ಪತ್ರಿಕಾ ದಿನಾಚರಣೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ

ಪತ್ರಿಕಾ ದಿನಾಚರಣೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ  Press Day award ceremony for achievers

ಇಂಡಿ 26: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ( ರಿ ) ಬೆಂಗಳೂರು ವಿಜಯಪುರ ಜಿಲ್ಲಾ ಘಟಕದ  ವತಿಯಿಂದ 2025 ಸಾಲಿನ "ಮಾಧ್ಯಮ ರತ್ನ " ಜಿಲ್ಲಾ ಪ್ರಶಸ್ತಿ ನೀಡಲಾಗುತ್ತಿದೆ. ಇದೆ ರವಿವಾರ ದಿನಾಂಕ 27/07/25 ರಂದು ವಿಜಯಪುರ ನಗರದ ಜಿಲ್ಲಾ ಪಂಚಾಯತಿನ ಗಾಂಧಿ ಭವನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ದೃಶ್ಯ ಮಾಧ್ಯಮದಿಂದ ಸುನೀಲ ಭಾಸ್ಕರ್ ಜಿಲ್ಲಾ ವರದಿಗಾರರು ಪವರ್ ಟಿವಿ. ಮುದ್ರಣ ಮಾಧ್ಯಮದಿಂದ ಐಶ್ವರ್ಯ ತಾಳಿಕೊಟಿ ಜಿಲ್ಲಾ ವರದಿಗಾರುರು ಉದಯಕಾಲ ದಿನಪತ್ರಿಕೆ. ಮಾರುತಿ ಹಿಪ್ಪರಗಿ ಮುದ್ದೇಬಿಹಾಳ ತಾಲೂಕಾ ವರದಿಗಾರರು ಸಂಧ್ಯಾಕಾಲ. ಶ್ರೀಶೈಲ ( ಸಚೀನ ) ಎಸ್ ಇಂಡಿ ತಾಲೂಕಾ ವರದಿಗಾರರು ಲೋಕದರ್ಶನ ಪತ್ರಿಕೆ. ಮಹ್ಮದ ಆಶ್ಫಾಕ ಕರಜಗಿ ಸಿಂದಗಿ ತಾಲೂಕಾ ವರದಿಗಾರರು ಉರ್ದು ಸಾಲಾರ ಪತ್ರಿಕೆ. ಉದಯಕುಮಾರ ಆಕಾಶಿ ಸಂಪಾದಕರು, ವೀರರಾಜ ವಾರ ಪತ್ರಿಕೆ.        ತೌಫಿಕ ಕಲಾದಗಿ ಸಂಪಾದಕರು ಟಿ - ನ್ಯೂಸ್ ,ವೆಬ್ ಪೋರ್ಟಲ್, ವಿಜಯಪುರ. ಕುಮಾರಿ ಭಾರ್ಗವಿ ದೇಶಪಾಂಡೆ ನಿರೂಪಕಿ,ಎಫ್ ಎಂ ನ್ಯೂಸ್ ವಿಜಯಪುರ. ಹಸನ ಮುಲ್ಲಾ ಕೊಲ್ಹಾರ ತಾಲೂಕಾ ವರದಿಗಾರರು ಸುರಂಗ ಪತ್ರಿಕೆ. ಹಸನಡೊಂಗ್ರಿ ಕಮತಗಿ ಕೋಲ್ಹಾರ ತಾಲೂಕಾ ವರದಿಗಾರರು ಉದಯಕಾಲ ದಿನಪತ್ರಿಕೆ. ಗುಲಾಂಮಹ್ಮದ ದಫೇದಾರ ಮುದ್ಧೇಬಿಹಾಳ ತಾಲೂಕಾ ವರದಿಗಾರರು ರಣರಂಗ ಇವರಿಗೆ ನೀಡಲಾಗುತ್ತಿದೆ. ಇನ್ನು ಪ್ರತಿನಿತ್ಯ ಮನೆ ಮನೆಗೆ ಪತ್ರಿಕೆ ಹಾಕುವ ಪತ್ರಿಕಾ ವಿತರಕ ಮುದ್ದೇಬಿಹಾಳನ ವಿನಯ ಕಡ್ಲಿಮಟ್ಟಿ ಗೆ ಸೈಕಲ್ ನೀಡಿ ಗೌರವಿಸಲಾಗುತ್ತಿದೆ. ಇದರ ಜೊತೆಗೆ ಮನಗೂಳಿ ಗ್ರಾಮ ಕೆನರಾ ಬ್ಯಾಂಕ್ ದರೋಡ ಪ್ರಕರಣ ಭೇದಿಸಿ ದೇಶದ ಅತಿ ಹೆಚ್ಚು ಚಿನ್ನ ಜಪ್ತಿ ಮಾಡಿ ಸಾಧನೆಗೈದಿರುವ ಕಾರಣ ವಿಜಯಪೂರ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಹಾಗೂ ರೈತ ಹೋರಾಟಗಾರ ಅರವಿಂದ ಕುಲಕರ್ಣಿ ,ಹಿರಿಯ ಪತ್ರಕರ್ತ ಅನೀಲ ಹೊಸಮನಿ,ಝೀ ನ್ಯೂಸ್ ವಿಜಯಪುರ ಜಿಲ್ಲಾ ವರದಿಗಾರರು,ಸಮಾಜ ಸೇವಕರಾದ ಮಲ್ಲಪ್ಪ ಬಿದರಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತಿದೆ.  

