ಭಕ್ತ ಕನಕದಾಸರ ಕಂಚಿನ ಪುತ್ಥಳಿಯ ಮೆರವಣಿಗೆ
Procession of the bronze statue of devotee Kanakadasa
ಹಾನಗಲ್ 13: ನಗರದ ಪ್ರಮುಖ ಬೀದಿಗಳಲ್ಲಿ ಗುರುವಾರ ದಾಸಶ್ರೇಷ್ಠ ಭಕ್ತ ಕನಕದಾಸರ ಕಂಚಿನ ಪುತ್ಥಳಿಯ ಭವ್ಯ ಮೆರವಣಿಗೆ ಸಡಗರ, ಸಂಭ್ರಮದಿಂದ ನೆರವೇರಿತು. ವಿರಕ್ತಮಠದ ಎದುರು ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಶಾಸಕ ಶ್ರೀನಿವಾಸ ಮಾನೆ ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಸೇರಿದಂತೆ ನಾನಾ ಜಾನಪದ ಕಲಾತಂಡಗಳು ಮೆರವಣಿಗೆಯ ಸಂಭ್ರಮ ಹೆಚ್ಚಿಸಿದ್ದವು. ವಿರಕ್ತಮಠದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸ ಬಸ್ ನಿಲ್ದಾಣದ ಬಳಿಯ ಕನಕ ವೃತ್ತ ತಲುಪಿ ಮುಕ್ತಾಯಗೊಂಡಿತು. ಕೆಲವೇ ದಿನಗಳಲ್ಲಿ ಕನಕ ವೃತ್ತದಲ್ಲಿ ಪುತ್ಥಳಿಯ ಪ್ರತಿಷ್ಟಾಪನೆ ನಡೆಯಲಿದೆ.
ಕಾಗಿನೆಲೆಯ ಅಮೋಘಸಿದ್ದೇಶ್ವರ ಸ್ವಾಮಿಜಿ, ಮುಖಂಡರಾದ ಮಹೇಶ ಪವಾಡಿ, ವಿನಾಯಕ ಕುರುಬರ, ಮಾಲತೇಶ ಗಂಟೇರ, ರಾಜೇಂದ್ರ ಹಾವೇರಣ್ಣನವರ, ದಾನಪ್ಪ ಗಂಟೇರ, ಭೋಜರಾಜ ಕರೂದಿ, ಸುರೇಶ ದೊಡ್ಡಕುರುಬರ, ಪ್ರಕಾಶ ತಳ್ಳಳಿ, ಮಾಲತೇಶ ಬ್ಯಾಗವಾದಿ, ಅಶೋಕ ದೇವಗಿರ, ಕೃಷ್ಣಾ ಮಾಸನಕಟ್ಟಿ, ರಾಮಚಂದ್ರ ಹೆಗಡೆ, ಸಂದೀಪ ಪಾಟೀಲ, ರಾಮಚಂದ್ರ ಹೊಸಮನಿ, ಜಿ.ಎಸ್.ಕುರುಬರ, ನಿಂಗಪ್ಪ ಗಾಜಿಯವರ, ರಾಜಶೇಖರ ಕಟ್ಟೇಗೌಡ್ರ, ಕಲ್ಯಾಣಕುಮಾರ ಶೆಟ್ಟರ, ಕೃಷ್ಣ ಈಳಿಗೇರ, ರವೀಂದ್ರ ದೇಶಪಾಂಡೆ, ಆದರ್ಶ ಶೆಟ್ಟಿ ಸೇರಿದಂತೆ ಇನ್ನೂ ಹಲವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 