ಪ್ರಧಾನಮಂತ್ರಿ ಕಿಸಾನ್ಮಾನ್ಧನ್ ರೈತ ಪಿಂಚಣಿ ಯೋಜನೆ ಸದುಪಯೋಗಕ್ಕೆ ಮೇತ್ರಿ ಕರೆ

ಧಾರವಾಡ 11: ಕೇಂದ್ರ ಸಕರ್ಾರವು ಕೃಷಿ ಮತ್ತು ಕೃಷಿ ಅವಲಂಭಿಸಿರುವ ಕೃಷಿ ಕಾಮರ್ಿಕರು, ಸಣ್ಣ ರೈತರು ಮತ್ತು ಅತೀ ಸಣ್ಣ ರೈತರನ್ನು ಆಥರ್ಿಕವಾಗಿ ಸಬಲಗೊಳಿಸಲು ಮತ್ತು ಇಳಿ ವಯಸ್ಸಿನಲ್ಲಿ ನಿಶ್ಚಿತ ಆದಾಯ ಬರುವಂತೆ ಪ್ರಧಾನಮಂತ್ರಿ ಕಿಸಾನ್ ಮಾನ್ಧನ್ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಎಲ್ಲ ರೈತ, ರೈತ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕೆಂದು ಧಾರವಾಡ ತಾಲೂಕಾ ಸಹಾಯಕ ಕೃಷಿ ನಿದರ್ೆಶಕ ಸಿ.ಜಿ. ಮೇತ್ರಿ ಹೇಳಿದರು.

ಅವರು ಇಂದು ಬೆಳಿಗ್ಗೆ ಮನಗುಂಡಿ ಗ್ರಾಮದ ಗ್ರಾಮಪಂಚಾಯತ್ದಲ್ಲಿ ರೈತರ ಸಭೆ ಜರುಗಿಸಿ ಮಾತನಾಡಿದರು. 

ಪಿಂಚಣಿಗೆ ನೊಂದಣಿ ಮಾಡಿಸಿದ ಕೃಷಿ ಕಾಮರ್ಿಕರ, ಸಣ್ಣ ರೈತ ಮತ್ತು ಅತೀ ಸಣ್ಣ ರೈತ ಹಾಗೂ ರೈತನ ಪತ್ನಿಯು 60 ವರ್ಷಗಳ ನಂತರ ಕನಿಷ್ಠ ರೂ.3,000/- ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಗರಿಷ್ಠ 2 ಹೆಕ್ಟೇರ್ವರೆಗೆ ಭೂ ಹಿಡುವಳಿ ಹೊಂದಿರುವ 18 ರಿಂದ 40 ವರ್ಷದೊಳಗಿನ ರೈತ ಅಥವಾ ರೈತನ ಪತ್ನಿ ಈ ಯೋಜನೆಗೆ ನೊಂದಾಯಿಸಲು ಅರ್ಹರಾಗಿದ್ದಾರೆ. 

ಪಿಂಚಣಿಗೆ ವಯಸ್ಸಿನ ಆಧಾರದ ಮೇಲೆ ಮಾಸಿಕ ರೂ.55 ರಿಂದ 200 ರ ವರೆಗೆ ರೈತರು ತಮ್ಮ ವಂತಿಗೆಯನ್ನು ತುಂಬಬೇಕಾಗುತ್ತದೆ. ಮತ್ತು ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸಕರ್ಾರದ ನೆರವಿನ ಮೊತ್ತ ಪಡೆಯಲು ಆರಂಭಿಸಿರುವ ಉಳಿತಾಯ ಖಾತೆಯಿಂದಲೂ ಈ ಪಿಂಚಣಿಗೆ ವಂತಿಗೆ ಪಾವತಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಮ್ಮ ವೈಯಕ್ತಿಕ ಉಳಿತಾಯ ಖಾತೆಯಿಂದಲೂ ಸಹ ವಂತಿಗೆಯನ್ನು ಕಟಾವನೆ ಮಾಡಬಹುದಾಗಿದೆ. 

ರೈತರು ಪಾವತಿಸುವ ವಂತಿಗೆಯ ಮೊತ್ತಕ್ಕೆ ಸಮಾನ ಮೊತ್ತವನ್ನು ಕೇಂದ್ರಸಕರ್ಾರವು ಪಿಂಚಣಿ ನಿಧಿಗೆ ಪಾವತಿಸುತ್ತದೆ. ಅರ್ಹ ಹಾಗೂ ಆಸಕ್ತಿ ಇರುವ ರೈತ ಅಥವಾ ರೈತ ಮಹಿಳೆ ತಮ್ಮ ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜನ್ಮ ದಿನಾಂಕ ಮತ್ತು ಪಿಂಚಣಿ ಯೋಜನೆಗೆ ನಾಮನಿದರ್ೆಶನ ನೀಡುವ ಮೂಲಕ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಆರಂಭಿಸಿರುವ ನಾಗರಿಕ ಸೇವಾ ಕೇಂದ್ರದ ಪ್ರತಿನಿಧಿಗಳಲ್ಲಿ ಅಥವಾ ನಾಗರಿಕ ಸೇವಾ ಕೇಂದ್ರ (ಸಿಎಸ್ಸಿ ಸೆಂಟರ್) ಗಳಲ್ಲಿ ಪಿಂಚಣಿ ಯೋಜನೆಗೆ ನೊಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ನೆರವಿಗಾಗಿ ಧಾರವಾಡ ತಹಶೀಲ್ದಾರ ಕಚೇರಿ ಬಳಿ ಇರುವ ಸಕರ್ಾರದಿಂದ ಪರವಾನಿಗೆ ಪಡೆದಿರುವ ನಾಗರಿಕ ಸೇವಾ ಕೇಂದ್ರ (9066664882) ವನ್ನು ಸಂಪಕರ್ಿಸಬೇಕು ಎಂದು ಹೇಳಿದರು. 

ತಾಲೂಕಾ ಪಂಚಾಯತ್ ಸದಸ್ಯ ಫಕ್ಕೀರಪ್ಪ ಬುಡ್ಡಿಕಾಯಿ, ಮನಗುಂಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಅನ್ನಪೂರ್ಣ ಶಿರಸಂಗಿಮಠ, ಕೃಷಿ ಅಧಿಕಾರಿ ಸುಷ್ಮಾ ಮಳಿಮಠ, ಸಹಾಯಕ ಕೃಷಿ ಅಧಿಕಾರಿ ಪುರುಷೋತ್ತಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾಟೀಲ, ಸೇರಿದಂತೆ ಗ್ರಾಮದ ಪ್ರಮುಖರು, ರೈತರು ಭಾಗವಹಿಸಿದ್ದರು.