ಶೇಂಗಾ ತಳಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ

ಶೇಂಗಾ ತಳಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ  Prestigious international award for groundnut variety

ಲೋಕದರ್ಶನ ವರದಿ 

ಧಾರವಾಡ 09: ಧಾರವಾಡ ಕೃಷಿ ವಿಶ್ವವಿದ್ಯಾಲಯವು 2004ರಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ ಉಕಃಆ-4 ಶೇಂಗಾ ತಳಿಗೆ 2026 ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಎಂಬ ಶೀರ್ಷಿಕೆಯಡಿ ಬೆಳೆ ಸುಧಾರಣೆ ಮತ್ತು ಉತ್ಪಾದನಾ ತಂತ್ರಜ್ಞಾನ ವಿಭಾಗದಲ್ಲಿ ಉಕಃಆ-4 ತಳಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.12ರಂದು ನವದೆಹಲಿಯಲ್ಲಿ ನಡೆಯಲಿರುವ 2026 ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಹಾಗೂ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿವೆ. 2004ರಲ್ಲಿ ಬಿಡುಗಡೆಯಾದ ಉಕಃಆ-4 ತಳಿಯು ಎಲೆಚುಕ್ಕೆ ಹಾಗೂ ತುಕ್ಕು ರೋಗಗಳಿಗೆ ಉತ್ತಮ ನಿರೋಧಕತೆ ಹೊಂದಿದ್ದು, ಅಧಿಕ ಇಳುವರಿ ನೀಡುವ ಕಾರಣ ರೈತರಲ್ಲಿ ಜನಪ್ರಿಯವಾಗಿದೆ.

ಇದುವರೆಗೆ ಸುಮಾರು 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ತಳಿಯನ್ನು ಬೆಳೆಯಲಾಗಿದೆ. ಇದರಿಂದ ರೈತರಿಗೆ ಕನಿಷ್ಠ 1,760 ಕೋಟಿ ಆರ್ಥಿಕ ಲಾಭ ದೊರೆತಿದೆ ಎಂದು ಅಂದಾಜಿಸಲಾಗಿದೆ.  -4 ತಳಿಯ ಗುಣಗಳನ್ನು ಆಧರಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಉ2-52, ಆಊ-245, ಆಊ-262, -5 ಹಾಗೂ -4 ಸೇರಿದಂತೆ ಹಲವು ಸುಧಾರಿತ ಶೇಂಗಾ ತಳಿಗಳನ್ನು ಅಭಿವೃದ್ಧಿಪಡಿಸಿದೆ.  2026 ದೊರೆತಿರುವುದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವೈಜ್ಞಾನಿಕ ಸಾಮರ್ಥ್ಯ, ತಳಿ ಸುಧಾರಣಾ ಪರಂಪರೆ ಹಾಗೂ ರೈತಪರ ಬದ್ಧತೆಗೆ ದೊರೆತ ಜಾಗತಿಕ ಮನ್ನಣೆಯಾಗಿದೆ ಎಂದು ಕುಲಪತಿ ಡಾ. ಎನ್‌.ಬಿ. ಪ್ರಕಾಶ್ ತಿಳಿಸಿದ್ದಾರೆ.