ರಾಜ್ಯದ 19 ಮಂದಿ ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಬೆಂಗಳೂರು, ಜ.25,ಗಣರಾಜ್ಯೋತ್ಸವ ಅಂಗವಾಗಿ ನೀಡುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ.ಬಿಎಂಟಿಎಫ್‌ನ ಎಸ್‌ಪಿ  ಓಬಳೇಶ್ ನಂಜಪ್ಪ ಬೇಕಲ, ಕಮಾಂಡೆಂಟ್ ಮಹದೇವ ಪ್ರಸಾದ್ ಕಂಬಳಿ ಮಾದಪ್ಪ, ಮಾರತ್‌ಹಳ್ಳಿ  ಎಸಿಪಿ ಪಂಪಾಪತಿ ಮುದಲಾಪುರ್, ವಿಜಯನಗರ ಎಸಿಪಿ ಧರ್ಮಪ್ಪ, ಸಿಐಡಿಯ ಡಿವೈಎಸ್‌ಪಿ  ಚಂದ್ರಶೇಖರ ಶಿರಗಲೆ, ಲೋಕಾಯುಕ್ತದ ಡಿವೈಎಸ್‌ಪಿಗಳಾದ ಶಂಕರ್ ಮಲ್ಲಿಕಾರ್ಜುನಪ್ಪ,  ಸಿದ್ದರಾಜು, ಕರಿಯಪ್ಪ ಅಮ್ಮದ ಗಣಪತಿ ಅವರು ರಾಷ್ಟ್ರಪತಿ ಪದಕಕ್ಕೆ ಪಾತ್ರರಾಗಿದ್ದಾರೆ.

ಕಲಬುರಗಿಯ  ಡಿವೈಎಸ್‌ಪಿ ಸಂಗಪ್ಪ ಹುಲ್ಲೂರು, ರಾಮನಗರದ ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಸಿಐಡಿಯ  ಪೊಲೀಸ್ ಇನ್ಸ್‌ಪೆಕ್ಟರ್ ಶಂಕರಪ್ಪ ಗೋವಿಂದಯ್ಯ, ಉಡುಪಿ ಎಸಿಬಿಯ ಇನ್ಸ್‌ಪೆಕ್ಟರ್ ಸತೀಶ್  ಸುಬ್ಬಣ್ಣ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಬಾಬುಸಿಂಗ್ ಹನುಮಂತ್  ಸಿಂಗ್ ಕಿತ್ತೂರು, ಬಸವನಗುಡಿ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಶಿವಯ್ಯ ಸುಕುಮಾರ್,  ಡಿ.ಆರ್. ಮೈಸೂರಿನ ಎಆರ್‌ಎಸ್‌ಐ ರಾಜ್‌ಕುಮಾರ್, ಬೆಂಗಳೂರು ಗುಪ್ತದಳದ ಮುಖ್ಯಪೇದೆಗಳಾದ  ಶಿವಕುಮಾರ್, ನಂಜುಂಡಯ್ಯ ಚಂದ್ರಯ್ಯ. ಎಸ್‌ಸಿಆರ್‌ಬಿಯ ರಂಗನಾಥ್ ರಂಗಶ್ಯಾಮಯ್ಯ ಅವರಿಗೆ  ರಾಷ್ಟ್ರಪತಿ ಪದಕ ನೀಡಲಾಗಿದೆ.