ ಮುಲ್ಲಾ ಅವರಿಗೂ ಸಹ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು,ಚಿಚಿ
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ 