ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
Press Day celebrated by Working Journalists Association
ಕಾಗವಾಡ, 19 ; ಪತ್ರಿಕಾರಂಗ ಸತ್ಯಾಂಶವನ್ನು ಸಮಾಜಕ್ಕೆ ಮುಟ್ಟಿಸುವ ಮಹತ್ವದ ಕಾರ್ಯ ಮಾಡುವ ಜೊತೆಗೆ ಸರ್ಕಾರ, ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅವರ ಕಿವಿ ಹಿಂಡಿ, ಜನಪ್ರತಿಧಿಗಳು ಹಾಗೂ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ಶನಿವಾರ ದಿ. 19 ರಂದು ತಾಲೂಕಿನ ಐನಾಪೂರ ಪಟ್ಟಣದ ಕೆಆರ್‌ಇಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಕಾಗವಾಡ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರ ಮತ್ತು ಪೌರಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕಾಯಾಂರ್ಗ, ಶಾಸಕಾಂಗ, ನ್ಯಾಯಾಂಗಳಲ್ಲಿನ ನ್ಯೂನ್ಯತೆ ಹಾಗೂ ಬದಲಾವಣೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ಪತ್ರಿಕೆಗಳು ಮಾಡುತ್ತವೆ. ಪತ್ರಕರ್ತರು ಸಮಾಜದಲ್ಲಾದ ಒಳ್ಳೆಯ ಕಾರ್ಯಗಳ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಇಂದು ಪತ್ರಿಕೆ, ಟಿವ್ಹಿ ಮಾಧ್ಯಮ ಇರದೇ ಹೋಗಿದ್ದಲ್ಲಿ ಸಮಾಜದಲ್ಲಿ ಏನಾಗುತ್ತಿತ್ತು ಎನ್ನುವ ಕಲ್ಪನೆ ಕೂಡ ಮಾಡಲು ಅಸಾಧ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಯುವ ಧುರೀಣ ಚಿದಾನಂದ ಸವದಿ, ಭಾಗವಹಿಸಿ, ಮಾತನಾಡುತ್ತಾ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಕೆಲ ಅನಧಿಕೃತ ವ್ಯಕ್ತಿಗಳು ಪತ್ರಕರ್ತರೆಂದು ಹೇಳಿಕೊಂಡು, ಸರ್ಕಾರಿ ಅಧಿಕಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಸರ್ಕಾರಿ ಕೆಲಸ ನಿರ್ವಹಿಸುವುದೇ ಕಷ್ಟಕರವಾಗಿದ್ದು, ಇಂತಹ ಅನಧಿಕೃತ ಪತ್ರಕರ್ತರನ್ನು ಪತ್ರಕರ್ತರ ಸಂಘಗಳು ನಿಯಂತ್ರಿಸಬೇಕು. ಇಲ್ಲದೇ ಹೋದಲ್ಲಿ ನಿಷ್ಠಾವಂತ ಪತ್ರಕರ್ತರಿಗೆ ಕೆಟ್ಟ ಹೆಸರು ಬರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಸದಲಗಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ವೀರೇಶ ಪಾಟೀಲ ಮಾತನಾಡಿ, ಸಂವಿಧಾನಾತ್ಮಕವಾಗಿ ಪ್ರಮುಖವಾಗಿ ಕಾಯಾಂರ್ಗ, ಶಾಸಕಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗವೂ ಕೂಡ ನಾಲ್ಕನೇ ಮಹತ್ವದ ಅಂಗ ಎಂದು ಪರಿಗಣಿಸಲಾಗಿದೆ. ಮಹರ್ಷಿ ನಾರದರು ವಿಶ್ವದ ಮೊದಲ ಪತ್ರಕರ್ತರಾಗಿದ್ದರು. ಅವರು ಸ್ವರ್ಗ, ನರಕ, ಭೂ ಲೋಕಗಳಲ್ಲಿ ದೇವತೆಗಳ, ರಾಕ್ಷಸರ ಮತ್ತು ಮಾನವರ ಮಧ್ಯ ಸುದ್ದಿ ಮುಟ್ಟಿಸುತ್ತ ಪತ್ರಕರ್ತರಂತೆಯೇ ಕಾರ್ಯನಿರ್ವಹಿಸಿದ್ದರು. ಕಾಲ ಕ್ರಮೇಣ ಪತ್ರಕರ್ತರ, ಪತ್ರಿಕೆಗಳ ವ್ಯಾಪ್ತಿ, ಸ್ವರೂಪ ಬದಲಾಗುತ್ತ ಬಂದಿದೆ. ಸುದ್ದಿ ಮಾಧ್ಯಮಗಳು ಡಂಗುರ ಸಾರಿ ಜನರಿಗೆ ಸುದ್ದಿ ತಿಳಿಸುವುದಿರಿಂದ ಹಿಡಿದು, ಬ್ರೆಕಿಂಗ ಸುದ್ದಿಯ ವರೆಗೆ ಬೆಳೆದು ನಿಂತು, ಸಮಾಜಕ್ಕೆ ಶಿಕ್ಷಣ ನೀಡಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಪತ್ರಕರ್ತರು ಗಾಳಿ ಸುದ್ದಿ ನಂಬಿ ಅನಧಿಕೃತ ಸುದ್ದಿಗಳನ್ನು ಬಿತ್ತರಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಪತ್ರಿಕಾ ರಂಗ ಮಹತ್ವ ಕಳೆದುಕೊಳ್ಳುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಕವಲಗುಡ್ಡ-ಹಣಮಾಪುರದ ಸಿದ್ಧಾಶ್ರಮದ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಪತ್ರಕರ್ತರು ಒಳ್ಳೆಯ ಸಂದೇಶಗಳನ್ನು ತಲುಪಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಶ್ರೀ ಬಸವೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.
ಈ ವೇಳೆ ಪತ್ರಕರ್ತರ ಸಂಘದಿಂದ ಪೌರ ಕಾರ್ಮಿಕರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ ರವೀಂದ್ರ ಹಾದಿಮನಿ, ಅತಿಥಿಗಳಾಗಿ ತಾ.ಪಂ ಅಧಿಕಾರಿ ವೀರಣ್ಣಾ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮಗದುಮ್ಮ, ಶಿಶು ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ಸದಲಗೆ, ಕೆಆರ್‌ಇಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸಂಜೀವ ಭಿರಡಿ, ಅರಳಿಹಟ್ಟಿ ಗ್ರಾ.ಪಂ. ಅಧ್ಯಕ್ಷ ಬಸನಗೌಡ ಪಾಟೀಲ, ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಪ.ಪಂ. ಮುಖ್ಯಾಧಿಕಾರಿ ಮಹಾಂತೇಶ ಕೌಲಾಪೂರೆ, ಕೆ.ಕೆ. ಗಾವಡೆ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಉಮೇಶ ಪಾಟೀಲ, ವಿಜಯಮಹಾಂತೇಶ ಸವದಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಅಣ್ಣಾಸಾಬ ಪಾಟೀಲ, ಜ್ಯೋತಿ ಕುಮಾರ ಪಾಟೀಲ, ರಮೇಶ ಚೌಗಲಾ, ಚಿದಾನಂದ ಅವಟಿ, ದಾದಾ ಪಾಟೀಲ, ಬಸಗೌಡ ಪಾಟೀಲ, ಸಿದ್ದು ಹವಳೆ, ಸತೀಶ ಯರಂಡೋಲಿ, ಅನೀಲಕುಮಾರ ಸತ್ತಿ, ವಿಶ್ವನಾಥ ನಾಮದಾರ, ಅರವಿಂದ ಕಾರ್ಚಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಂಚಾಲಕ ಸುಕುಮಾರ ಬನ್ನೂರೆ, ತಾಲೂಕಾ ಘಟಕದ ಅಧ್ಯಕ್ಷ ಸುರೇಶ ಕಾಗಲಿ, ಗೌರವಾಧ್ಯಕ್ಷ ಸಿದ್ಧಯ್ಯ ಹಿರೇಮಠ, ಸದಸ್ಯರಾದ ಸಚೀನ ಕಾಂಬಳೆ, ವಿಜಯಮಹಾಂತೇಶ ಅರಕೇರಿ, ಮುರುಘೇಶ ಗಸ್ತಿ, ಬಸವರಾಜ ತಾರದಾಳೆ, ಅಮರ ಕಾಂಬಳೆ, ಪ್ರಭಾಕರ ಗೊಂಧಳಿ, ರಘುನಾಥ ದೇಶಿಂಗಕರ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯ ಎ.ಎಂ. ಹುಲ್ಲೆನ್ನವರ ಸ್ವಾಗತಿಸಿದರು. ಎ.ಎಸ್. ನಾಯಿಕ ನಿರೂಪಿಸಿದರು. ಸಚೀನ ಕಾಂಬಳೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 