ಪದೋನ್ನತಿಗೊಂಡ ಮುಖ್ಯ ಶಿಕ್ಷಕಿ: ಹೋಗಬೇಡಿ ಎಂದು ಕಣ್ಣಿರಿಟ್ಟ ಮಕ್ಕಳು
Promoted head teacher: Children kept an eye on her, telling her not to go
ಲೋಕದರ್ಶನ ವರದಿ
ಇಂಡಿ 18 : ಮಕ್ಕಳಿಗೆ ಶಿಕ್ಷಕರೆಂದರೆ ಅಚ್ಚುಮೆಚ್ಚು, ಅದರಲ್ಲೂ ಹಳ್ಳಿಯ ಮಕ್ಕಳಿಗೆ ಅಂತು ಹೆಚ್ಚು. ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಪದೋನ್ನತಿಗೊಂಡ ಹಿನ್ನೆಲೆಯಲ್ಲಿ ಮಕ್ಕಳು ಹೋಗಬೇಡಿ ಹೋಗಬೇಡಿ ಎಂದು ಕಣ್ಣೀರಿಟ್ಟ ಘಟನೆ ಇಂಡಿ ತಾಲೂಕಿನ ತಡವಲಗಾ ಸರ್ಕಾರಿ ಕನ್ನಡ ಮಕ್ಕಳ ಶಾಲೆ ಬಸವೇಶ್ವರ ವಸತಿಯಲ್ಲಿ ನಡೆದಿದೆ.ಸುಮಾರು ಎಂಟು ವರ್ಷಗಳ ಕಾಲ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ಇಂಡಿ ತಾಲೂಕಿನ ಸಾತಲಗಾಂವ ಎಮ್ಪಿಎಸ್ ಶಾಲೆಗೆ ಪದೋನ್ನತಿಗೊಂಡಿದ್ದಾರೆ.
ಚೆನ್ನಮ್ಮ ಎಸ್ ಝಳಕಿ (ಬಿರಾದಾರ) ಪದೋನ್ನತಿಗೊಂಡ ಶಿಕ್ಷಕಿ ಅವರನ್ನು ಬೀಳ್ಕೊಡಲು ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಣ್ಣೀರಿಟ್ಟರು ಹಾಗೂ ಸಹ ಶಿಕ್ಷಕರು ಕೂಡ ಭಾವುಕರಾದರು.ಹೌದು ಈ ಸಮಾಜದಲ್ಲಿ ಗುರುವಿಗೆ ಇರುವ ಸ್ಥಾನ ಬೇರೆಯಾರಿಗು ಇಲ್ಲ ಎಂದರೆ ತಪ್ಪಾಗಲಾರದು.ಶಿಕ್ಷಕರು ಸಮಾಜದ ಬೆನ್ನೆಲುಬು, ಜ್ಞಾನದ ದೀಪ ಮತ್ತು ರಾಷ್ಟ್ರ ನಿರ್ಮಾತೃಗಳು. ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸಿ, ಅವರಿಗೆ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ ನೈತಿಕತೆ, ಶಿಸ್ತು ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತಾರೆ.
ಗುರು-ಶಿಷ್ಯ ಪರಂಪರೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪವಿತ್ರವಾಗಿದ್ದು.ಶ್ರೀಮತಿ ಚೆನ್ನಮ್ಮ ಎಸ್ ಝಳಕಿ ಗುರುಮಾತೆ ಎಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ನೂ ಇಲ್ಲದ ಸಂತೋಷ.ಮಕ್ಕಳನ್ನು ಅತಿ ಹತ್ತಿರದಿಂದ ನೋಡುತ್ತಿದ್ದರು. ಮಕ್ಕಳಿ ಬಿಸಿ ಊಟದ ಜೊತೆಗೆ ಪ್ರತಿ ಸೋಮವಾರ ಸಿಹಿ ಅಡುಗೆ ತಯಾರಿಸಿ ಸಜ್ಜಕ ಮತ್ತು ಹಾಲು ನೀಡುತ್ತಿದ್ದರು. ಪ್ರತಿ ಶನಿವಾರ ಮಕ್ಕಳಿಗೆ ಉಪ್ಪಿಟು ಮಾಡುಸುತ್ತಿದ್ದರು. ಹಾಗೂ ಹುಣ್ಣಿಮೆ ಹಾಗೂ ಅಮಾವಾಸ್ಯೆ ಹಾಗೂ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಸಿಹಿ ಅಡುಗೆ ಜೊತೆಗೆ ಕುರುಡಗಿ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಸೇರಿದಂತೆ ಅನೇಕ ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ಮದ್ಯಾಹ್ನ ಊಟ ನೀಡುತ್ತಿದ್ದರು.
