ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಲಿ: ಕೃಷಿ ಅಧಿಕಾರಿ ಯಮನಪ್ಪ
Preserving soil health should be everyone's primary duty: Agriculture Officer Yamanappa
ಲೋಕದರ್ಶನ ವರದಿ
ಬೈಲಹೊಂಗಲ 25: ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಮುಂದಿನ ಪೀಳಿಗೆಗಾಗಿ ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಕೃಷಿ ಅಧಿಕಾರಿ ಯಮನಪ್ಪ ಆರ್.ಎಮ್ ನುಡಿದರು. ಅವರು ಬೈಲಹೊಂಗಲ ಸಮೀಪದ ತಿರುಳಗನ್ನಡ ನಾಡು ವಕ್ಕುಂದದ ಸಂಗಟಿಕೊಫ್ಪ ಬಸವೇಶ್ವರ ದೇವಸ್ಥಾನದಲ್ಲಿ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ಬಾರತ ಸರಕಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಕೃಷಿ ಇಲಾಖೆ ಬೈಲಹೊಂಗಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕೃಷಿಯಲ್ಲಿ ಪಿಡೇನಾಷಕಗಳ ಮತ್ತು ರಾಸಾಯನಿಕ ಗೊಬ್ಬರಗಳ ಸುರಕ್ಷಿತ ಹಾಗೂ ವಿವೇಚನಾತ್ಮಕ ಬಳಕೆ ಕುರಿತು ರೈತರಿಗೆ ಏರಿ್ಡಸಿದ್ದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಕೃಷಿ ಭೂಮಿಯ ಆರೋಗ್ಯ ಕಾಪಾಡಲು ರಾಸಾಯನಿಕ ಗೊಬ್ಬರ ಹಾಗೂ ಪಿಡೇನಾಷಕಗಳನ್ನು ಹಿತ ಮಿತವಾಗಿ ಬಳಕೆ ಮಾಡಿ ಹಣ ಉಳಿಸಿ, ಸಾವಯವ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿ ಸಮಾಜಕ್ಕೆ ವಿಷ ಮುಕ್ತ ಆಹಾರ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ರೈತರ ಪಾತ್ರ ಹಿರಿದಾಗಿದೆ ಎಂದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕೆ.ಎಲ್.ಇ ಸಂಸ್ಥೆಯ ಕೃಷಿ ಮಹಾವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ: ನಿಂಗರಾಜ ಬೆಳಗಲ್ ಮಾತನಾಡಿ ಕೀಟನಾಷಕಗಳನ್ನು ಬಳಸುವ ಪೂರ್ವ, ಬಳಸುವಾಗ ಮತ್ತು ಬಳಸಿದ ನಂತರ ರೈತರು ತಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಬೆಳಯ ಸಂರಕ್ಷಣೆಯ ಜೊತೆಗೆ ನಮ್ಮ ಕುಟುಂಬಕ್ಕಾಗಿ ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಆರೋಗ್ಯ ಸುರಕ್ಷತೆಗಾಗಿ ಬಳಸಬೇಕಾದ ಕ್ರಮಗಳನ್ನು ಪ್ರೊಜೆಕ್ಟರ್ ಮುಖಾಂತರ ರೈತರಿಗೆ ಮಣಮುಟ್ಟುಂತೆ ತಿಳಿಸಿಕೊಟ್ಟರು. ಅತಿಥಿಗಳಾಗಿ ಆಗಮಿಸಿದ್ದ ಗ್ರಾಮದ ರೈತಮುಖಂಡ ಅಶೋಕ ಜಂತಿ ಹಾಗೂ ಶಿಕ್ಷಣ ಪ್ರೇಮಿ ನಾರಾಯಣ ನಲವಡೆ ಮಾತನಾಡುತ್ತಾ ರೈತರಿಗಾಗಿ ನಮ್ಮ ಗ್ರಾಮಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳೇ ನಮ್ಮ ಗ್ರಾಮಕ್ಕೆ ಆಗಮಿಸಿ ರೈತರನ್ನು ಸೇರಿಸಿ ಕಾರ್ಯಕ್ರಮದ ಮೂಲಕ ನಮ್ಮ ರೈತರಿಗೆ ಪೀಡೆನಾಷಕಗಳ ಹಾಗೂ ರಾಸಾಯನಿಕ ಬಳಕೆ ಹೇಗೆ ಕಡಿಮೆ ಮಾಡಬೇಕು ಮತ್ತು ಸಾವಯವದ ಮೂಲಕ ಖರ್ಚು ಕಡಿಮೆ ಮಾಡಿ ಹೇಗೆ ರೈತರು ಇಳುವರಿ ಹೆಚ್ಚಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಲು ನಿರಂತರ ಶ್ರಮಿಸುತ್ತಿರುವ ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ಹಿರಿಯ ರೈತರಾದ ಅಶೋಕ ಪಾಟೀಲ ವಹಿಸಿದ್ದರು. ಪೊರೆ್ಟವಾ ಕಂಪನಿಯ ಪ್ರತಿನಿಧಿಗಳು, ಕೃಷಿ ಅಧಿಕಾರಿ ಬಿ.ಕೆ.ಜಮಾದಾರ, ಬಸವರಾಜ ಸೇರಿದಂತ ನೂರಾರು ರೈತರು ಮುಂತಾದವರು ಉಪಸ್ಥಿತರಿದ್ದರು. ಚಂದ್ರಕಾಂತ ಮರಡಿ ಸ್ವಾಗತಿಸಿದರು. ಗಂಗಾಧರ ಬಸರಖೋಡ ನಿರೂಪಿಸಿ ವಂದಿಸಿದರು.
ಪತ್ರಕರ್ತರ ಸೋಗಿನಲ್ಲಿ ಬಂದು 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ 