ಪ್ರೊ ಪಟ್ಟಣಶೆಟ್ಟರ ಅವರ ಸಮಾಜಮುಖಿ ಕಾಯಕ ಕೈಂಕರ್ಯ ಅನನ್ಯ: ಪ್ರಭುಸ್ವಾಮಿ ಹೇಮಗಿರಿಮಠ
Prof. Pattanashettar's social work is unique: Prabhuswamy Hemagiri Math
ಆಲಮಟ್ಟಿ (ವಿಜಯಪುರ ಜಿಲ್ಲೆ) 05: ಸರಳತೆಯ ಭಾವದಿಂದಲೇ ಜನಾನುರಾಗಿರುವ ಗದಗ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಹಾಗೂ ಆಲಮಟ್ಟಿ ಎಸ್.ವಿ.ವಿ.ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿ, ಶಿಕ್ಷಣ ತಜ್ಞ ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರ ಸಮಾಜಮುಖಿ ಕಾಯಕಗಳು ಪವಿತ್ರತೆಯ ಹಂದರದಲ್ಲಿ ಸಾಗಿವೆ.ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಕಾಯಕಯೋಗಿ-2026 ಪ್ರಶಸ್ತಿ ಲಭಿಸಿರುವುದು ಖುಷಿ ಸಂಗತಿಯಾಗಿದೆ ಎಂದು ಆಲಮಟ್ಟಿ ಎಂಎಚ್‌ಎಂ ಪಪೂ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ವಿವಿಧ ಕ್ಷೇತ್ರದಲ್ಲಿ ಪೊ ಶಿವಾನಂದ ಪಟ್ಟಣಶೆಟ್ಟರ ಅವರು ಅರಾ್ಣ ಭಾವದಿಂದ ಗೈದಿರುವ ಸಮಾಜಮುಖಿ ಅನುಪಮ ಸೇವಾ ಕಾಯಕವನ್ನು ದೊಡ್ಡಬಳ್ಳಾಪುರ ಮೂಲದ ಕನಾ9ಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಗುರುತಿಸಿ ಕಾಯಕಯೋಗಿ-2026 ಪ್ರಶಸ್ತಿಗೆ ಆಯ್ಕೆಮಾಡಿ ಪುರಸ್ಕರಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು. ಪ್ರೊಫೆಸರ್ ಪಟ್ಟಣಶೆಟ್ಟರ ಅವರಿಗೆ ಪ್ರಶಸ್ತಿ ಸಂದಿರುವವುದರಿಂದ ಇದೀಗ ಎಲ್ಲೆಲ್ಲೂ ಅಭಿಮಾನಿಗಳ ಅಭಿಮಾನಪೂರಕ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ ಎಂದರು.
ಕಳೆದ ಐವತ್ತು ವಸಂತಗಳಿಂದ ಹತ್ತು ಹಲವಾರು ಬಗೆಯ ಸಮಾಜಮುಖಿ ಕಾಯಕದಲ್ಲಿ ತಮ್ಮನ್ನು ತಾವು ಯಾವುದೇ ಸದ್ದುಗದ್ದಲಗಳಿಲ್ಲದೇ ಅವಿರತವಾಗಿ ತೋಡಗಿಸಿಕೊಂಡು ಬಸವ ತತ್ವದ ಸರಳಾನುಭೂತಿ ಕಾಯಕ ಪ್ರಜ್ಞೆ ಮೆರೆದಿರುವ ಅವರು ಗದುಗಿನ ತೋಂಟದಾರ್ಯ ಮಠದ, ಜೆಟಿವಿಪಿ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿ ಶ್ರೇಷ್ಠ ಪಂಥದ ಕಾಯಕಗಳನ್ನು ಗೈದಿದ್ದಾರೆ. ಸಮಾಜಪರ ಸೇವಾಹಿತ ಅವರ ಕಾಯಕದಲ್ಲಿ ಅಡಗಿವೆ. ಮಹೋನ್ನತ ಮಜಲಗಳು ನಿಜಕ್ಕೂ ಆವಣೀ9ಯವಾಗಿವೆ ಎಂದು ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಬಣ್ಣಿಸಿದ್ದಾರೆ.
