ಕಠ್ಮಂಡು, ಸೆ 17 ಪ್ರಧಾನಿ ನರೇಂದ್ರ ಮೋದಿಯವರ 69ನೇ ಜನ್ಮದಿನದ ಹಿನ್ನೆಲೆಯಲ್ಲಿ ದೇಶ, ವಿದೇಶಗಳ ಗಣ್ಯರಿಂದ ಶುಭಾಶಯದ ಮಹಾಪೂರ ಹರಿದುಬರುತ್ತಿದೆ
ನೇಪಾಳ ಪ್ರಧಾನ ಮಂತಿ ಕೆ ಪಿ ಶರ್ಮಾ ಓಲಿಯವರೂ ಸಹ ಮಂಗಳವಾರ ಪ್ರಧಾನಿ ಮೋದಿಯವರಿಗೆ ಶುಭ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಉತ್ತಮ ಆರೋಗ್ಯ, ಸಂತಸದಾಯಕ ಜೀವನ ನಿಮ್ಮದಾಗಲಿ ಎಂದು ಟ್ವಿಟರ್ ಮೂಲಕ ಹಾರೈಸಿದ್ದಾರೆ.
ಭಾರತ ಮತ್ತು ನೇಪಾಳದ ನಡುವಿನ ಬಹುಮುಖಿ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದು ಪ್ರಧಾನಿ ಕೆ ಪಿ ಶರ್ಮಾ ಓಲಿ ಆಶಿಸಿದ್ದಾರೆ.