ಶಿಕ್ಷಕ ಹುದ್ದೆ ಅಲಂಕರಿಸಲು ಪೂರ್ವ ಜನುಮದ ಪುಣ್ಯ ಬೇಕು: ಪ್ರಭು ಮಹಾಸ್ವಾಮಿಗಳು
Previous birth merit is required to hold a tePrevious birth merit is required to hold a teaching pos
ಶಿಕ್ಷಕ ಹುದ್ದೆ ಅಲಂಕರಿಸಲು ಪೂರ್ವ ಜನುಮದ ಪುಣ್ಯ ಬೇಕು: ಪ್ರಭು ಮಹಾಸ್ವಾಮಿಗಳು
ರನ್ನ ಬೆಳಗಲಿ 03 : ಪಟ್ಟಣದ ಗುರು ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ,ಬೆಳಗಲಿ ವಿದ್ಯಾವರ್ಧಕ ಸಂಘ ಪ್ರೌಢ, ಪದವಿ-ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ, ರನ್ನಬೆಳಗಲಿ ಇವರ ಸಂಯುಕ್ತ ಆಶ್ರಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ ಬಿ ಕುಂಬಾಳಿ ಅವರ ಸೇವಾ ನಿವೃತ್ತಿ ಬೀಳ್ಕೊಡುಗೆಯ ಸನ್ಮಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪರಮ್ ಪೂಜ್ಯ ಪ್ರಭು ಮಹಾಸ್ವಾಮಿಗಳು ವಿರಕ್ತಮಠ ಚಿಮ್ಮಡ ಶ್ರೀಗಳು ಶಿಕ್ಷಕ ಹುದ್ದೆ ಲಂಕರಿಸಲು ಪೂರ್ವ ಜನ್ಮದ ಪುಣ್ಯ ಬೇಕು. ಕೆ ಬಿ ಕುಂಬಾಳಿ ಗುರುಗಳ ಬೀಳ್ಕೊಡುಗೆ ಸಡಗರವನ್ನು ಕಂಡಾಗ ಅವರು ತ್ಯಾಗ ಮತ್ತು ಪರಿಶ್ರಮ ಫಲ ಎಷ್ಟು ಎಂಬುದು ತಿಳಿದು ಬರುತ್ತದೆ. ಊರೆಲ್ಲ ಅಲಂಕರಿಸಿ ಬೆಳ್ಳಿ ರಥದಲ್ಲಿ ಕೂರಿಸಿ ಜಯ ಘೋಷ ಜೊತೆಗೆ ಹೂ ಮಳೆಯ ಸುರಿದು ಸತ್ಕರಿಸಿ ವಿನಮ್ರತೆ ಯಿಂದ ಭಾಗಿದ ಶಿಷ್ಯ ವೃಂದ ಕಂಡಾಗ ಶಿಕ್ಷಕ ತನ್ನ ಸೇವಾ ಅವಧಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಹೃದಯದಲ್ಲಿ ಮಂದಿರವನ್ನು ಕಟ್ಟಿಸಿ ಕೊಂಡಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ, ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿಲ್ಲ ವಯೋನಿವೃತ್ತಿ ಹೊಂದಿದ್ದಾರೆ.
ಇನ್ನೂ ಅವರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.ಕೆ ಬಿ ಕುಂಬಾಳಿ ನಿವೃತ್ತ ದೈಹಿಕ ಶಿಕ್ಷಕರು ನಮ್ಮೂರಿನ ಬೆಳಗಲಿ ವಿದ್ಯಾ ವರ್ಧಕ ಸಂಘಕ್ಕೆ ಧನ್ಯವಾದ ಸಲ್ಲಿಸುತ್ತೇನೆ.ಈ ದಿನ ಮರೆಯಲಾರದ ದಿನವಾಗಿದೆ. ನಾನು ನಿವೃತ್ತಿ ಹೊಂದಿದ್ದರು ನನ್ನ ಶಾಲೆಗೆ ನಾನು ಶಿಕ್ಷಕನಾಗಿ ಇರುತ್ತೇನೆ, ಯುವಕರು ಕ್ರೀಡೆಗಳನ್ನು ಪ್ರೀತಿಸಬೇಕು,ಅವುಗಳಿಗೆ ಸಮಯ ಕೊಟ್ಟು ಉತ್ತಮ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಪಡೆಯಲು ನಿತ್ಯ ಕ್ರೀಡಾಪಟುಗಳಾಗಿ ಆಟವಾಡಿ, ಪ್ರಸ್ತುತ ದಿನಗಳಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಸೌಲಭ್ಯಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾಗಳು ನೀಡುತ್ತಿವೆ ಎಂದು ತಿಳಿಸಿದರು. ತಾಲೂಕ ದೈಹಿಕ ಪರೀವೀಕ್ಷಣಾಧಿಕಾರಿಗಳಾದ ಶ್ರೀಶೈಲ ಕುರಣಿ,ಅಧ್ಯಕ್ಷರಾದ ದುಂಡಪ್ಪ ಬರಮನಿ, ಉಪಾಧ್ಯಕ್ಷರಾದ ಚಿಕ್ಕಪ್ಪ ನಾಯಕ, ಚೇರ್ಮನ್ ರಾದ ಪಂಡಿತ ಪೂಜಾರಿ, ಮುತ್ತಪ್ಪ ಹೊಸಪೇಟಿ,ಗುರುನಾಥ ಹಿಪ್ಪರಗಿ, ಭೀಮನಗೌಡ ಪಾಟೀಲ, ಶೇಖರ ಭದ್ರಶೆಟ್ಟಿ, ಬಸವಂತಪ್ಪ ಮುರನಾಳ, ಸಿದ್ದು ಕೊಣ್ಣೂರ, ಪ್ರಕಾಶ ಸಣಹಟ್ಟಿ, ಪುಟ್ಟು ಕುಲಕರ್ಣಿ, ಆರ್ ಎಸ್ ಭಜಂತ್ರಿ, ಎಂ ಎಂ ಮಂಟೂರ, ಗುರವ್ವ ಧಡೂತಿ,ರೇಣುಕಾ ಕುಂಬಾಳಿ,ಅಶೋಕ ಮೂಡಲಗಿ,ಪರಶುರಾಮ ನಾಯಕ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಎಮ್ ಎಸ್ ಗಾಣಿಗೇರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕರಾದ ಕೆ ಎ ಧಡೂತಿ,ರಾಘವೇಂದ್ರ ನೀಲಣ್ಣವರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 