ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತಾ ನಿರ್ವಹಣೆ ಕುರಿತು ಆಯೋಜಿಸಿರುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ
Prize distribution ceremony for students who participated in the essay competition organized on envi
ಆಲಮೇಲ 31 : ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಟ್ಟಣ ಪಂಚಾಯತ ವತಿಯಿಂದ ಎಸ್.ಬಿ.ಎಂ.2.0 ಯೋಜನಯಡಿಯಲ್ಲಿ ಐ.ಇ.ಸಿ. ಚಟುವಟಿಕೆ ಪ್ರಯುಕ್ತ ಹಮ್ಮಿಕೊಂಡಿರುವ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತಾ ನಿರ್ವಹಣೆ ಕುರಿತು ಆಯೋಜಿಸಿರುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.ಈ ವೇಳೆ ಪ್ರಮಾಣ ಪತ್ರ ಹಾಗೂ ಶೈಕ್ಷಣಿಕ ಕಿಟ್ ವಿತರಣೆ ಮಾಡಿ ಮಾತನಾಡಿದ ಪಟ್ಟಣ ಪಂಚಾಯತನ ಆರೋಗ್ಯ ನೀರೀಕ್ಷಕರು ತೇಜಶ್ವಿನಿ ಮಗಿ ಮಕ್ಕಳು ಶಿಕ್ಷಣದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ.
ಪ್ರಬಂಧ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಸುತ್ತಮುತ್ತಲೂ ಪ್ರತಿನಿತ್ಯ ಕಾಣುವ ಪರಿಸರದ ಕುರಿತು ಅದರ ಸಂರಕ್ಷಣೆ ಹಾಗೂ ಸ್ವಚ್ಚತಾ ನಿರ್ವಹಣೆ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಿರಿ.ಪ್ರಬಂಧ ರೂಪದಲ್ಲಿ ಮಂಡಿಸಿರುವ ನಿಮ್ಮ ಸಲಹೆ ಹಾಗೂ ಸೂಚನೆಗಳು ಸರಕಾರ ಅನುಷ್ಠಾನ ತರುವ ನಿಟ್ಟಿನಲ್ಲಿ ಉಪಯುಕ್ತ ವಾಗಬಲ್ಲದು.ಸಾರ್ವಜನಿಕರು ಹಾಗೂ ಮಕ್ಕಳು ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಬಟ್ಟೆಯ ಚೀಲಗಳನ್ನು ಬಳಸಬೇಕು ಎಂದು ಕರೆ ಕೊಟ್ಟರು.ಬದಲಾವಣೆ ನಮ್ಮಿಂದಲೇ ಆಗಬೇಕು ಅಂದಾಗ ಮಾತ್ರ ಸ್ವಚ್ಛ ಪಟ್ಟಣ ನಿರ್ಮಿಸಲು ಸಾಧ್ಯ ಎಂದರು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ ಮಾತನಾಡಿ ಸಮಾಜ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಇಂತಹ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರಿ್ಡಸಿ ಅವರಲ್ಲಿ ಪರಿಸರ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ ಪ್ರಶಸ್ತಿ ವಿತರಣೆ ಮಾಡಿರುವುದು ಪಟ್ಟಣ ಪಂಚಾಯತ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಆಲಮೇಲ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಉತ್ತಮ ಕೆಲಸ ಮಾಡಿ ಅಫಜಲಪುರ ಪುರಸಭೆಗೆ ವರ್ಗಾವಣೆ ಗೊಂಡ ಆರೋಗ್ಯ ನೀರೀಕ್ಷಕರಾದ ತೇಜಶ್ವಿನಿ ಮಗಿ ರವರಿಗೆ ಶಾಲೆಯ ವತಿಯಿಂದ ಗೌರವಿಸಿ ಬಿಳ್ಕೊಡಲಾಯಿತು.ಈ ವೇಳೆ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ,ಪಟ್ಟಣ ಪಂಚಾಯತನ ಸಿಬ್ಬಂದಿ ಅಶ್ವಿನಿ ಗುರುಕಾರ,ಸುಮಿತ್ರಾ ಬಿಳೆಂಬಗಿ,ಅಂಬಿಕಾ ನಾಟೀಕಾರ ,ಶಿಕ್ಷಕರಾದ ಚಂದ್ರಕಾಂತ ದೇವರಮನಿ,ಲಕ್ಷ್ಮೀಬಾಯಿ ಹಳೇಮನಿ,ಸುವರ್ಣ ಸಾರಂಗಮಠ, ಸೀತಾ ಆರೇಶಂಕರ,ಸರುಬಾಯಿ ಗಡದೆ,ಸುನೀತಾ ಗುಂಡದ,ವೀಣಾ ರಾಂಪೂರಮಠ ,ಚೈತ್ರಾ ಕೆರಿ ಮುಂತಾದವರು ಉಪಸ್ಥಿತರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 