ಪ್ರೋ. ಬಿ ಕೆ ಮದವಾಲ ಅವರ ಶಿಕ್ಷಣ ಸೇವೆ ಅಪಾರ: ಮಹಾಂತೇಶ ಕೌಜಲಗಿ
Prof. B K Madawala's educational service is immense: Mahantesh Kaujalagi
ಬೈಲಹೊಂಗಲ 05: ಜಿಲ್ಲೆಯ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಸೇವೆ ಸಲ್ಲಿಸಿ, ಸಾದಾ ಸೀದಾ ವ್ಯಕ್ತಿತ್ವ ಹೊಂದಿ 23 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಪ್ರಾಂನ್ಸುಪಾಲರಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಯನ್ನು ನೀಡಿ ಐನಾಪುರ, ಸಾವಳಗಿ, ಕಿತ್ತೂರು, ಪ್ರಸಕ್ತ ಬೈಲಹೊಂಗಲ ಸರ್ಕಾರಿ ಪ್ರಥಮ ಧರ್ಜೆ ಮಹಿಳಾ ಕಾಲೇಜು, ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ಧರ್ಜೆ ಮಹಿಳಾ ಕಾಲೇಜು, ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಪ್ರೋ. ಬಿ ಕೆ ಮದವಾಲ ಅವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ ನೇಸರಗಿ ಗ್ರಾಮದ ಪ್ರತಿಷ್ಠಿತ ಮದವಾಲ ( ಕಳ್ಳಿಬಡ್ಡಿ ) ರೈತ ಮನೆತನದಿಂದ ಬಂದು ಪರಿಶ್ರಮದಿಂದ ಬೆಳೆದು ಬಂದು ನಿವೃತ್ತಿ ಹೊಂದುತ್ತಿರುವದು ಹೆಮ್ಮೆಯ ವಿಷಯ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಅಥಿತಿಗಳಾಗಿ ಆಗಮಿಸಿದ್ದ ಡಾ. ಎನ್ ಆರ್ ಪಾಟೀಲ ಮಾತನಾಡಿ ಪ್ರೋ ಮದವಾಲ ಅವರ ಶಿಕ್ಷಣ ಸೇವೆಯ ಹಾಗೂ ಸರಳ ವ್ಯಕ್ತಿತ್ವದ ಕುರಿತು ಕೊಂಡಾಡಿದರು.
ಈ ಸಂದರ್ಭದಲ್ಲಿ ಪ್ರೋ. ಬಿ ಕೆ ಮದವಾಲ ಕುಟುಂಬವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋಧಕ ಭೋಧಕ್ಕೇತ್ತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 