ಪ್ರಧಾನಿ ಸ್ವಕ್ಷೇತ್ರಕ್ಕೆ ಭೇಟಿ: ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ

ನವದೆಹಲಿ, ಅ.23:     ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ಸ್ವ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಅಕ್ಟೋಬರ್ 24 ರಂದು ನಾನು ತನ್ನ ಸಂಸತ್ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಹನ ನಡೆಸುತ್ತೇನೆ. ಎಲ್ಲ ಕಾರ್ಯಕರ್ತರು ಅದರ ಭಾಗವಾಗುವಂತೆ ನಾನು ಆಹ್ವಾನಿಸಿದ್ದೇನೆ. ನಿಮಗೆ ಯಾವುದೇ ಸಲಹೆಗಳು ಅಥವಾ ಪ್ರಶ್ನೆಗಳಿದ್ದರೆ, ನೀವು ಅದನ್ನು ನಾಮೋ ಆಪ್ನಲ್ಲಿ ಹಂಚಿಕೊಳ್ಳಬಹುದು ಅವರು ಟ್ವೀಟ್ ಮಾಡಿದ್ದಾರೆ. 

ಮೋದಿ ಅವರು 2014ರಿಂದ ವಾರಣಾಸಿ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ ಅಕ್ಟೋಬರ್ 24 ರಂದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಎಣಿಕೆ ನಡೆಯಲಿದೆ. ಸೋಮವಾರ ಸಂಜೆ ಮುಗಿದ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಕೂಡಲೇ ಪ್ರಸಾರವಾದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿವೆ.