ನವದೆಹಲಿ, ಜು 3: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಿಗ್ಗೆ ಲಡಾಖ್‌ನ ಲೇಹ್ ತಲುಪಿದ್ದು, ಚೀನಾ ಜೊತೆಗಿನ ಗಡಿ ಚಕಮಕಿ ಮಧ್ಯೆ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದರು.
ರಕ್ಷಣಾ ಮೂಲಗಳ ಪ್ರಕಾರ, ಜೂನ್ 15 ರಂದು ಚೀನಾದ ಪೀಪಲ್ ಆಫ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ಮುಖಾಮುಖಿಯಾಗಿ ಹಿಂಸಾತ್ಮಕವಾಗಿ ಗಾಯಗೊಂಡ ಸೈನಿಕರೊಂದಿಗೆ ಪ್ರಧಾನಿ ಸಂವಹನ ನಡೆಸಲಿದ್ದಾರೆ.
ಸೈನಿಕರೊಂದಿಗಿನ ಅವರ ಭೇಟಿಯು ಪಡೆಗಳಿಗೆ ಮನೋಸ್ಥೈರ್ಯ ತುಂಬುವ ನಿರೀಕ್ಷೆಯಿದೆ. ಅಲ್ಲದೆ ಲೇಹ್ ಮೂಲದ XIV ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಭಾರತೀಯ ಸೇನೆಯ ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೇಹ್‌ಗೆ ಭೇಟಿ ನೀಡಬೇಕಿತ್ತಾದರೂ, ಅವರು ಗುರುವಾರ ತಮ್ಮ ಭೇಟಿಯನ್ನು ಮುಂದೂಡಿದ್ದಾರೆ.