ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ಅಗತ್ಯ: ಅಶೋಕ ಬಿರಾದಾರ

ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ಅಗತ್ಯ: ಅಶೋಕ ಬಿರಾದಾರ  Priority for pre-primary education is essential: Ashok Biradar

ಸಿಂದಗಿ 18: ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಅತ್ಯಂತ ಮಹತ್ವದ್ದಾಗಿದ್ದು, ಉತ್ತಮ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿಂದಗಿ ನಗರದಲ್ಲಿರುವ ಯುರೋ ಕಿಡ್ಸ್‌ ಶಾಲೆ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಸಿಂದಗಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ ಬಿರಾದಾರ ಹೇಳಿದರು.  

ಅವರು ಯುರೋ ಕಿಡ್ಸ್‌ ಇಂಟರ್ನ್ಯಾಷನಲ್ ಪ್ರೀ ಸ್ಕೂಲ್ನಲ್ಲಿ ಜುಲೈ 1ರಂದು ನಡೆದ ಪಾಲಕರ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಾಲೆ ಹಾಗೂ ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.  

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಸೆಂಟರ್ ಹೆಡ್ ಕವಿತಾ ಹಿರೇಮಠ, ಶಾಲೆಯ ವಿಶೇಷ ಪಠ್ಯಕ್ರಮ, ಇತರೆ ಶಾಲೆಗಳಿಗಿಂತ ವಿಭಿನ್ನವಾದ ಬೋಧನಾ ವಿಧಾನಗಳು ಹಾಗೂ ಮಕ್ಕಳಿಗಾಗಿ ಅನುಸರಿಸುತ್ತಿರುವ ಕಾಳಜಿ ಕ್ರಮಗಳ ಕುರಿತು ಪಾಲಕರಿಗೆ ವಿವರಿಸಿದರು.  

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಜ್ಞಾನ ಪ್ರಗತಿ ಪರಿಷತ್ನ ಹಿರಿಯ ಪಿರಮಿಡ್ ಶಿಕ್ಷಕಿ ಧನಮ್ಮ ಬಿರಾದಾರ ಮಾತನಾಡಿ, ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ಪಾಲಕರ ಸಹನೆ, ಶಾಂತಿ ಮತ್ತು ನೆಮ್ಮದಿಯ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಉತ್ತಮ ಜೀವನಶೈಲಿ ರೂಪಿಸಲು ಪ್ರತಿದಿನ ಧ್ಯಾನ, ಯೋಗಾಸನ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ನವೀನಕುಮಾರ ರೂಗಿ ಅವರು ವಿಶ್ವ ವೈದ್ಯರ ದಿನದ ಅಂಗವಾಗಿ ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು. ಸಂಸ್ಥೆಯ ಅಧ್ಯಕ್ಷೆ ಸಾಕ್ಷಿ ಎಸ್‌. ಪಾಟೀಲ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಎಸ್‌. ರೂಗಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಶಿಕ್ಷಕಿಯರಾದ ಸವಿತಾ ತಳಕೇರಿ ಮತ್ತು ರಂಜಿತಾ ಗುಡ್ಡಿ ಉಪಸ್ಥಿತರಿದ್ದರು. ಕವಿತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.