ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಇರಲಿ: ಜೆ.ಜಿ.ಸೈಯದ

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಇರಲಿ: ಜೆ.ಜಿ.ಸೈಯದ Priority should be given to quality education: J.G. Saiyad

ಧಾರವಾಡ 10: ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಅವರ ಜ್ಞಾಪನದಂತೆ ಸರಕಾರಿ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಲಿಕಾ ಗುಣಮಟ್ಟವನ್ನು ಪರೀಶೀಲಿಸಬೇಕಾಗಿದೆ. ಕಾರ್ಯಕ್ರಮದ ಭಾಗವಾಗಿ ಕೆಪಿಎಸ್ ಕರಡಿಗುಡ್ಡ ಶಾಲೆಗೆ ಭೇಟಿ ನೀಡಲಾಯಿತು. ತರಗತಿವಾರು ಮಕ್ಕಳ ಕಲಿಕಾ ಗುಣಮಟ್ಟವನ್ನು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳ ಕಾರ್ಯಕ್ರಮ, ಇಲಾಖೆಯ ಮಹತ್ವದ ಕಾರ್ಯಕ್ರಮಗಳಾದ ಎಫ್‌.ಎಲ್‌.ಎನ್, ಎಲ್‌ಬಿಎ ಅನುಷ್ಠಾನದ ಪ್ರಗತಿಯನ್ನು ಪರೀಶೀಲಿಸಲಾಯಿತು. ಶಾಲೆಗೆ ಅನಿಯಮಿತವಾಗಿ ಗೈರು ಹಾಜರಾಗುವ ಮಕ್ಕಳನ್ನು ಅವರ ಪಾಲಕರೊಂದಿಗೆ ಚರ್ಚಿಸಿ ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಕ್ರಮವಹಿಸಲು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಲಾಯಿತು. ಒಟ್ಟಾರೆಯಾಗಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಮತ್ತು ಎಸ್‌ಡಿಎಂಸಿಯವರು ಕಾರ್ಯಪ್ರವೃತ್ತರಾಗಬೇಕೆಂದು ಡಯಟ್ ಪ್ರಾಚಾರ್ಯರಾದ ಜೆ.ಜಿ.ಸೈಯದ ಸೂಚಿಸಿದರು. ಈ ಸಂದರ್ಭದಲ್ಲಿ ಡಯಟ್ ಹಿರಿಯ ಉಪನ್ಯಾಸಕಿ ರೇಖಾ ಭಜಂತ್ರಿ, ಎಪಿಸಿಓ ಸಿ.ಬಿ.ರಾಠೋಡ್ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಿದರು.