ರಂಗಭೂಮಿ ಕಲೆ ಉಳಿಸಿ ಬೆಳೆಸಿ : ಡಾ.ಕೆ.ಎಂ.ಸೈಯದ್
Preserve and develop the art of theatre: Dr. K.M. Syed
ಕೊಪ್ಪಳ 28: ರಂಗಭೂಮಿ ಕಲೆ ಜೀವಂತ ಕಲೆಯಾಗಿದ್ದು ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ.ಕೆ.ಎಂ.ಸೈಯದ್ ಹೇಳಿದರು.ಅವರು ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ ಶಾಸ್ತ್ರಿ ನಗರದಲ್ಲಿ ರಾಮನವಮಿ ನಿಮಿತ್ತ ಶ್ರೀ ಮಾರುತೇಶ್ವರ ಜಾತ್ರಾ ಅಂಗವಾಗಿ ಧರ್ಮದ ನುಡಿ ಬೆಂಕಿಯ ಕಿಡಿ ನಾಟಕವನ್ನು ಉದ್ಘಾಟಿಸಿ ಮಾತನಾಡಿ ರಂಗಭೂಮಿ ಕಲೆ ಗಂಡು ಮೆಟ್ಟಿನ ಕಲೆಯಾಗಿದ್ದು ಉತ್ತರ ಕರ್ನಾಟಕದಲ್ಲಿ ಈ ಕಲೆ ಜೀವಂತ ಕಲೆಯಾಗಿದ್ದು, ರಂಗಭೂಮಿ ಕಲೆ ಸಾಮಾಜಿಕ ಸಂದೇಶ ನೀಡುತ್ತದೆ, ಈ ಕಲೆಯನ್ನು ನೋಡಿ ಸಂತಸ ಪಡುತ್ತಾರೆ, ಗ್ರಾಮೀಣ ಭಾಗದಲ್ಲಿ ಈ ಕಲೆಯನ್ನು ಪ್ರದರ್ಶಿಸುವ ಮೊದಲೇ ಸಾಕಷ್ಟು ತಯಾರಿ ನಡೆಸಿ ಪ್ರದರ್ಶನ ಮಾಡಲಾಗುತ್ತದೆ,
ರಂಗಭೂಮಿ ಗಟ್ಟಿ ಕಲೆಯನ್ನು ಇಂದು ಎಲ್ಲರೂ ಉಳಿಸಿ ಬೆಳೆಸಬೇಕಾಗಿದೆ ಎಂದರು.ನಾಟಕ ಪ್ರಧಾನ ಪ್ರದರ್ಶನಕ್ಕೆ ಮಾಜಿ ಮಂಡಲ ಪ್ರಧಾನ ಹುಲುಗಪ್ಪ ಗಡಾದ ಜ್ಯೋತಿ ಬೆಳಗಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಈಶಪ್ಪ ಹಿಟ್ನಾಳ್ , ಬಸವರಾಜ್ ಭಜಂತ್ರಿ, ಬಸವರಾಜ್ ಕರ್ಕಿಹಳ್ಳಿ,ವೀರೇಶ್ ಅಗಡಿ, ನಾಗರಾಜ್ ವಡ್ಡರ್, ನಾಟಕದ ಕವಿ ಹಾಲಯ್ಯ ಹುಡೇಜಾಲಿ, ವಿ ಎಸ್ ಎಸ್ ಎನ್ ಅಧ್ಯಕ್ಷ ಕೆಂಚಪ್ಪ ಹಿಟ್ನಾಳ್, ಉಪಾಧ್ಯಕ್ಷ ವಲೀಸಾಬ ಪೊಲೀಸ್ ಪಾಟೀಲ್, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಜಂಬಣ್ಣ ಹೂಗಾರ್, ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು, ಗ್ರಾಮದ ಮುಖಂಡರು ಗುರುಹಿರಿಯರು ಯುವಕ ಮಿತ್ರರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 