ಬೆಂಗಳೂರು, ನ 7: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಜಿ.ಮುಗೇಶ್ ಸೇರಿದಂತೆ ಆರು ಜನರಿಗೆ ಗುರುವಾರ ಇನ್ಫೋಸಿಸ್ ವಿಜ್ಞಾನ ಫೌಂಡೇಷನ್ 2019ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರಕಟಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನ ಅಧ್ಯಕ್ಷ ಮತ್ತು ಇನ್ಫೋಸಿಸ್ ಲಿಮಿಟೆಡ್ ನ ಸಹ ಸಂಸ್ಥಾಪಕ ಎಸ್. ಡಿ.ಶಿಬುಲಾಲ್, ಇನ್ಫೋಸಿಸ್ ಫೌಂಡೇಷನ್ ಪ್ರತಿ ವರ್ಷ ವಿಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಅಪರೂಪದ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿದೆ. ಈ ವರ್ಷ ಕೂಡ 194 ಅರ್ಜಿಗಳ ಪೈಕಿ ಮನುಕುಲಕ್ಕೆ ಮತ್ತು ಸಮಾಜಕ್ಕೆ ತಮ್ಮ ಸಂಶೋಧನೆಗಳ ಮೂಲಕ ಅತ್ಯುತ್ತಮ ಸಾಧನೆ ನೀಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವೀಯತೆ, ಜೀವನ ವಿಜ್ಞಾನಗಳು, ಗಣಿತ ವಿಜ್ಞಾನ, ಬೌತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸೇರಿ ಆರು ವಿಭಾಗಗಳಲ್ಲಿ ಪ್ರಶಸ್ತಿ ಘೋಷಿಸಲಾಗಿದೆ. ಪ್ರತಿ ವಿಭಾಗದ ಪ್ರಶಸ್ತಿ ಒಂದು ಅಪ್ಪಟ ಚಿನ್ನದ ಪದಕ, ಒಂದು ಫಲಕ ಮತ್ತು 1,00,000 ಅಮೆರಿಕನ್ ಡಾಲರ್ (ಅದಕ್ಕೆ ಸಮನಾದ ಭಾರತೀಯ ನಗದು)ಅನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಪರಿಣತ ವಿದ್ವಾಂಸರು ಮತ್ತು ಪ್ರೊಫೆಸರ್ ಗಳನ್ನು ಒಳಗೊಂಡ ತೀಪುಗಾರರ ತಂಡ 196 ನಾಮನಿರ್ದೇಶಿತರ ಪೈಕಿ ಇನ್ಫೋಸಿಸ್ ಪ್ರಶಸ್ತಿ ಆರು ವಿಜೇತರನ್ನು ಆಯ್ಕೆ ಮಾಡಿದೆ. ಇನ್ಫೋಸಿಸ್ ಪ್ರಶಸ್ತಿ, ಅತ್ಯುತ್ತಮ ಸಂಶೋಧಕರನ್ನು ಗುರುತಿಸಿ,ಅವರ ಸಾಧನೆಯನ್ನು ಸಂಭ್ರಮಿಸುವುದರ ಜೊತೆಗೆ, ಆ ಮೂಲಕ, ಯುವ ಮನಸ್ಸುಗಳಿಗೆ ವಿಜ್ಞಾನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದರು. ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನ ಟ್ರಸ್ಟಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ, ಯುವಜನತೆಯನ್ನು ಮೂಲಭೂತ ಸಂಶೋಧನೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ನಮಗೆ ಪ್ರತಿನಿತ್ಯ ಎದುರಾಗುವ ಬೃಹತ್ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಕೊಡುಗೆ ನೀಡಲು ಅವರನ್ನು ಸಜ್ಜುಗೊಳಿಸಬೇಕು. ಭಾರತ ಪ್ರತಿ ತಿಂಗಳೂ ಆವಿಷ್ಕಾರ ಮತ್ತು ಸಂಶೋಧನೆಗಳು