ಡಾ. ರಾ.ಯ. ಧಾರವಾಡಕರ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ
Program organized by Dr. R.Y. Dharwadkara Charitable Trust
ಧಾರವಾಡ, 19 : ಶಿಕ್ಷಣ ಹಾಗೂ ಸಾಹಿತ್ಯ ಜಗತ್ತಿನಲ್ಲಿ ಧಾರವಾಡದ ಹೆಸರನ್ನು ತೇಜೋಮಯಗೊಳಿಸಿದ ಡಾ. ರಾ.ಯ. ಧಾರವಾಡಕರ ಅಸಾಧಾರಣ ವ್ಯಕ್ತಿತ್ವದ ಪ್ರತಿಭಾ ಸಂಪನ್ನರಾಗಿದ್ದರು ಎಂದು ಧಾರವಾಡದ ಸಾಹಿತಿ ಡಾ. ಕೃಷ್ಣ ಕಟ್ಟಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಹಿರಿಯ ಸಾಹಿತಿ, ದಕ್ಷ ಆಡಳಿತಗಾರ, ಶಿಕ್ಷಣ ತಜ್ಞ ಡಾ. ರಾ.ಯ. ಧಾರವಾಡಕರ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಡಾ. ರಾ.ಯ. ಧಾರವಾಡಕರ ಅವರ ಹೊಸಗನ್ನಡ ಸಾಹಿತ್ಯದ ಉದಯಕಾಲ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
ಡಾ. ರಾ.ಯ. ಧಾರವಾಡಕರ ಅವರ ಪ್ರೌಢ ಪ್ರಬಂಧ ಸ್ಪಷ್ಟವಾಗಿದ್ದು, ಓದುಗರಲ್ಲಿ ಆಸಕ್ತಿ ಮೂಡಿಸುತ್ತಿದೆ. ಈ ಕೃತಿಯಲ್ಲಿ ಎಲ್ಲಿಯೂ ನಕಾರಾತ್ಮಕ ಚಿಂತನೆಗಳಿಲ್ಲ. ಅನುಭವಿಗಳ, ಮಹಾಪುರುಷರ, ಚಿಂತಕರ ಹಾಗೂ ಸಾಹಿತಿಗಳ ಬಗ್ಗೆ ಟಿಪ್ಪಣಿಗಳನ್ನು ಬರೆದಿದ್ದಾರೆ. ಈ ಕೃತಿ ಲೇಖಕರಾದ ಡಾ. ರಾ.ಯ. ಧಾರವಾಡಕರ ಅವರ ಅನುಪಮ ಪ್ರಾವಿಣ್ಯಕ್ಕೆ ಸಾಕ್ಷಿಯಾಗಿದೆ ಹಾಗೂ ಗುಣಾತ್ಮಕವಾಗಿದೆ.
19ನೇ ಶತಮಾನದ ಆ ಕಾಲಘಟ್ಟದಲ್ಲಿ ಡೆ. ಚೆನ್ನಬಸಪ್ಪನವರು ಶಿಕ್ಷಕರಿಗಾಗಿ ಬರೆದ ಪತ್ರಗಳು, ಮರಾಠಿಮಯವಾದ ಆ ಕಾಲದಲ್ಲಿ ಕನ್ನಡದ ಬಗ್ಗೆ ಕ.ವಿ.ವ.ಸಂಘ ಜನರಲ್ಲಿ ಜಾಗೃತಿ ಮೂಡಿಸಿದ ವಿಷಯವನ್ನು ದಾಖಲೆ ಸಹಿತ ವಿವರಿಸಿದ್ದಾರೆ. ಉತ್ತರ ಕರ್ನಾಟಕದ ಜನರ ಆ ಕಾಲದ ಮನಸ್ಥಿತಿ ಪಾಶ್ಚಾತ್ಯ ಸಂಸ್ಕೃತಿ ಪತ್ರಿಕಾ ಪ್ರಪಂಚದ ಸ್ಪಷ್ಟ ಚಿತ್ರಣಗಳನ್ನು ಓದುಗರಲ್ಲಿ ಆಸಕ್ತಿ ಕೆರಳಿಸುವಂತೆ ಚಿತ್ರಿಕರಿಸಿದ್ದಾರೆ. ಡಾ. ರಾ.ಯ. ಧಾರವಾಡಕರ ಹೊಸಗನ್ನಡ ಸಾಹಿತ್ಯದ ಉದಯ ಕಾಲದ ವೈದ್ಯರಾಗಿ ಚಿಕಿತ್ಸಕ ದೃಷ್ಟಿಯಿಂದ ಉಲ್ಲೇಖಿಸಿದ್ದು, ಅವರು ಪ್ರೌಢ ಪ್ರಬಂಧ ರಚನೆಗೆ ಸಾಕಷ್ಟು ಪೂರ್ವಸಿದ್ಧತೆ ಮಾಡಿರುವಂತೆ ಕಾಣುತ್ತದೆ. ದುರ್ದೈವ ಎಂದರೆ ಇಂದಿನ ಯುವಕರಲ್ಲಿ ಸಂಶೋಧನಾ ಪ್ರವೃತ್ತಿ ಕಡಿಮೆಯಾಗಿದ್ದು ವಿಷಾದನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಡಾ. ರಾ.ಯ. ಧಾರವಾಡಕರ ಹೆಸರಲ್ಲಿಯೇ ಕನ್ನಡದ ಅಸ್ಮಿತೆ ಇದೆ. ಕನ್ನಡದ ಮುಂದಿನ ಪೀಳಿಗೆ ಚಿಂತನ ಮಂಥನಕ್ಕೆ ಸಾಕಷ್ಟು ಸಾಹಿತ್ಯ ಒದಗಿಸಿದ್ದಾರೆ. ಧಾರವಾಡಕರ ಈ ಹೆಸರೇ ಅನ್ವರ್ಥಕನಾಮದಂತಿದೆ ಎಂದು ಹೇಳಿದರು.
ದತ್ತಿದಾನಿಗಳ ಪರವಾಗಿ ಅನಿಲ ಧಾರವಾಡಕರ ಉಪಸ್ಥಿತರಿದ್ದು, ತಮ್ಮ ತಂದೆಯ ವ್ಯಕ್ತಿತ್ವ ಹಾಗೂ ಸಾಧನೆಯ ಕುರಿತು ಮಾತನಾಡಿದರು. ಡಾ ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ಪ್ರಿ. ಶಶಿಧರ ತೋಡಕರ ನಿರೂಪಿಸಿದರು. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ತ. ಹಡಗಲಿ, ನಿಂಗಣ್ಣ ಕುಂಟಿ, ಡಾ. ಅರವಿಂದ ಯಾಳಗಿ, ಎಂ.ಎಂ. ಚಿಕ್ಕಮಠ, ಡಾ. ಶಶಿಧರ ನರೇಂದ್ರ, ಬಿ. ಮಾರುತಿ, ಹರ್ಷ ಡಂಬಳ ಸೇರಿದಂತೆ ಧಾರವಾಡಕರ ಪರಿವಾರದವರು, ಸಾಹಿತಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 