ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ

ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ Priority for the academic development of government colleges

ಲೋಕದರ್ಶನ ವರದಿ 

ಹೂವಿನ ಹಡಗಲಿ 28 :  ತಾಲೂಕಿನ ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿ ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಶಾಸಕ ಎಲ್ ಕೃಷ್ಣನಾಯಕ ಹೇಳಿದರು. ಪಟ್ಟಣದ ಜಿ ಪಿ ಜಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ 2026-27 ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ವಿವಿಧ ವಿದ್ಯಾರ್ಥಿ ಸಂಘಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವವರು ಬಹುತೇಕ ಬಡವರ ಮಧ್ಯಮ ವರ್ಗದ ಕುಟುಂಬದವರು.ಇವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ನಿರಂತರವಾಗಿ ಆಗಬೇಕು. ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು. ಉಪನ್ಯಾಸಕ ಲೇಖಕ ದಯಾನಂದ ಕಿನ್ನಾಳ ಉಪನ್ಯಾನ ನೀಡಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯ ಎಂದರು.

ಪ್ರಾಚಾರ್ಯ ಕೋರಿ ಹಾಲೇಶ  ಅಧ್ಯಕ್ಷತೆ ವಹಿಸಿದ್ದರು.ಕಳೆದ ಸಾಲಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಪುರಸ್ಕಾರ ಬಹುಮಾನವನ್ನು ಪ್ರಭು ಸೊಪ್ಪಿನ, ನಿಜಲಿಂಗಗೌಡ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ ಪತ್ರೇಶ್ ನೀಡಿದರು. ಮುಖಂಡರಾದ ಹಣ್ಣಿ ಶಶಿಧರ ಜೆ ಶಿವರಾಜ್ ಕೆ ಪುತ್ರೇಶ್ ಮುಖ್ಯ ಗುರು ಮಹಮ್ಮದ್ ರಫಿ ಇದ್ದರು. ಇದೇ ವೇಳೆ ಜಿಲ್ಲಾ ಮತ್ತು ತಾಲೂಕು ಪದವಿ ಪೂರ್ವ ಕಾಲೇಜು ಸಂಘದ ಪದಾಧಿಕಾರಿಗಳಾದ ಜೆ ಪ್ರದೀಪ್ ಕುಮಾರ್ ವಿರುಪಾಕ್ಷಪ್ಪ ಬಡಿಗೇರ್ ಎಂ ಶಬೀನ ರವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಶಂಕರ್ ಬೆಟಗೇರಿ ಮಧುನಾಯ್ಕ್‌ ಮಹೇಶ್ ಜಿ ಮಹಮದ್ ರಫಿ ಡಿ ಕೃಷ್ಣ, ಶಿವಪ್ಪ ಎಂ ಇರ್ಫಾನಬಾನು, ಹೊನ್ನಪ್ಪ ಇದ್ದರು.ದಿವ್ಯ ಮತ್ತು ಸುನಿಮಾ ನಿರ್ವಹಿಸಿದರು.