ಪ್ರೊ: ನಾಗಸುಧ.ಆರ್ ಗೆ ಡಾಕ್ಟರೇಟ್ ಪದವಿ ಪ್ರಧಾನ
Prof: Nagasudha.R Doctoral Degree Principal
ಕೊಪ್ಪಳ 05: ಶೇಷಾದ್ರಿಪುರಂ ಸಂಜೆ ಕಾಲೇಜು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಮೈಸೂರು ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಪ್ರೊ. ನಾಗಸುಧ ಆರ್. ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ (ಪಿ ಎಚ್ ಡಿ.) ಪದವಿಯನ್ನು ಪ್ರದಾನ ಮಾಡಿದೆ. ರೋಲ್ ಆಫ್ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಅಂಡ್ ಪರ್ಫಾರ್ಮೆನ್ಸ್ ಆಫ್ ವೂ ಎಂಟರ್್ರೈಸಸ್ ಸ್ಟಡಿ,ಎಂಬ ಶೀರ್ಷಿಕೆಯಡಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧವು ಸಾಮಾಜಿಕ ಮಾಧ್ಯಮ ಮಾರುಕಟ್ಟೆ ತಂತ್ರಗಳ ಪರಿಣಾಮಕಾರಿತ್ವ ಮತ್ತು ಮಹಿಳಾ ಉದ್ಯಮಗಳ ಕಾರ್ಯಕ್ಷಮತೆ ನಡುವಿನ ಸಂಬಂಧವನ್ನು ಆಳವಾದ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಪರೀಶೀಲಿಸಿದೆ.
ಈ ಮಹತ್ವದ ಸಂಶೋಧನೆಗೆ ಕೊಶೀಶ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಗೌರವ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ. ಪ್ರಕಾಶ್ ಬಿ. ನಾಯಕ್ ಅವರ ಮಾರ್ಗದರ್ಶನ ದೊರತಿದೆ.ಸಂಶೋಧನಾ ಕಾರ್ಯದಲ್ಲಿ ಡಾ. ನಾಗಸುಧ ಆರ್. ಅವರು ಅನುಸರಿಸಿದ ವೈಜ್ಞಾನಿಕ ವಿಧಾನಶೀಲತೆ, ಪರಿಕಲ್ಪನಾ ಸ್ಪಷ್ಟತೆ, ಪ್ರಾಯೋಗಿಕ ಮಾಹಿತಿಯ ವಿಶ್ಲೇಷಣಾತ್ಮಕ ನಿರ್ವಹಣೆ ಮತ್ತು ಸಮಗ್ರ ನಿರ್ಣಯಗಳು ಶೈಕ್ಷಣಿಕ ವಲಯದಲ್ಲಿ ಗಮನಾರ್ಹ ಮೆಚ್ಚುಗೆಗೆ ಪಾತ್ರವಾಗಿವೆ.
ಮಹಿಳಾ ಉದ್ಯಮಿಗಳ ಸಬಲೀಕರಣದ ದೃಷ್ಟಿಯಿಂದ ಈ ಅಧ್ಯಯನವು ನೀತಿನಿರ್ಮಾಣ, ಉದ್ಯಮಾಭಿವೃದ್ಧಿ ಹಾಗೂ ಡಿಜಿಟಲ್ ಮಾರುಕಟ್ಟೆ ಕ್ಷೇತ್ರಗಳಿಗೆ ಮಾರ್ಗದರ್ಶಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಡಾ. ನಾಗಸುಧ ಆರ್. ಅವರ ಈ ಗಣನೀಯ ಸಾಧನೆ ಸಂಸ್ಥೆಯ ಶೈಕ್ಷಣಿಕ ಗೌರವವನ್ನು ಮತ್ತಷ್ಟು ವೃದ್ಧಿಸಿಕೊಳ್ಳುವುದರ ಜೊತೆಗೆ ಸಂಶೋಧನಾ ಪರಂಪರೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಪ್ರೇರಣಾದಾಯಕ ಮೈಲಿಗಲ್ಲಾಗಿದೆ ಎಂದು ಪ್ರಾಂಶುಪಾಲರು, ಆಡಳಿತ ಮಂಡಳಿ, ಸಹುದ್ಯೋಗಿ ಮಿತ್ರರು, ವಿದ್ಯಾರ್ಥಿ ಸಮುದಾಯ ಹರ್ಷ ವ್ಯಕ್ತಪಡಿಸಿ,ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 