ಪೊ ಪಟ್ಟಣಶೆಟ್ಟರ ಅವರಲ್ಲಿ ಹುದುಗಿರುವ ಕಾಯಕ ನಿಷ್ಠೆ ಬಹುವಿಶಾಲ.ಕೊಡುಗೆ ಅಭೂತಪೂರ್ವವಾಗಿವೆ. ಪ್ರಾಮಾಣಿಕತೆಯ ಶಿಸ್ತು ಬದ್ದತೆಯ ಕಾಯಕ ತತ್ಪರತೆಯಿಂದ ತೋಂಟದಾರ್ಯ ಶ್ರೀಮಠಕ್ಕೆ ಹೊಸತನದ ಮೆರುಗು ತಂದಿದ್ದಾರೆ, ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಯಲ್ಲಿ ಮಿನುಗುತ್ತಿವೆ. ನವತನದ ಹೊಸಭಾವ ಮೇಳೈಸಿವೆ. ಸಂಸ್ಥೆಯ ನೌಕರರ ಬದುಕಿಗೆ ಆಶಾಕಿರಣವಾಗಿ ಗೋಚರಿಸಿದ್ದಾರೆ. ಪ್ರೊ ಪಟ್ಟಣಶೆಟ್ಟರ ಅವರ ಪ್ರತಿಯೊಂದು ಕೆಲಸ, ಕಾರ್ಯಗಳು ಅತ್ಯಂತ ಚಿಂತನಾಶೀಲವಾಗಿ, ವೈಚಾರಿಕವಾಗಿ ಸಾಗಿವೆ ಎಂದರು.
ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಪ್ರೊ ಪಟ್ಟಣಶೆಟ್ಟರ ಅವರು ಸಮಾಜಕ್ಕಾಗಿ, ಪರಹಿತಕ್ಕಾಗಿ ಇಡೀ ಜೀವಮಾನವನ್ನೇ ಮೀಸಲಿಟ್ಟು ತಮ್ಮ ರಸಧಾರೆಯ ಜೀವತನವನ್ನು ಸವೆದಿದ್ದಾರೆ. ಲಿಂ,ತೋಂಟದ ಡಾ,ಸಿದ್ದಲಿಂಗ ಮಹಾಸ್ವಾಮಿಗಳ ವೈಚಾರಿಕ ನಿಲುವುಗಳ ಚಿಂತನೆಗಳಿಗೆ ಸ್ಪಂದಿಸಿ, ಹಗಲಿರುಳು ಸಾಥ್ ನೀಡಿ ಭಕ್ತಿಭಾವದಿಂದ ಅಪಿ9ತರಾಗಿ ಕೆಲಸ ಮಾಡಿದ್ದಾರೆ. ಅವರ ಕಾಯಕದ ತೃಷೆ ಭಾಷ್ಪ ಸಮಾಜ ಎಂದು ಮರೆಯುವುದಿಲ್ಲ. ತೋಂಟದ ಡಾ ಸಿದ್ದರಾಮ ಪೂಜ್ಯರ ಚಿಂತನೆಗಳಿಗೂ ಪೊ, ಪಟ್ಟಣಶೆಟ್ಟರ ಅವರು ಪ್ರಾಮುಖ್ಯತೆಯನ್ನು ನೀಡಿ ಶ್ರೀಮಠ ಹಾಗೂ ಶಿಕ್ಷಣ ಸಂಸ್ಥೆಗಳ ಉನ್ನತಿಗೆ ಶ್ರಮಿಸಿ ಉಭಯ ಶ್ರೀಗಳವರ ಕನಸುಗಳನ್ನು ಸಾಕಾರಗೊಳಿಸುತ್ತಿರುವುದು ಗಮನಾರ್ಹವಾಗಿದೆ ಎಂದರು.
