ಪೌರಕಾರ್ಮಿಕರ ವಿವಿಧ ಬೇಡಿಕೆಯನ್ನು ಈಡೇರಿಸುವ ಭರವಸೆ: ಪಟ್ಟಾಕಿ ಸಿಡಿಸಿ ಸಂಭ್ರಮಾಚರಣೆ
Promise to fulfill various demands of civic workers: Celebrations with bursting of firecrackers
ಜಮಖಂಡಿ 01: ರಾಜ್ಯ ಸರಕಾರ ನಗರಸಭೆಯ ಪೌರಕಾರ್ಮಿಕರ ವಿವಿಧ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಪೌರಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರ್‌ವನ್ನು ಹಿಂಪಡೆದು ಪಟ್ಟಾಕಿ ಸಿಡಿಸಿ, ಗುಲಾಲ ಎರಚಿಕೊಂಡು ಸಂಭ್ರಮಾಚರಣೆಯನ್ನು ಮೆರದರು.
ನಂತರ ಪೌರಾಯುಕ್ತ ಜೋತಿ ಗೀರೀಶ ಮಾತನಾಡಿ ಸರಕಾರದ ಎಲ್ಲ ಇಲಾಖೆಯದಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುವ ಸಹಜ ಆದರೆ ಕಷ್ಟದ ಕೆಲಸವನ್ನು ನಿರ್ವಹಿಸುವ ಇಲಾಖೆ ಯಾವುದಾದರು ಇದ್ದರೆ ಅದು ನಗರಸಭೆ. ಗಾಳಿ,ಮಳೆ, ಬಿಸಿಲು, ಚಳಿ ಎನ್ನದೆ ಕೆಲಸವನ್ನು ನಿರ್ವಹಿಸುವರು ನಗರಸಭೆಯ ಪೌರಕಾರ್ಮಿಕರು. ಕಳೆದ ನಾಲ್ಕು ದಿನಗಳ ಕಾಲ ಅನಿರ್ಧಿಷ್ಟಾವಧಿ ಮುಷ್ಕರ್‌ವನ್ನು ಸರಕಾರ ಪರಿಗಣಿಸಿ ವಿವಿಧ ಬೇಡಿಕೆಗಳನ್ನು ನೀಡುವ ಭರವಸೆಯನ್ನು ನೀಡಿದೆ ಎಂದು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ಈ ಅನಿರ್ಧಿಷ್ಟಾವಧಿ ಮುಷ್ಕರ್‌ಕ್ಕೆ ವಿವಿಧ ಸಂಘಟನೆಗಳು, ಸಾರ್ವಜನಿಕರು, ಮುಖಂಡರು ಸಹ ಸಹಕಾರ ನೀಡಿದ್ದಾರೆ. ನಮ್ಮ ಪೌರಕಾರ್ಮಿಕರು ದಿನನಿತ್ಯವಾಗಿ ಜಮಖಂಡಿ ನಗರವನ್ನು ಹೇಗೆ ಸ್ವಚ್ಛವಾಗಿಡುತ್ತಾರೆ. ಹಾಗೆ ಇಂದಿನಿಂದ ಕಸದ ರಾಶಿಯನ್ನು ಸ್ವಚ್ಛ ಮಾಡುತ್ತಾರೆ. ನಗರವನ್ನು ಸುಂದರವಾಗಿ ಕಾಣುವಂತೆ ಕೆಲಸ,ಕಾರ್ಯವನ್ನು ನಿರ್ವಹಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆಯ ಇಳಾಕೆಯ ಸಿಬ್ಬಂದಿಗಳಿಗೆ ಹಾಗೂ ಪೌರಾಯುಕ್ತರಿಗೆ ಪೌರಕಾರ್ಮಿಕರು ಸೇರಿಕೊಂಡು ಸನ್ಮಾನಿಸಿದರು. ನಂತರ ಪಟ್ಟಾಕಿಯನ್ನು ಸಿಡಿಸಿ, ಗುಲಾಲ ಎರಚಿಕೊಂಡು ಸಂತಸವನ್ನು ಹಂಚಿಕೊಂಡರು. ನಗರದ ಅಂಬೇಡ್ಕರ್ ಸರ್ಕಲ್‌ಗೆ ತರಳಿ ಡಾ,ಬಿ,ಆರ್,ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರಿ್ಣಯನ್ನು ಮಾಡಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 