ಶಿಸ್ತು, ಬದ್ಧತೆ, ಸರಳತೆಗೆ ಅನ್ವರ್ಥಕರಾದ ಪ್ರೊ. ಕೃ ನರಹರಿ ನಿಧನ
Prof. Kri Narahari, an advocate of discipline, commitment and simplicity, passes away
ಲೋಕದರ್ಶನ ವರದಿ
ಶಿಸ್ತು, ಬದ್ಧತೆ, ಸರಳತೆಗೆ ಅನ್ವರ್ಥಕರಾದ ಪ್ರೊ. ಕೃ ನರಹರಿ ನಿಧನ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಾದ್ಯಮಿಕ ಶಿಕ್ಷಕ ಸಂಘದ ಸಂರಕ್ಷಕರಾದ ಪ್ರೊ. ಕೃ. ನರಹರೀಜೀ (93) ಅವರು ಇವತ್ತು ಬೆಳಗ್ಗೆ 4.30 ಗಂಟೆಗೆ ವಯೋಸಹಜ ಸಮಸ್ಯೆಯಿಂದ ಬೆಂಗಳೂರಿನಲ್ಲಿರುವ ಸ್ವಗೃಹದಲ್ಲಿ ವಿಧಿವಶರಾದರು.
ಪ್ರೊ ಕೃ ನರಹರಿಯವರು. ಬಿ.ಎಂ.ಎಸ್ ಇಂಜಿನಿಯರಿಂಗ್ ಕಾಲೇಜುನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾ, ರಾ.ಸ್ವ.ಸೇ.ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹರಾಗಿ, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ ದ ರಾಷ್ಟ್ರೀಯ ಅಧ್ಯಕ್ಷರಾಗಿ, ಮೂರು ಅವಧಿ ಬೆಂಗಳೂರು ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ, ಜನಸೇವಾ ವಿದ್ಯಾಕೇಂದ್ರ ಚೆನ್ನೇನಹಳ್ಳಿ ವಸತಿ ಶಾಲೆಯ ಅಧ್ಯಕ್ಷರಾಗಿ ಮತ್ತು ದಿ ಮಿಥಿಕ್ ಸೊಸೈಟಿ ಯ ಅಧ್ಯಕ್ಷರಾಗಿ ಕಾರ್ಯನಿರ್ವಸಿದ್ದರು.
ಕೃ. ನರಹರಿಯವರು ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು, ರಾಷ್ಟ್ರ ನಿರ್ಮಾಣಕಾರ್ಯದಲ್ಲಿ ಶಿಕ್ಷಕರನ್ನು ತೊಡಗಿಸುವ ದ್ಯೇಯದೊಂದಿಗೆ 1965 ರಲ್ಲಿ ಮಾಧ್ಯಮಿಕ ಶಿಕ್ಷಕ ಸಂಘ ಪ್ರಾರಂಭಿಸಿ , ಸಂಘಟನೆ ಮುಖಾಂತರ ವಿಚಾರ ಸಂಕಿರಣ, ದುಂಡುಮೇಜಿನ ಸಭೆ ,ಬೃಹತ್ ಶಿಕ್ಷಕರ ಸಮ್ಮೇಳನಗಳನ್ನು ಏರಿ್ಡಸುವುದರ ಮುಖಾಂತರ ನಿರಂತರ ಶೈಕ್ಷಣಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಸರಳ ಜೀವನ, ಶುದ್ಧ ಆರ್ಥಿಕ ವ್ಯವಹಾರ ,ಸ್ವಂತಕ್ಕೆ ಸ್ವಲ-ಸಮಾಜಕ್ಕೆ ಸರ್ವಸ್ವ ಸಮರ್ಿಸಿದ ನರಹರಿಯವರು ಮಾನವತಾವಾದಿ ಮತ್ತು ಸಂವೇದನಾ ಶೀಲ ವ್ಯಕ್ತಿಯಾಗಿದ್ದರು.
ಪ್ರೊ. ಕೃ ನರಹರಿಯವರು ಬಹುಮುಖ ವ್ಯಕ್ತಿತ್ವ. ಸಂಘದ ನಿಷ್ಠಾವಂತ ಕಾರ್ಯಕರ್ತ, ಅಸಂಖ್ಯಾತರಿಗೆ ಮಾರ್ಗದರ್ಶಕ ಪ್ರಾಚಾರ್ಯ, ಶಿಕ್ಷಣ ತಜ್ಞ ಶಾಸಕ, ಲೇಖಕ ಹೀಗೆ ಅವರು ಕಾರ್ಯನಿರ್ವಹಿಸಿದ ಕ್ಷೇತ್ರಗಳು ಹಲವು. ಇಳಿವಯಸ್ಸಿನಲ್ಲಿಯೂ ಉತ್ಸಾಹ ಮತ್ತು ಕರಿಯಾಶೀಲರಾಗಿದ್ದರು. ಆರೆಸ್‌ಎಸ್ ಪ್ರೇರಣೆಯೇ ಎಲ್ಲ ಸಾಧನೆಗೂ ಕಾರಣ ಎನ್ನುವ ಅವರು ಅತ್ಯಂತ ಸರಳ, ನಿಗರ್ವಿ, ನಿರಹಂಕಾರಿ ಮೂರ್ತಿಯಾಗಿದ್ದಾರೆ.
ಕೊಡಗಿನಲ್ಲಿ 1959-60 ರಲ್ಲಿ 2 ವರ್ಷ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್ ನ ಎರಡನೇ ಸಂಘಚಾಲಕರಾದ ಗುರೂಜಿಯವರೊಂದಿಗೆ ಒಡನಾಡಿದ ವ್ಯಕತಿತ್ವ ಅವರದು. ಗೃಹಸ್ಥರಾಗಬೇಕಾದ ಸಂದರ್ಭದಲ್ಲಿ ಸಂಘದ ಕಾರ್ಯ ಮತ್ತು ಕಾಲೇಜು ಕೆಲಸಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದು ಬದುಕಿದವರು ಅವರು.
ಕರ್ನಾಟಕ ರಾಜ್ಯ ಮಾದ್ಯಮಿಕ ಶಿಕ್ಷಕ ಸಂಘ ಪ್ರೊ ನರಹರಿ ಯವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ನಮ್ಮ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ.ಅಂತಹ ಮಹಾನ್ ಸಂಘಟನಕಾರ, ಶಿಕ್ಷಣ ತಜ್ಞರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೆವೆ. ಅಗಲಿದ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಮತ್ತು ಸಂಘದ ರಾಜ್ಯಾಧ್ಯಕ್ಷರಾದ ಸಂದೀಪ ಬೂದಿಹಾಳ ಕಂಬನಿ ಮಿಡಿದಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 