ಪಟ್ಟಣಶೆಟ್ಟರ ಅವರು ಸಾಮಾನ್ಯ ಕುಟುಂಬ ಪರಿವಾರದಲ್ಲಿ ಜನ್ನವೆತ್ತಿ ಅಸಾಮಾನ್ಯ ಕೈಂಕರ್ಯಗಳೊಂದಿಗೆ ಬೆಳೆದುಬಂದ ಪಯಣ ನವ ಚೈತ್ರದ ದ್ಯೋತಕವಾಗಿವೆ. ಗದುಗಿನ ತೋಂಟದಾರ್ಯ ಮಠದ, ವಿದ್ಯಾಪೀಠದ ಆಡಳಿತಾಧಿಕಾರುಗಳಾಗಿ, ಆಲಮಟ್ಟಿ ಎಸ್.ವಿ.ವಿ.ಸಂಸ್ಥೆಯ ಕಾರ್ಯದರ್ಶಿಗಳಾಗಿ, ಡಂಬಳ ಕಾಲೇಜಿನ ಪ್ರಾಂಶುಪಾಲರಾಗಿ, ವಿವಿಧ ಸಾಮಾಜಿಕ ರಂಗದಲ್ಲಿ ಅಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದರು. ಒಂದು ಕಾಲದಲ್ಲಿ ತೋಂಟದಾರ್ಯ ಮಠ ಮಾಸಿ ಮುಸುಕಾಗುತ್ತಿದ್ದ ಸಂದರ್ಭದಲ್ಲಿ ಶ್ರೀಮಠದ ಪುನಶ್ಚೇತನದ ಶ್ರೇಯೋಭಿವೃಧ್ಧಿಗಾಗಿ ಕೈಗೊಂಡ ಅಚಲ ಸಂಕಲ್ಪ ಪರಿಕಲ್ಪನೆಗೆ ನಿಲುಕುದಂಥದ್ದು. ಶ್ರೀಮಠ, ಶಿಕ್ಷಣ ಸಂಸ್ಥೆಗಳು ಇಂದು ವೈಭವೋಪೇತ ರೂಪ ತಾಳಿವೆ. ನಿಷ್ಕಲ್ಮಶ ಪ್ರೀತಿ, ವಿಶ್ವಾಸಾರ್ಹ ಕಾಯಕ ಜೀವ ಶುಭ್ರ ನಡೆಯಿಂದ ಸಾಗಿರುವ ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರು ವ್ಯಕ್ತಿ ಅಲ್ಲ.ಅವರೊಬ್ಬರು ದೊಡ್ಡ ಶಕ್ತಿಯಾಗಿದ್ದಾರೆ. ಸದ್ಗುಣ, ಸಜ್ಜನಿಕೆ ಈ ಅಪರೂಪದ ಜೀವ ಎಂದೂ ಪ್ರಶಸ್ತಿ, ಪುರಸ್ಕಾರ, ಸನ್ಮಾನಕ್ಕೆ ಹಂಬಲಿಸಿದವರಲ್ಲ.ರಂಜಿತ ಗೋಜಿಗೆ ಹೋದವರಲ್ಲ. ಪ್ರಚಾರದಿಂದ ಅದೆಷ್ಟೋ ದೂರುಳಿದು ಸೌಮ್ಯದಿಂದಲೇ ಬಸವಣ್ಣನವರ ಕಾಯಕ ತತ್ವಕ್ಕೆ ಅಂಟಿಕೊಂಡು ಗತ್ತು, ಗಮ್ಮಗಳಿಲ್ಲದೇ ಸರಳತೆಯಿಂದ ಕೆಲಸ, ಕಾರ್ಯಗಳನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಹಿತೈಷಿಗಳ ಒತ್ತಾಸೆ ಮೇರಿಗೆ ಗೌರವದಾಯಕವಾಗಿ ಕೊಡಮಾಡುವ ಪ್ರಾಂಜಲ್ಯಪೂರ್ವಕ ಪ್ರೀತಿ ಸನ್ಮಾನ ಗೌರವಗಳನ್ನು ಲಿಂ, ಸಿದ್ದಲಿಂಗ ಶ್ರೀಗಳವರ ಅಣತಿಯಂತೆ ಇತ್ತೀಚಿನ ವರ್ಷಗಳಲ್ಲಿ ಸ್ವೀಕರಿಸಿದ್ದಾರೆ. ಇಂಥ ವಿಶಿಷ್ಟ, ಭಾವೈಕ್ಯತಾ ಭಾವದಿಂದ ಕಾಯಕ ರಂಗಕ್ಕೆ ಹಗಲು,ರಾತ್ರಿ ಎನ್ನದೇ ಮನಪೂರಕ ಸಮಪಿ9ಸಿಕೊಂಡು ಗೈದಿರುವ ಅಮೋಘಯುತ ಕಾಯಕ ನಮಗೆಲ್ಲ ಪ್ರೇರಣಾದಾಯಕವಾಗಿದೆ. ದಣಿವರಿಯದ ಜೀವ ಚೈತ್ರ ಪಟ್ಟಣಶೆಟ್ಟರ ಅವರಿಗೆ ಕಾಯಕಯೋಗಿ ಪ್ರಶಸ್ತಿ ದೊರೆತಿರುವುದು ಅಪಾರ ಸಂತಸ ತಂದಿದೆ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹೃದಯ ಪೂರಕವಾಗಿ ಅಭಿನಂದಿಸಿದ್ದಾರೆ.