ನಡೆಯುವ ಸ್ಥಳವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಪ್ರಶಸ್ತಿ ವಿಜೇತರು ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ - ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪೀಠದ ಪ್ರಾಧ್ಯಾಪಕಿ ಸುನೀತಾ ಸುರವಗಿ -ು್ಲಿ್ಣಿದ್ಞಿ, ಡೇಟಾ ಮೈನಿಂಗ್, ಯಂತ್ರಗಳ ಕಲಿಕೆ ಮತ್ತು ಸಹಜ ಭಾಷೆಯ ಪ್ರೊಸೆಸಿಂಗ್ ಕ್ಷೇತ್ರಗಳ ಸಂಶೋಧನೆ ಮತ್ತು ಈ ಸಂಶೋಧನೆ ತಂತ್ರಗಳ ಪ್ರಮುಖ ಅಳವಡಿಕೆಯ ಸಂಶೋಧನೆಗಾಗಿ ಮಾನವೀಯತೆ - ಮಂಡಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮಾನವೀಯತೆ ಮತ್ತು ಸಮಾಜ ವಿಜ್ಞಾನದ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರೊಫೆಸರ್ ಮನು ವಿ.ದೇವದೇವನ್ - ಪ್ರಮುಖವಾಗಿ ದಕ್ಷಿಣ ಭಾರತ ಮತ್ತು ಡೆಕ್ಕನ್ ಪ್ರಸ್ಥ ಭೂಮಿಯ ಸಾಂಸ್ಕೃತಿಕ, ಧಾಮರ್ಿಕ ಮತ್ತು ಸಾಮಾಜಿಕ ಇತಿಹಾಸ ಕುರಿತು ಸಾಂಪ್ರದಾಯಿಕ ಜ್ಞಾನವನ್ನು ಮರು ವಿಶ್ಲೇಷಣೆಗಾಗಿ ಜೀವ ವಿಜ್ಞಾನ - ಹೈದರಾಬಾದ್ ನ ಸೆಂಟರ್ ಫಾರ್ ಸೆಲ್ಯುಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿಯ (ಸಿಸಿಎಂಬಿ) ಮುಖ್ಯ ವಿಜ್ಞಾನಿ ಮಂಜುಳಾ ರೆಡ್ಡಿ- ಬ್ಯಾಕ್ಟೀರಿಯಾದಲ್ಲಿ ಕೋಶಗಳ ಗೋಡೆಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಾಗಿ ಗಣಿತ ವಿಜ್ಞಾನ ಇಟಿಎಚ್ ಜ್ಯೂರಿಚ್ ನ ಗಣಿತ ವಿಭಾಗದ ಪ್ರೊಫೆಸರ್ ಸಿದ್ಧಾರ್ಥ ಮಿಶ್ರಾ -ಅನ್ವಯಿಕ ಗಣಿತದಲ್ಲಿ, ವಿಶೇಷವಾಗಿ ವಾಸ್ತವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುವ ಸಾಂಖಿಕ ಉಪಕರಣವನ್ನು ವಿನ್ಯಾಸಗೊಳಿಸಿದ ಕೊಡುಗೆಗಾಗಿ ಭೌತಿಕ ವಿಜ್ಞಾನ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಜಿ.ಮುಗೇಶ್- ಜೀವವೈದ್ಯಕೀಯ ಉಪಕರಣಗಳಿಗೆ ನ್ಯಾನೋ ಉತ್ಪನ್ನಗಳು ಮತ್ತು ಸಣ್ಣ ಅಣುಗಳ ರಾಸಾಯನಿಕ ಸಂಶ್ಲೇಷಣೆಯಲ್ಲಿ ಮಹತ್ವದ ಸಾಧನೆಗಾಗಿ ಸಾಮಾಜಿಕ ವಿಜ್ಞಾನಗಳು ಜಾನ್ಸ್ ಹಾಪ್ ಕಿನ್ಸ್ ನ ಕ್ರೀಯೇಗರ್ ಸ್ಕೂಲ್ ಆಫ್ ಆಟ್ರ್ಸ ಆಂಡ್ ಸೈನ್ಸ್ ನ ಆಂಥ್ರೋಪಾಲಜಿ ವಿಭಾಗದ ಪ್ರೊಫೆಸರ್ ಆನಂದ್ ಪಾಂಡಿಯನ್ - ನೈತಿಕತೆ, ತನ್ನತನ, ಸಂಶೋಧನೆಗಳು ಸಿನೆಮಾ, ಸಾರ್ವಜನಿಕ ಸಂಸ್ಕೃತಿ, ವಾತಾವರಣ, ಪರಿಸರ ಮತ್ತು ಆಂಥ್ರೋಪಾಲಜಿ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಇವರ ಕಾಲ್ಪನಿಕ ಕೆಲಸಗಳು.