ಅ. 8 ರಂದು ಕೃಷಿ ತಜ್ಞ ಪ್ರೊ ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಅಂಗವಾಗಿ ಕಾರ್ಯಕ್ರಮ
Program on October 8th as part of the agricultural expert Prof. Shivaraja Amrutappa Hosamani Endowme
ಅ. 8 ರಂದು ಕೃಷಿ ತಜ್ಞ ಪ್ರೊ ಶಿವರಾಜ ಅಮೃತಪ್ಪ ಹೊಸಮನಿ ದತ್ತಿ ಅಂಗವಾಗಿ ಕಾರ್ಯಕ್ರಮ
ಧಾರವಾಡ 05: ಇವರು ಹಲವಾರು ಸುಧಾರಿತ ಕೃಷಿ ಉಪಕರಣಗಳನ್ನು ಅವಿಷ್ಕಾರ ಮಾಡಿದ ಈ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಯಾಗಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ(ಕೃಷಿ), ಸ್ನಾತಕೋತ್ತರ ಪದವಿಯನ್ನು ಅಮೇರಿಕಾದ ಪೆನಸ್ಕಿ ವಿಶ್ವವಿದ್ಯಾಲಯದಲ್ಲಿ ಪಡೆದು, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆಗೈದು, ಅಪಾರ ಶಿಷ್ಯ ಬಳಗ ಗಳಿಸಿದವರು. ಬಳ್ಳಾರಿ ಜಿಲ್ಲೆಯ ಕೃಷಿ ಸಂಶೋಧನಾಕೇಂದ್ರದ ಫಾರ್ಮ ಸುಪರಿಂಟೆಂಡೆಂಟ್ ಆಗಿ ಅದರ ಆದಾಯವನ್ನು ಹೆಚ್ಚಿಸಿದ ಖ್ಯಾತಿ ಇವರದಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಥಮ ಆಡಳಿತಾಧಿಕಾರಿಯಾಗಿ, ವಿಶ್ವವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕಿದವರು.
ಪ್ರೊ. ಹೊಸಮನಿಯವರು ಬಿಜಾಪುರದ ಒಣ ಬೇಸಾಯ ಸಂಶೋಧನಾ ಕೇಂದ್ರದಲ್ಲಿ ಬೇಸಾಯ ಶಾಸ್ತ್ರಜ್ಞರಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ 1972 ರಲ್ಲಿ ಇವರನ್ನು ಕೆನಡಾ ದೇಶಕ್ಕೆ ಆರು ತಿಂಗಳ ಕಾಲ ಹೆಚ್ಚಿನ ವ್ಯಾಸಂಗಕ್ಕಾಗಿ ಕಳುಹಿಸಿ ಕೊಡಲಾಗಿತ್ತು. ಇವರ ಈ ಹೆಚ್ಚಿನ ವ್ಯಾಸಂಗದ ಫಲವಾಗಿ, ಬಿಜಾಪುರ ಜಿಲ್ಲೆಯ ರೈತರಿಗೆ ಲಾಭದಾಯಕ ಒಣ ಬೇಸಾಯದಲ್ಲಿ ತೊಡಗುವಂತೆ ಆಯಿತು ಎನ್ನುವುದು ಹೆಮ್ಮೆಯ ಸಂಗತಿ.ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಜೋಳದ ಬೆಳೆಯ ಬೇಸಾಯ ಶಾಸ್ತ್ರಜ್ಞರಾಗಿ ಇವರು ನೀಡಿದಕೊಡುಗೆ ಇಂದಿಗೂ ಚಿರಸ್ಮರಣೀಯ. ಪ್ರೊ. ಹೊಸಮನಿಯವರು ವಸ್ತುನಿಷ್ಠ ಪ್ರಾಯೋಗಿಕ, ಪ್ರಯೋಜನಕಾರಿ ಪ್ರಾಧ್ಯಾಪಕರಾಗಿದ್ದರು. ಪ್ರೊ.ಹೊಸಮನಿ ಶಿಸ್ತಿನ ವ್ಯಕ್ತಿಯಾಗಿ, ದಕ್ಷ ಆಡಳಿತಾಧಿಕಾರಿಯಾಗಿ, ಕೃಷಿ ಸಾಹಿತಿಯಾಗಿ ರೈತರಿಗೆ ಉಪಯುಕ್ತ ಹಾಗೂ ಮಾರ್ಗದರ್ಶಕ ಹಲವಾರು ಪುಸ್ತಕಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಶೋಧನ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ನಿವೃತ್ತಿ ನಂತರತಮ್ಮ ಸ್ವಗ್ರಾಮದಲ್ಲಿ ಸ್ವಂತ ಕೃಷಿ ಚಟುವಟಿಕೆಯಲ್ಲಿ ಹುರುಪಿನಿಂದ ತೊಡಗಿಕೊಂಡು, ಸುತ್ತ-ಮುತ್ತಲಿನ ಗ್ರಾಮದ ರೈತರಿಗೆ ಕಡಿಮೆ ಖರ್ಚಿನಲ್ಲಿ ಲಾಭದಾಯಕ ಒಕ್ಕುಲುತನ ಹೇಗೆ ಮಾಡಬಹುದೆಂದು ನಿರಂತರವಾಗಿ ತರಬೇತಿ ನೀಡಿದರು. ನವಲಗುಂದ ತಾಲೂಕಿನ ಇಬ್ರಾಹಿಂಪುರದ ಕೃಷಿ ಕುಟುಂಬದ ಶ್ರೀ ಅಮೃತಪ್ಪ ಹೊಸಮನಿ ಹಾಗೂ ಶಿವಗಂಗವ್ವ ಇವರ ಸುಪುತ್ರರಾದ ಇವರು 1930 ರಲ್ಲಿ ಜನಿಸಿದರು. ತಮ್ಮ 68 ನೇ ವಯಸ್ಸಿನಲ್ಲಿ ದಿನಾಂಕ 8-10-1998 ರಂದು ನಿಧನರಾದರು.
ತಂದೆಯವರಂತೆ ರೈತ ಪರ ಕಾಳಜಿ ಹೊಂದಿರುವ ಇವರ ಏಕೈಕ ಸುಪುತ್ರರೈತ ಹೋರಾಟಗಾರ ಶ್ರೀ ಈಶ್ವರಚಂದ್ರ ಹೊಸಮನಿ ಇವರು ತಮ್ಮ ತಂದೆಯ ಸ್ಮರಣೆಯಲ್ಲಿ 2015 ರಲ್ಲಿ ದತ್ತಿ ಇಟ್ಟು ಪ್ರತಿವರ್ಷ ಕೃಷಿಗೆ ಸಂಬಂಧಿಸಿದ ಕಾರ‌್ಯಕ್ರಮ, ಉಪನ್ಯಾಸ ನಡೆಸಲು ಸಂಘಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದೇ ಅಕ್ಟೋಬರ 8 ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸಂಜೆ 6 ಗಂಟೆಗೆ ಇವರ ಹೆಸರಿನಲ್ಲಿ ದತ್ತಿ ಅಂಗವಾಗಿ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 