ಅಂತರಾಷ್ತ್ರಿಯ ಜೀವವೈವಿದ್ಯತೆ ದಿನಾಚರಣೆಯಲ್ಲಿ ಪ್ರೊ ಜಿ. ಎಂ. ವಿದ್ಯಾಸಾಗರ ಅಭಿಪ್ರಾಯ
Prof. G. M. Vidyasagar's opinion on International Day for Biological Diversity
ಲೋಕದರ್ಶನ ವರದಿ
ಕಲಬುರಗಿ 05 : ವಿದ್ಯಾರ್ಥಿಗಳು ಪರಿಸರ ಮತ್ತು ಜೀವ ಸಂಕುಲ ಸಂರಕ್ಷಣೆಯ ರೂವಾರಿಗಳಾಗಬೇಕು, ಜೀವವೈವಿದ್ಯತೆ ದಿನಾಚರಣೆ ಕೇವಲ ಆಚರಣೆಯ ದಿನಗಳಿಗೆ ಸೀಮಿತವಾಗದೆ ವರ್ಷವಿಡಿ ಪರಿಸರ ರಕ್ಷಣೆ ಮತ್ತು ಜೀವಿಗಳ ಸಂರಕ್ಷಣೆಯಲ್ಲಿ ಕ್ರಿಯಾಶೀಲತೆ ತೋರಬೇಕು ಎಂದು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಸಂಯೋಜಕ ಪ್ರೊ ಜಿ. ಎಂ. ವಿಧ್ಯಾಸಾಗರ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗ ಮತ್ತು ಪ್ರಾಣಿಶಾಸ್ತ್ರ ಸಂಘದ ನೇತೃತ್ವದಲ್ಲಿ ಡಾರ್ವಿನ್ ಸಭಾಂಗಣದಲ್ಲಿ ಆಯೋಜಿಸಿದ ಅಂತರಾಷ್ತ್ರಿಯ ಜೀವವೈವಿದ್ಯತೆ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜೀವವೈವಿದ್ಯತೆಯಲ್ಲಿ ಆಸಕ್ತಿದಾಯಕ ವಿಸ್ಮಯಗಳಿವೆ. ಅವುಗಳ ಕುರಿತು ವೈಜ್ಞಾನಿಕ ಚಿಂತನೆ ಮೂಲಕ ದೂರದೃಷ್ಠಿ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೀಟಗಳು ಮಾನವನ ಆಹಾರ ಪದ್ಧತಿಯ ಮುಖ್ಯ ಭಾಗವಾಗಬಹುದು. ಮಾನವ ಕಲ್ಯಾಣಕ್ಕಾಗಿ ಆರೋಗ್ಯದಾಯಕ ಪರಿಸರ ಮತ್ತು ಜೀವ ವೈವಿಧ್ಯತೆಯನ್ನು ಪೋಷಿಸಬೇಕು ಎಂದರು.
ಪ್ರಾಣಿಶಾಸ್ತ್ರ ಸಂಘದ ಉಪಾಧ್ಯಕ್ಷ ಹಾಗೂ ಪ್ರಾಧ್ಯಾಪಕ ಡಾ. ಶಶಿಕಾಂತ ಮಜಗಿ ಪ್ರಾಸ್ತಾವಿಕ ಮಾತನಾಡಿ ‘ಆಕ್ಟಿಂಗ್ ಲೋಕಲೀ ಫಾರ್ ಗ್ಲೋಬಲ್ ಇಂಪ್ಯಾಕ್ಟ್’ ಜೀವವೈವಿದ್ಯತೆ ದಿನಾಚರಣೆ ಘೋಷವಾಕ್ಯವಾಗಿದೆ. ಜೀವ ವಿಜ್ಞಾನ ಜಗತ್ತು ವೈವಿಧ್ಯತೆಯಿಂದ ಕೂಡಿದೆ. ಜೀವಿಗಳ ವಂಶವಾಹಿ ಮತ್ತು ಪರಿಸರದಲ್ಲಿ ಪ್ರಾಣಿ, ಪಕ್ಷಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಸೊಗಸಾದ ಜಗತ್ತನ್ನು ಸೃಷ್ಟಿಸಿವೆ. ಎಲ್ಲಾ ಜೀವರಾಶಿಗಳಲ್ಲಿ ವೈವಿಧ್ಯತೆ ಕಾಣದಿದ್ದರೆ ಭೂಮಿ ಸುಂದರ ಮತ್ತು ವಿಸ್ಮಯಗಳ ಆಗರವಾಗಿರುತ್ತಿರಲಿಲ್ಲ.
ಜೈವಿಕ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳಿಂದ ಸುಮಾರು 1.6 ರಿಂದ 1.8 ಮಿಲಿಯನ ಜೀವಿಗಳನ್ನು ಮಾತ್ರ ಗರುರುತಿಸಲು ಸಾದ್ಯವಾಗಿದೆ. ಇನ್ನು 45 ರಿಂದ 50 ಮಿಲಿಯನಷ್ಟು ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳು ಇವೇ ಎಂದು ಇತ್ತೀಚಿನ ಶೋಧನೆಗಳಿಂದ ಕಂಡು ಬಂದಿದೆ ಎಂದು ಅಂದಾಜಿಸಲಾಗಿದೆ. ಅವುಗಳ ವಿಶೇಷತೆ, ವೈವಿಧ್ಯತೆಗಳನ್ನು ಗ್ರಹಿಸುವ ಮೂಲಕ ನಾವೀನ್ಯ ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಣಿಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಸಂಧ್ಯಾ ದಿವಾಕರ ವೈವಿಧ್ಯತೆಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ಜೀವವೈವಿಧತೆ ಕುರಿತು ಬಾಷಣ ಸ್ಪರ್ಧೆ ಆಯೊಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರಾದ ಪ್ರೊ. ವಿಜಯಕುಮಾರ ಮಲಶೆಟ್ಟಿ, ಡಾ. ಶರಣಬಸಪ್ಪ ಪಾಟಿಲ, ಡಾ. ಪರಶುರಾಮ ಕಾಂಬಳೆ ಮತ್ತು ಡಾ. ಖಸಿಮ ಫಾತಿಮಾ ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕು. ಮಾಯಾವತಿ ಕಾರ್ಯಕ್ರಮ ನಿರೂಪಿಸಿದರು. ಭಾಗಪ್ಪ ಪ್ರಾರ್ಥಿಸಿದರು. ಶಿವಾನಿ ಸ್ವಾಗತಿಸಿದರು. ಭಾಗ್ಯಶ್ರಿ ವಂದಿಸಿದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 