ಎಂಎಚ್‌ಎಂ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ ಮಾತನಾಡಿ, ಪ್ರೊ ಪಟ್ಟಣಶೆಟ್ಟರ ಅವರು ಸೇವಾ ಕಾಯಕ ಕ್ಷೇತ್ರದ ದಿಗ್ಗಜರು. ಅವರ ಆದರ್ಶಗಳು ನಮಗೆಲ್ಲ ಸ್ಪೂತಿ9.ಇಂಥ ಮಹಾನ ಚೇತನರ ಮಾರ್ಗದರ್ಶನದಲ್ಲಿ ಹಾಗೂ ತೋಂಟದ ಉಭಯ ಪೂಜ್ಯರ ಕೃಪಾಶೀವಾ9ದಿಂದ ನಾವುಗಳು ಶೈಕ್ಷಣಿಕ ಕಾಯಕ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂಥ ಭಾಗ್ಯ ಲಭಿಸಿರುವುದು ನಮಗೆ ಪುಣ್ಯ ಎಂದರು.
ಪ್ರಭುಸ್ವಾಮಿ ಹೇಮಗಿರಿಮಠ ನೇತೃತ್ವದಲ್ಲಿ ಪ್ರಾಧ್ಯಾಪಕಿ ಅಂಬಿಕಾ ಇಟಗಿ, ಸಿದ್ದಮ್ಮ ಪಾಟೀಲ, ಸಾವಿತ್ರಿಬಾಯಿ ಕಲ್ಖಾಣಿ, ಆಶಾ ಬಿರಾದಾರ, ರೇಣುಕಾ ಮಾದರ, ಪ್ರಾಧ್ಯಾಪಕ ಪ್ರಭು ಕಲಗೊಂಡ, ಸಿ.ಎಸ್.ಹೊಸಮನಿ, ತೀರ್ಥಲಿಂಗ ಮೇಟಿ, ಈರಣ್ಣ ಕುಮಟಗಿ ಹಾಗೂ ಎಂಎಚ್‌ಎಂ ಪಪೂ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಚ್.ಎನ್.ಕೆಲೂರ, ಪ್ರಕಾಶ ಧನಶೆಟ್ಟಿ, ಎಮ್.ಎಸ್.ಸಜ್ಜನ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ, ಧನರಾದ ಸಿಂಗಾರಿ, ತಿಮ್ಮಣ್ಣ ದಾಸರ, ಎಂಎಚ್‌ಎಂ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ, ಹಿರಿಯ ಶಿಕ್ಷಕ ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ, ಮಹೇಶ ಗಾಳಪ್ಪಗೋಳ, ಸಚೀನ ರಾಠೋಡ, ಸರಸ್ವತಿ ಈರಗಾರ, ಕೆ.ಜಗದೇವಿ, ಜ್ಯೋತಿ ದೊಡ್ಡೆಣ್ಣವರ, ರಿಯಾನಾ ಕಾಲೇಖಾನ, ಶಿಕ್ಷಣ ಅಭಿಮಾನಿ ಬಸಯ್ಯ ಶಿವಯೋಗಿಮಠ ಸೇರಿದಂತೆ ಅಂಗ ಸಂಸ್ಥೆಯ ಶಾಲೆಗಳ ಮುಖ್ಯಸ್ಥರು, ಸಿಬ್ಬಂದಿಗಳು ಪೊ, ಶಿವಾನಂದ ಪಟ್ಟಣಶೆಟ್ಟರ ಅವರ ಮುಡಿಗೆ ಕಾಯಕಯೋಗಿ ಪ್ರಶಸ್ತಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 