ವಿದ್ಯುತ್ ಚಾಲಿತ ವಾಹನಗಳನ್ನು ಬಳಸಿ ವಾಯುಮಾಲಿನ್ಯ ತಡೆಗಟ್ಟಿ- ಕಾಟೋಕರ್
Prevent air pollution by using electric vehicles - Katokar
ಹಾವೇರಿ 05 : ವಾಹನಗಳ, ಕೈಗಾರಿಕೆಗಳ ವಾಯುಮಾಲಿನ್ಯದಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ, ಮನುಷ್ಯರಿಗೆ ಶ್ವಾಸಕೋಶದ ಸಮಸ್ಯೆ, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತಿದ್ದು, ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ವಾಯುಮಾಲಿನ್ಯ ತಡೆಗೆ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವ ಮೂಲಕ ವಾಯುಮಾನಲಿನ್ಯ ತಡೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕು.ವಿನಯ ಕಾಟೋಕರ್ ಅವರು ಹೇಳಿದರು.
ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬುಧವಾರ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನವೆಂಬರ್ ಮಾಹೆಯ ಚಳಿಗಾಲದ ಸಮಯದಲ್ಲಿ ವಾಯುಮಾಲಿನ್ಯದ ತೀವೃತೆ ಹೆಚ್ಚಾಗಿ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಮೂಹ ಸಾರಿಗೆ ಬಳಸುವ ಮೂಲಕ, ವಿದ್ಯುತ್ ಚಾಲಿತ ಗುಣಮಟ್ಟದ ವಾಹನಗಳನ್ನು ಬಳಸುವ ಮೂಲಕ ವಾಯುಮಾಲಿನ್ಯ ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.
ಪ್ರಥಮ ದರ್ಜೆ ಸಹಾಯಕ ಶ್ರೀಪಾದ ಜ. ಬ್ಯಾಳಿಯವರ ಮಾತನಾಡಿ, 1950ರ ದಶಕದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ರಸಾಯನಶಾಸ್ತ್ರ ಓದುತ್ತಿದ ಯುವಕ “ಚಾರ್ಲ್ಸ ಡೇವಿಡ್ ಕೀಲಿಂಗ್” ಎಂಬ ವಿಜ್ಞಾನಿ ಗಾಳಿಯಲ್ಲಿನ ಕಾರ್ಬನ ಡೈ ಆಕ್ಸೈಡ್ ಅಳೆಯಲು ಮೊಟ್ಟಮೊದಲ ಬಾರಿಗೆ ಸ್ವಯಂಚಾಲಿತ ಸಾಧನವನ್ನು ಆವಿಷ್ಕಾರಗೊಳಿಸಿದ. 1958ರಲ್ಲಿ ವಾಯುಮಾಲಿನ್ಯದ ಪ್ರಮಾಣ 310 (ಕಚಿಡಿ ಕಜಡಿ ಒಟಟಠ) ಇತ್ತು, ನಂತರ ಹೆಚ್ಚಾಗುತ್ತಾ ಹೋಯಿತು. ವಾಯುಮಾಲಿನ್ಯ 320ನ್ನು ದಾಟಿದಾಗ ಜಗತ್ತಿನ ವಿಜ್ಞಾನಿಗಳ ಗಮನ ಹರಿಯಿತು. ಸದ್ರಿ ವಿಜ್ಞಾನಿಯ ಹೆಸರಿನ ಕೀಲಿಂಗ್ ನಕ್ಷೆಯು ವಾಯುಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತದೆ ಎಂದರು.
ಕೀಲಿಂಗ್ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆ ಭೂಮಿಯ ತಾಪಮಾನ ಏರಿಕೆ ಅಧ್ಯಯನ ಮಾಡಲು ಸಂಸ್ಥೆಯೊಂದನ್ನು ಸ್ಥಾಪಿಸಿತು. ಅದು ಪ್ರತಿ ವರ್ಷ ತನ್ನ ವರದಿ ಪ್ರಕಟಿಸುತ್ತಿದೆ. 2015ರಲ್ಲಿ ಪ್ಯಾರಿಸ್‌ನಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆ ಮಾಡಲು ನಡೆದ ಶೃಂಗಸಭೆಯಲ್ಲಿ ನಿರ್ಧರಿಸಲಾಯಿತು, 2016ರ ನವೆಂಬರ್ ತಿಂಗಳಿಂದ ಜಾರಿಯಾಗಿದೆ ಎಂದರು.
ಪರಿಸರ ಸಂರಕ್ಷಣೆ, ನದಿ ಕೆರೆಗಳ ರಕ್ಷಣೆಯು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ, ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಿದಲ್ಲಿ ವಾಯುಮಾಲಿನ್ಯ ತಗ್ಗಿಸಬಹುದಾಗಿದೆ ಎಂದರು.
ಮೋಟಾರು ವಾಹನ ನೀರೀಕ್ಷಕರು ಸುನಿಲಕುಮಾರ ಹೆಚ್. ಮಾತನಾಡಿ, ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ವಾಯುಮಾಲಿನ್ಯ ತಡೆಯಬಹುದಾಗಿದೆ. ಕಲಬೆರಕೆ ಇಂಧನ ಬಳಸದೇ ಪರಿಶುದ್ಧ ಇಂಧನ ಬಳಸಬೇಕು ಹಾಗೂ ಪ್ರತಿಯೊಬ್ಬ ವಾಹನ ಮಾಲೀಕರು ಕಾಲಕಾಲಕ್ಕೆ ವಾಹನಗಳ ನಿರ್ವಹಣೆ ಮಾಡಿ ವಾಯುಮಾಲಿನ್ಯ ಹತೋಟಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕರಾದ ರಮೇಶ ಹೆಚ್. ದೊಡ್ಡಮನಿ, ಕೆ. ರಫಿಯಾ ಬೇಗಂ, ಸತೀಶ ವೈ.ಆರ್., ಪ್ರ.ದ.ಸ.ಗಳಾದ ವಿನಯಕುಮರ ಕೆ.ಸಿ., ಅಕ್ಷಯಕುಮಾರ ಸಂಕಮ್ಮನವರ, ಮೆಹಬೂಬಲಿ ಡಿ. ಹೊಟೆಗಾಳಿ, ವಿನು ಎಂ.ಎಸ್. ಇತರರು ಉಪಸ್ಥಿತರಿದ್ದರು. ಪ್ರ.ದ.ಸ. ಪ್ರಕಾಶನ ಶಿವಪ್ಪ ತಲ್ಲೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 