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪ.ಪೂ. ಡಾ:ಫೈರೋಜ್ ಇನಾಮದಾರ,ಪೀಠಾಧಿಪತಿಗಳು ,ಮನಗೂಳಿ ಶರೀಫ್ ಸೂಫಿ ಸಂತರು ವಹಿಸಲಿದ್ದಾರೆ. ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವರಾದ ಮಾನ್ಯ ಶಿವಾನಂದ ಎಸ್ ಪಾಟೀಲ ಅವರು ಉದ್ಘಾಟನೆ ಮಾಡಲಿದ್ದಾರೆ. ಪ್ರಶಸ್ತಿ ಪ್ರದಾನವನ್ನ ಬಿ ವಾಯ್ ವಿಜಯೇಂದ್ರ ರಾಜ್ಯಾಧ್ಯಕ್ಷರು ಬಿಜೆಪಿ ಬೆಂಗಳೂರು ಮಾಡಲಿದ್ದಾರೆ.ವಿಶೇಷ ಸೈಕಲ್ ವಿತರಣೆಯನ್ನ ಶ್ರೀಧರ ಬಿಜ್ಜರಗಿ ರಾಜ್ಯಾಧ್ಯಕ್ಷರು ಯುವ ವಿಕಾಸ ಸಂಘ ನೆರವೇರಿಸಲಿದ್ದಾರೆ.

ಇನ್ನು ಮುಖ್ಯ ಅತಿಥಿಗಳಾಗಿ ಭೀಮನಗೌಡಾ ಪಾಟೀಲ ಶಾಸಕರು ದೇವರಹಿಪ್ಪರಗಿ ಮತಕ್ಷೇತ್ರ, ದೇವಾನಂದ ಚವ್ಹಾಣ ಮಾಜಿ ಶಾಸಕರು ನಾಗಠಾಣ ಮತಕ್ಷೇತ್ರ, ಗುರುಲಿಂಗಪ್ಪ ಅಂಗಡಿ ಜಿಲ್ಲಾಧ್ಯಕ್ಷರು ಬಿಜೆಪಿ ವಿಜಯಪುರ. ಆನಂದ ಕೆ ಜಿಲ್ಲಾಧಿಕಾರಿಗಳು ವಿಜಯಪುರ, ಲಕ್ಷ್ಮಣ ನಿಂಬರಗಿ ಎಸ್ಪಿ ವಿಜಯಪುರ. ವಿಜಯಕುಮಾರ ಮೆಕ್ಕಳಕಿ ಆಯುಕ್ತರು ಮಹಾನಗರ ಪಾಲಿಕೆ ವಿಜಯಪುರ. ಶ್ರೀಶೈಲಗೌಡ ಬಿರಾದಾರ ಬಿಜೆಪಿ ಮುಖಂಡರು, ಸಿಂದಗಿ. ಮಲ್ಲಿಕಾರ್ಜುನ್ ಬಂಗ್ಲೆ ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಬೆಂಗಳೂರು ಸೇರಿದಂತೆ ಹಲವರು ಭಾಗಿ ಆಗಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಯುಸೂಫ್ ನೇವಾರ ಜಿಲ್ಲಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವಿಜಯಪುರ ವಹಿಸಲಿದ್ದಾರೆ. ಈ ಮೂಲಕ ಎಲ್ಲ ಪ್ರಶಸ್ತಿ ಪಾತ್ರರಿಗೆ ಹಾಗೂ ವಿಶೇಷ ಸನ್ಮಾನಿತರಿಗೆ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿಜಯಪೂರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಅಧ್ಯಕ್ಷರಾದ ಯುಸೂಫ್ ನೇವಾರ ಮನವಿ ಮಾಡಿದ್ದಾರೆ.

ಈ ಇರ್ಫಾನ್ ಬಿಳಗಿ ರಾಜ್ಯಕಾರ್ಯಾಧ್ಯಕ್ಷರು.ರಾಹುಲ್ ಮಾನಕರ ರಾಜ್ಯ ಕಾರ್ಯಕಾರಿ ಸಮತಿ ಸದಸ್ಯರು, ವಿನಾಯಕ ಸಂಡೂರ್ ಜಿಲ್ಲಾ ಪ್ರಧಾನಕಾರ್ಯದರ್ಶಿಗಳು ಹಾಗು ಇತರರು ಉಪಸ್ಥಿತರಿದ್ದರು.