ಲೋಕದರ್ಶನ ವರದಿ
ಕಂಪ್ಲಿ 16: ಭೋವಿ ಹಿಂದುಳಿದ ಸಮಾಜವಾಗಿದೆ ಸಮಾಜದ ಸಮುದಾಯ ಭವನ ನಿಮರ್ಾಣಕ್ಕೆ ಶಾಸಕರು ಭರವಸೆ ನೀಡಿದಂತೆ 5ಲಕ್ಷ ರೂ.ಗಳ ಅನುದಾನ ನೀಡಬೇಕೆಂದು ಎಂದು ಇಲ್ಲಿನ ಭೋವಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಶೇಖಪ್ಪ ಒತ್ತಾಯಿಸಿದರು ಇಲ್ಲಿನ 10ನೇವಾರ್ಡ್ ಭೋವಿ ಕಾಲೋನಿಯಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತ್ಯುತ್ಸವ ನಿಮಿತ್ತ ನಾಮಫಲಕಕ್ಕೆ ಪೂಜೆ ಸಲ್ಲಿಸಿ, ಬೈಕ್ ರ್ಯಾಲಿಗೆ ಚಾಲನೆ ನೀಡಿ, ಭೋವಿ ಸಮುದಾಯ ಹಿಂದುಳಿದ ಸಮಾಜವಾಗಿದೆ. ಇಲ್ಲಿನ 5ನೇವಾಡರ್್ನಲ್ಲಿ ಸಮುದಾಯ ಭವನ ನಿಮರ್ಾಣ ಅನುದಾನ ಕೊರತೆಯಿಂದಸಮುದಾಯ ಭವನ ಅಪೂರ್ಣಗೊಂಡಿದೆ. ಶಾಸಕ ಜೆ.ಎನ್.ಗಣೇಶ್ ಅವರು ಸಮುದಾಯ ಭವನ ನಿರ್ಮಾಣಕ್ಕೆ 5ಲಕ್ಷ ರೂ.ಗಳ ಅನುದಾನ ಒದಗಿಸುವ ಭರವಸೆ ನೀಡಿದಂತೆ ಅನುದಾನ ಒದಗಿಸುವಲ್ಲಿ ಮುಂದಾಗಬೇಕು ಎಂದರು.
ಬೈಕ್ ರ್ಯಾಲಿ ಪ್ರಮುಖ ಬೀದಿಗಳಲ್ಲಿ ಸಾಗಿ ವಿ.ಶೇಖಪ್ಪ ಇವರ ಸಾಮಿಲ್ ಆವರಣದಲ್ಲಿ ಸಮಾವೇಶಗೊಂಡ ನಂತರ ಸಂಘಟನಾ ಸಭೆ ಜರುಗಿತು. ಸಂಘಟನಾ ಸಭೆಯಲ್ಲಿ ಭೋವಿ ಸಮಾಜದ ಪ್ರಮುಖರಾದ ನಂ.10 ಮುದ್ದಾಪುರವಿ.ವೆಂಕಟೇಶ್, ಗೋವಿಂದರಾಜ್, ವಿ.ಗೋವಿಂದರಾಜ್, ಸತ್ಯಪ್ಪ, ಶ್ರೀನಿವಾಸ್, ವಿ.ವೆಂಕಟರಮಣ, ಗುರ್ರಪ್ಪ, ವಿ.ಮೌನೇಶ್, ಸಂಜೀವಪ್ಪ, ವಿ.ನಾಗರಾಜ ರಾಮಸಾಗರ ಸೇರಿ ತಾಲ್ಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ ಭೋವಿ ಸಮಾಜದವರು ಪಾಲ್ಗೊಂಡಿದ್ದರು.