ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣ್ಳೆ

ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣ್ಳೆ Prize distribution ceremony for Chennaveera Kanavi Poetry Competition and Shantadevi Kanavi Story Co

ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣ್ಳೆ 

ಧಾರವಾಡ 27:  ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕನ್ನಡದ ಯುವ ಲೇಖಕರಿಗೆ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆಯನ್ನು ದಿನಾಂಕ: 28-6-2025 ರಂದು ಮುಂಜಾನೆ 10-30 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಏರಿ​‍್ಡಸಿದೆ.ಹೊಸಪೇಟೆಯ ಹಿರಿಯ ವಿಮರ್ಶಕರಾದ ಡಾ. ರಹಮತ್ ತರೀಕೆರೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಧಾರವಾಡದ ಸಾಹಿತಿಗಳಾದ ಡಾ. ಜಿ. ಎಂ. ಹೆಗಡೆ ಬಹುಮಾನ ಪ್ರದಾನ ಮಾಡುವರು. ಧಾರವಾಡದ ಸಾಹಿತಿ ಡಾ. ಪ್ರಜ್ಞಾ ಮತ್ತಿಹಳ್ಳಿ ನಿರ್ಣಾಯಕರ ನುಡಿಗಳನ್ನಾಡುವರು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.  

ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಪ್ರಥಮ: ಮಧು ಕಾರಗಿ, ಕೆರವಡಿ, ಬ್ಯಾಡಗಿ ಕಾವ್ಯ : ಮಿತಿ ದ್ವಿತೀಯ: ಜಯಶ್ರೀ ಇಡ್ಕಿದು, ಏಮಾಜೆ ಮನೆ ಇಡ್ಕಿದು, ಬಂಟ್ವಾಳ ಕಾವ್ಯ : ಅಮ್ಮ ಮತ ಚೂಡಿದಾರ ತೃತೀಯ : ಸಂಜೀವ ಜಗ್ಲಿ, ಮಾನ್ವಿ ಕಾವ್ಯ : ಸೂಳೆ ಯಾರು ಚಂದನ ಡಿ. ನಾಯ್ಕ, ಶಿರಸಿ 

ಕಾವ್ಯ : ಯಾಕಿಷ್ಟೊಂದು ನೆನಪಾಗುತ್ತೀಯೇ ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ಪ್ರಥಮ  : ದಿವ್ಯಶ್ರೀ ಅದರಂತೆ, ಅದರಂತೆ, ಸಾಗರ ಕಥೆ : ಪುಟ್ಟಿ ದ್ವಿತೀಯ : ಶ್ರೀಮತಿ ರಂಜಿತಾ ವಿಕ್ರಮ ಮಹಾಜನ, ಬೆಳಗಾವಿ ಕಥೆ : ಭಿಕ್ಷೆ ತೃತೀಯ : ವಿದ್ಯಾಶ್ರೀ ಹಡಪದ, ಕಾರಟಗಿ ಕಥೆ : ಪಶ್ಚಾತಾಪ ಡಾ. ಕಾವ್ಯಾ ಕೆ. ಎಸ್‌., ಕುರುಬರ ಮಲ್ಲೂರ, ಸವಣೂರ ಕಥೆ : ಬೆಂಕಿ ಹಿಂದಿನ ಆ ನೇರಳು...! 

ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.