ವಿವಿಧ ಯೋಜನೆಗಳ ಕುರಿತು ಪ್ರಗತಿ ಪರೀಶೀಲನಾ ಸಭೆ

ವಿವಿಧ ಯೋಜನೆಗಳ ಕುರಿತು ಪ್ರಗತಿ ಪರೀಶೀಲನಾ ಸಭೆ Progress review meeting on various projects

ಹುಬ್ಬಳ್ಳಿ 5: ಇಂದು ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭುವನೇಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರೀಶೀಲನಾ ಸಭೆ ಜರುಗಿತು.  

ಸಭೆಯಲ್ಲಿ ಅವರು ಮಾತನಾಡಿ, ಕೈಗೊಂಡು ಗುರಿಗೆ ಅಣುಗುಣವಾಗಿ ಪ್ರಗತಿಗಳನ್ನು ಸಾಧಿಸಲು ಸೂಚಿಸಿದರು. ಕರ ವಸೂಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಮನೆಗಳ ನಿರ್ಮಾಣ ಕುರಿತು ಹೆಚ್ಚಿನ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಸದಾನಂದ ಅಮರಾಪುರ, ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು, ನರೇಗಾ ತಾಂತ್ರಿಕ ಸಿಬ್ಬಂದಿ ಇತರರು ಹಾಜರಿದ್ದರು.ನವೆಂಬರ್ 08 ರಂದು ದಾಸಶ್ರೇಷ್ಠ ಕನಕದಾಸರ  ಜಯಂತಿ  

ಹುಬ್ಬಳ್ಳಿ 05: ಪ್ರತಿ ವರ್ಷದಂತೆ ಈ ವರ್ಷವು ಕೂಡ ಅದ್ದೂರಿಯಾಗಿ ನ.08 ರಂದು ಡೊಳ್ಳು ಕಾರ್ಯಕ್ರಮದ ಮೂಲಕ  ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಮಾಡಲಾಗುವುದು ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜೇ.ಬಿ. ಮಜ್ಜಗಿ ಅವರು ಹೇಳಿದರು.  

ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಶ್ರೀ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಅಂದು ಬೆಳಿಗ್ಗೆ 10 ಗಂಟೆಗೆ ತಾಲೂಕು ಆಡಳಿತ ಸಭಾಭವನದಲ್ಲಿ ಶ್ರೀ ದಾಸಶ್ರೇಷ್ಠ ಕನಕದಾಸರ ರವರ ಜಯಂತಿ ಆಚರಣೆ ಮಾಡಲಾಗುತ್ತದೆ. ಹಾಗೂ ,ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಗುವದು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.  

ಪೂರ್ವಭಾವಿ ಸಭೆಯಲ್ಲಿ ,ತಾಲೂಕು ಪಂಚಾಯತ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಶಿವಾನಂದ. ಭೂಮಣ್ಣವರ್, ಹಿಂದುಳಿದ ವರ್ಗದ ಇಲಾಖೆಯ ಕಲ್ಯಾಣ ಅಧಿಕಾರಿ ನಾಗರತ್ನ ಕಾಸ್ನೂರ್,ಸಂಜೀವ ಧುಮ್ಮಕನಾಳ,ಪವನ್ ಶಿರೂರ್,ಎಫ್‌.ಕೆ. ಕುಸುಗಲ್ಲ, ವಿಶ್ವಚಂದುಶ್ರೀ,ನಿಂಗಪ್ಪ ಜಕ್ಕಡಿ,ಮಂಜುಳಾ ಮುಖದಗಿ, ಅನುಸೋಯಾ.ದೊಡ್ಡಮನಿ,ಮಂಜುಳಾ.ದೊನ್ನೆಹಳ್ಳಿ, ಚಂದ್ರ​‍್ಪ. ಮುಶೇಪ್ಪನವರ,ಮಹೇಶ್‌.ವಿ. ಮನಕವಾಡ, ಪರಮೇಶ್ವರ್‌. ಮಲ್ಲಣ್ಣವರ,ಬಸವಣ್ಣೆಪ್ಪ. ಸನದಿ,ಶಂಕರ. ವಜ್ರಬಂಡಿ,ಶಿವಾನಂದ.ಎಸ್‌.ಎಂ,ಮಹೇಶ.ಕೆ, ಸುರೇಶ. ಬಾರಕೇರ,ಟಿ.ಬಿ.ದರಿಯಣ್ಣವರ್,ಸಮಾಜದ ಮುಖಂಡರು,ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.