ಶ್ರೀಲಂಕಾ ನೂತನ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸೆ ಇಂದು ಪ್ರಮಾಣ

ಕೊಲಂಬೋ, ನ.21 ಶ್ರೀಲಂಕಾದ ನೂತನ ಪ್ರಧಾನಮಂತ್ರಿಯಾಗಿ ಗುರುವಾರ ಮಹೀಂದಾ ರಾಜಪಕ್ಸೆ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಅವರು ಉಸ್ತುವಾರಿ ಸಕರ್ಾರಕ್ಕೆ ದಾರಿ ಮಾಡಿಕೊಡಲು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ನಂತರ ಮಹಿಂದಾ ಅವರನ್ನು ಪ್ರಧಾನಿಯಾಗಿ ನೂತನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಘೋಷಿಸಿದ್ದರು. ಕಳೆದ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯ ನಂತರ ಉಸ್ತುವಾರಿ ಸಕರ್ಾರಕ್ಕೆ ದಾರಿ ಮಾಡಿಕೊಡಲು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ನಂತರ ಮಹೀಂದಾ ಅವರಿಗೆ ದಾರಿ ಸುಗಮವಾಯಿತು. ವಿಕ್ರಮಸಿಂಘೆ ಅವರ ರಾಜೀನಾಮೆಯನ್ನು ಔಪಚಾರಿಕವಾಗಿ ಸಲ್ಲಿಸಿದ ಬಳಿಕ ಇಂದು ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ ನಡೆಯಲಿದೆ.  ರಾಜಪಕ್ಸೆ 2005 ರಿಂದ 2015 ರವರೆಗೆ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಲಿ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರ ಹಿರಿಯ ಸಹೋದರರಾಗಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಅಧ್ಯಕ್ಷರಾಗಬಾರದು ಎಂಬ ಮಿತಿಯಿಂದಾಗಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪಧರ್ಿಸಿರಲಿಲ್ಲ.  ಪ್ರಧಾನಿಯಾಗಿ ರಾಜಕೀಯ ಜೀವನವನ್ನು ಪುನರಾರಂಭಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಸಂಸತ್ ಚುನಾವಣೆ ನಡೆಯುವ ಅವಧಿವರೆಗೂ 15 ಮಂತ್ರಿಗಳ ಉಸ್ತುವಾರಿ ಸಚಿವ ಸಂಪುಟವು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ. ಪ್ರಸ್ತುತ ಸಂಸತ್ತನ್ನು ಆಗಸ್ಟ್ 2015 ರಲ್ಲಿ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಅದರ ಅವಧಿ ಮುಗಿಯುವ ಆರು ತಿಂಗಳ ಮೊದಲು ಮಾಚರ್್ ವರೆಗೆ ಈ ಸಂಸತ್ ಅನ್ನು ವಿಸಜರ್ಿಸಲಾಗುವುದಿಲ್ಲ. ಆದಾಗ್ಯೂ, ಬಹುಮತದ ನಿರ್ಣಯದ ಮೂಲಕ ಶಾಸಕರು ಸಂಸತ್ ಅನ್ನು ವಿಸಜರ್ಿಸುವ ನಿಧರ್ಾರ ಕೈಗೊಳ್ಳಬಹುದು.