ವಾವಿ ಸಂಜಿಲ್ಲಾ ಆಸ್ಪತ್ರೆ-ಸಖಿ ಹಾಗೂ ಶಕ್ತಿ ಕೇಂದ್ರಕ್ಕೆ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ

ವಾವಿ ಸಂಜಿಲ್ಲಾ ಆಸ್ಪತ್ರೆ-ಸಖಿ  ಹಾಗೂ ಶಕ್ತಿ ಕೇಂದ್ರಕ್ಕೆ ಅಧ್ಯಕ್ಷೆ ಡಾ.ನಾಗಲಕ್ಷ್ಮೀ  ಚೌಧರಿ ಭೇಟಿ President Dr. Nagalakshmi Chaudhary visits Vavi Sanjilla Hospital-Sakhi and Shakti Kendra

ವಾವಿ ಸಂಜಿಲ್ಲಾ ಆಸ್ಪತ್ರೆ-ಸಖಿ  ಹಾಗೂ ಶಕ್ತಿ ಕೇಂದ್ರಕ್ಕೆ ಅಧ್ಯಕ್ಷೆ ಡಾ.ನಾಗಲಕ್ಷ್ಮೀ  ಚೌಧರಿ ಭೇಟಿ 

ಹಾವೇರಿ.ಆ.07(ಕರ್ನಾಟಕ ವಾರ್ತೆ): ಆಸ್ಪತ್ರೆಗೆ ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಹಾಗೂ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸೂಚನೆ ನೀಡಿದರು. 

ಹಾವೇರಿ ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ ಹಾಗೂ ಸಖಿ ಒನ್ ಸ್ಟಾಪ್ ಸೆಂಟರಗೆ ಗುರುವಾರ ಭೇಟಿ ನೀಡಿ, ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ಮಹಿಳೆ ಹಾಗೂ ಮಕ್ಕಳನ್ನು ಆತ್ಮೀಯವಾಗಿ ಮಾತನಾಡಿಸಿದ ಅವರು, ವೈದ್ಯರು ಚನ್ನಾಗಿ ಚಿಕಿತ್ಸೆ ಕೊಡುತ್ತಾರೆಯೇ?,  ಸುಮ್ಮನೆ ಅಲೆದಾಡಿಸುತ್ತಾರಾ?  ಎಂದು  ಮಹಿಳೆಯರನ್ನು ಪ್ರಶ್ನಿಸಿದರು. ಆಗ ಮಹಿಳೆಯರು ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಾರೆ ಹಾಗೂ ಹಾಗೆಸುಮ್ಮನೆ ಅಲೆದಾಡಿಸುವುದಿಲ್ಲ ಎಂದು ಅಧ್ಯಕ್ಷರಿಗೆ ಹೇಳಿದರು.   

ಶಸ್ತ್ರ ಚಿಕಿತ್ಸೆ ವಿಭಾಗ, ಹೆರಿಗೆ ವಿಭಾಗಕ್ಕೆ ತೆರಳಿ, ಬಾಣಂತಿ ಹಾಗೂ ಮಕ್ಕಳ ಆರೋಗ್ಯ ವಿಚಾರಿಸಿದರು, ಹಸುಗೂಸುಗಳನ್ನು ಎತ್ತಿಕೊಂಡು ಮುದ್ದಾಡಿದರು. ಮಾತೃ ವಂದನಾ ಸೌಲಭ್ಯ ಪಡೆಯುತ್ತಿರುವ ಬಗ್ಗೆ ವಿಚಾರಿಸಿದರು ಹಾಗೂ ಮಕ್ಕಳನ್ನು ಚನ್ನಾಗಿ ಓದಿ ಸುವಂತೆ ತಾಯಂದಿರಿಗೆ ಸಲಹೆ ನೀಡಿದರು. 

ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟ ಕುಡಿಯುವ ನೀರು ಪೂರೈಕೆಮಾಡುವಂತೆ ಸೂಚಿಸಿದ ಅವರು, ಶೌಚಾಲಯ ಸ್ವಚ್ಛತೆ ಪರೀಶೀಲನೆ ಮಾಡಿದರು ಹಾಗೂ ಶೌಚಾಲಯಗಳಲ್ಲಿ  ನಿರಂತರ ನೀರು ಸರಬರಾಜು ಕುರಿತು ಪರೀಶೀಲಿಸಿದರು.   

ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ  ದೌರ್ಜನ್ಯ, ಪೋಕ್ಸೋ ಪ್ರಕರಣ ಸೇರಿದಂತೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸಲು  ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಶಕ್ತಿ ಸದನಕ್ಕೆ ಭೇಟಿ: ಶಿವಾಜಿ ನಗರದಲ್ಲಿರುವ ನೊಂದ ಮಹಿಳೆಯರು ವಾಸವಿರುವ ಶಕ್ತಿ ಸಧನಕ್ಕೆ ಭೇಟಿ ನೀಡಿ, ನೊಂದ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ ಅವರು, ಧೈರ್ಯವಾಗಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದರು.  

  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ. ಆರ್‌. ಹವನೂರ, ಡಾ. ಚುರ್ಚಿಹಾಳ, ಶಕ್ತಿ ಸದನ ಶ್ರೀಮತಿ ಪರಿಮಳಾ ಜೈನ್ ಇತರರು ಉಪಸ್ಥಿತರಿದ್ದರು.