ಕೋಲಾರ, ನವೆಂಬರ್ 4: ನರಸಾಪುರದಲ್ಲಿ ಐಫೋನ್ ಕಾರ್ಖಾನೆ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ತಿಂಗಳಲ್ಲಿ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ ಎಂದು ಲೋಕಸಭಾ ಸದಸ್ಯ ಎಸ್. ಮುನಿಸ್ವಾಮಿ ಸೋಮವಾರ ತಿಳಿಸಿದ್ದಾರೆ. ಕೋಲಾರ ತಾಲ್ಲೂಕಿನ ಕಾಮಸಮುದ್ರದಲ್ಲಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೇಮಕಾತಿ ಸಂದರ್ಭದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲು ಕಂಪನಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಆಪಲ್ ಇಂಕ್ನ ತೈವಾನೀಸ್ ಗುತ್ತಿಗೆ ತಯಾರಕ ಸಂಸ್ಥೆಯಾದ ವಿಸ್ಟ್ರಾನ್ ಕಾರ್ಪ್ , ಕರ್ನಾಟಕದಲ್ಲಿ ಗ್ರೀನ್ಫೀಲ್ಡ್ ಸ್ಮಾಟರ್್ಫೋನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಎರಡು ಹಂತಗಳಲ್ಲಿ ಸುಮಾರು 3,000 ಕೋಟಿ ರೂ.ಹೂಡಿಕೆ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. ವಿಸ್ಟ್ರಾನ್ ಟೆಕ್ನಾಲಜೀಸ್ನ ಉನ್ನತ ಮಟ್ಟದ ಅಧಿಕಾರಿಗಳ ತಂಡವು ಅದರ ಮುಖ್ಯಸ್ಥ ಫ್ರಾಂಕ್ ಲಿನ್ ನೇತೃತ್ವದಲ್ಲಿ ಮತ್ತು ವಿಸ್ಟ್ರಾನ್ ಇನ್ಫೋಕಾಮ್ ಮ್ಯಾನ್ಯುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಎ. ಗುರುರಾಜ್ ಅವರೊಂದಿಗೆ ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಈ ನಿಟ್ಟಿನಲ್ಲಿ 2 ನೇ ಹಂತ ಪೂರ್ಣಗೊಂಡ ನಂತರ ಪ್ರಸ್ತಾವಿತ ಉತ್ಪಾದನಾ ಘಟಕವು ಸುಮಾರು 10,000 ಉದ್ಯೋಗಗಳನ್ನು ಸೃಷ್ಟಿಸಲಿದೆ. ವಿಸ್ಟ್ರಾನ್ ಆಪಲ್ನ ಕಡಿಮೆ ಬೆಲೆಯ ಸ್ಮಾಟರ್್ಫೋನ್ ಐಫೋನ್ ಎಸ್ಇ ಅನ್ನು ತನ್ನ ಪೀಣ್ಯ ಕೇಂದ್ರದಲ್ಲಿ ಮೇ 2017 ರಲ್ಲಿ ಜೋಡಿಸಲು ಪ್ರಾರಂಭಿಸಿತು. ಉತ್ಪನ್ನವನ್ನು ಜೂನ್ 2017 ರಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಆಪಲ್ಗಾಗಿ ಸ್ಮಾರ್ಟ್ ಫೋನ್ಗಳನ್ನು ತಯಾರಿಸುವುದರ ಹೊರತಾಗಿ, ವಿಸ್ಟ್ರಾನ್ ವಿವಿಧ ಘಟಕಗಳಿಗೆ ಮತ್ತು ಇತರ ಬ್ರ್ಯಂಡ್ಗಳಿಗೆ ಉತ್ಪನ್ನಗಳನ್ನು ತಯಾರಿಸುತ್ತದೆ. ಆಪಲ್ ಸಾಮಾಜಿಕ ಮಾಧ್ಯಮಕ್ಕಾಗಿ ವ್ಯಾಪಕವಾಗಿ ಬಳಸಲಾಗುವ ಐಫೋನ್ 6 ಅಥವಾ ಐಫೋನ್ 7 ಪ್ಲಸ್ ತಯಾರಿಕೆಗಾಗಿ ಕೈಗಾರಿಕೆ ಎದುರು ನೋಡುತ್ತಿದೆ ಎಂದು ಉದ್ಯಮದ ವಿಶ್ಲೇಷಕರು ಹೇಳುತ್ತಾರೆ. ಆಪಲ್ ತನ್ನ ಸ್ಮಾರ್ಟ್ ಫೋನ್ಗಳನ್ನು ಭಾರತದಲ್ಲಿ ತಯಾರಿಸಲು ಉತ್ಸುಕವಾಗಿದೆ. ದೇಶದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.