ಶಿಕ್ಷಣ ನೀಡುವುದರಲ್ಲಿ ಕೂಡಾ ಇವರು ಎತ್ತಿದ ಕೈ ಹಾಗಾಗಿ ತಡವಲಗಾ ಗ್ರಾಮದಲ್ಲಿ ಝಳಕಿ ಗುರುಮಾತೆ ಎಂದರೆ ಸಾಕು ಪಾಲಕರಿಗೆ ಎಲ್ಲಿ ಇಲ್ಲದ ಸಂತೋಷ ಅದೇ ರೀತಿ ಅವರಿಗೆ ಪಾಲಕರಿಂದಲೂ ಅಷ್ಟೇ ಸಹಕಾರ ಇತ್ತು.ಆದರೆ ಈ ಝಳಕಿ ಮೇಡಂ ಪದೋನ್ನತಿಗೊಂಡಿದ್ದಾರೆ ಎಂಬ ಸುದ್ದಿ ತಿಳಿದು ಮಕ್ಕಳು ಮತ್ತು ಪಾಲಕರು ನೀವು ನಮ್ಮ ಶಾಲೆ ಬಿಟ್ಟು ಹೋಗಬೇಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
1) ಮುಖ್ಯೋಪಾದ್ಯಾನಿಯಾಗಿ ಇಂದಿಗೆ ಸುಮಾರು 08 ವರ್ಷಗಳು ಆದವು. ಈ ಶಾಲೆಗೆ ಹಾಜರಾಗವ ಮುನ್ನ ನನಗೆ ಹೆಣ್ಣು ಮಗಳಾಗಿ ನೀವು ಈ ಅಡವಿ ವಸ್ತಿ ಶಾಲೆಯಲ್ಲಿ ಹೇಗೆ ಸೇವೆ ಮಾಡುತ್ತೀರಿ.ಈ ಶಾಲೆಗೆ ನಡೆದುಕೊಂಡು ಅಡವಿಯಲ್ಲಿ ಹೋಗುವುದು ನಿಮ್ಮಂದ ಸಾಧ್ಯನಾ? ಎಂದು ಹೇಳಿ ಭಯ ಹುಟ್ಟಿಸಿದ್ದರು.ನಾನು ಮರಳಸಿದ್ದೇಶ್ವರ ದೇವರ ಮೇಲೆ ಭಾರ ಹಾಕಿ ಈ ಶಾಲೆಗೆ ಹಾಜರಾದೆ. ದೇವರ ದಯೆ ಹಾಗೂ ತಮ್ಮೇಲರ ಸಹಾಯ ಸಹಕಾರ ದಿಂದ ನಾನು 08ವರ್ಷ ಮುಖ್ಯೋಪಾಧ್ಯಾಯಿನಿಯಾಗಿ ಯಾವುದೆ ಅಡತಡೆ ಆಪಾದನೆ ಇಲ್ಲದೆ ಸೇವೆ ಸಲ್ಲಿಸಲು ಸಾಧ್ಯ ವಾಯಿತು.*ಶ್ರೀಮತಿ ಸಿ ಎಸ್. ಝಳಕಿ ಪದೋನ್ನತಿಗೊಂಡ ಶಿಕ್ಷಕಿ ಕನ್ನಡ ಸರ್ಕಾರಿ ಶಾಲೆ ಬಸವೇಶ್ವರ ವಸತಿ ಶಾಲೆ ತಡವಲಗಾ
**2) ನಾನು 1ನೇ ತರಗತಿಯಿಂದ ಇಲ್ಲಿ ಪ್ರವೇಶ ಪಡೆದಾಗ ನನಗೆ ಸರಿಯಾಗಿ ಕನ್ನಡ ಮತ್ತು ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ, ಆದರೆ ನಾನು 2024-25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದೆ ಅದಕ್ಕೆ ಕಾರಣ ಯಾರು ಅಂದರೆ ನನ್ನ ಗುರುಮಾತೆ ಚೆನ್ನಮ್ಮ ಝಳಕಿ ನನಗೆ ನೀನು ಶ್ಯಾಣ ಅದಿ ಚೆನ್ನಾಗಿ ಅಭ್ಯಾಸ ಮಾಡಬೇಕು ಎಂದು ಹೇಳುತ್ತಿರು ಅವರು ಹೇಳಿದ ಹಾಗೆ ನಾನು ಚೆನ್ನಾಗಿ ಅಭ್ಯಾಸ ಮಾಡಿ ಇಂಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದೆ ನಾನು ಸರ್ಕಾರಿ ಶಾಲೆ ವಿದ್ಯಾರ್ಥಿ ಎಂದು ಹೇಳಿಕೊಂಡರೂ ಯಾರು ನಂಬುವುದೇ ಇಲ್ಲ, ಆ ಪರಿ ಇಲ್ಲಿಯ ಶಿಕ್ಷಕರು ನಮ್ಮನ್ನು ತಯಾರು ಮಾಡಿದ್ದಾರೆ.*ಪಾರ್ವತಿ ರೇವಪ್ಪ ಪಂತೋಜಿ 2024-25 ನೇ ಸಾಲಿನಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿಗೆಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ*
3) ಗುರುಗಳು ಜ್ಞಾನದ ಭಂಡಾರ, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜೀವನಕ್ಕೆ ಸರಿಯಾದ ದಾರಿ ತೋರುವ ಮಾರ್ಗದರ್ಶಕರು. ಅವರು ವಿದ್ಯೆಯನ್ನು ಕಲಿಸಿ, ಸದ್ಗುಣಗಳನ್ನು ಮೂಡಿಸಿ, ಶಿಷ್ಯನ ಆಧ್ಯಾತ್ಮಿಕ ಮತ್ತು ಲೌಕಿಕ ಏಳಿಗೆಗೆ ಕಾರಣರಾಗುತ್ತಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 